ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಮತ್ತೆ ಶುರುವಾಗಲಿದೆ ಬಿಗ್‍ಬಾಸ್! `ಕಿಚ್ಚ-46′ ಕಣದಿಂದ ನೇರವಾಗಿ ದೊಡ್ಮನೆಗೆ ಎಂಟ್ರಿ?

Vishalakshi Pby Vishalakshi P
10/08/2023
in Majja Special
Reading Time: 1 min read
ಮತ್ತೆ ಶುರುವಾಗಲಿದೆ ಬಿಗ್‍ಬಾಸ್! `ಕಿಚ್ಚ-46′ ಕಣದಿಂದ ನೇರವಾಗಿ ದೊಡ್ಮನೆಗೆ ಎಂಟ್ರಿ?

ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಬಿಗ್‍ಬಾಸ್ ಕೂಡ ಒಂದು. ಈಗಾಗಲೇ ಒಂಭತ್ತು ಸೀಸನ್‍ಗಳನ್ನ ಯಶಸ್ವಿಯಾಗಿ ಪೂರೈಸಿರೋ ಕನ್ನಡ ಬಿಗ್‍ಬಾಸ್ ಶೋ ಈಗ 10ನೇ ಸರಣಿಗೆ ಸಜ್ಜಾಗುತ್ತಿದೆ. ಈ ಮನರಂಜನೆಯ ಅರಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿಕೊಡ್ತಾರೋ ಗೊತ್ತಿಲ್ಲ. ಬಟ್, ಮಾಣಿಕ್ಯನ ಗ್ರ್ಯಾಂಡ್ ಎಂಟ್ರಿಯಂತೂ ಪಕ್ಕಾ. ಎಂದಿನಂತೆ ಸ್ಯಾಂಡಲ್‍ವುಡ್ ಬಾದ್ ಷಾ ಕಿಚ್ಚ ಸುದೀಪ್ ದೊಡ್ಮನೆ ಪ್ರವೇಶಿಸಲಿದ್ದಾರೆ, ಬಿಗ್ ಬಾಸ್ ಶೋ ಹೋಸ್ಟ್ ಮಾಡಲಿದ್ದಾರೆ.

ಅಚ್ಚರಿ ಅಂದರೆ ಹಲವು ಭಾಷೆಗಳಲ್ಲಿ ಬಿಗ್‍ಬಾಸ್ ನಿರೂಪಕರು ಬದಲಾಗಿದ್ದಾರೆ. ಆದರೆ, ಕನ್ನಡ ಬಿಗ್ ಬಾಸ್ ಶೋನಲ್ಲಿ ಮಾತ್ರ ಆರಂಭದಿಂದಲೂ ಕಿಚ್ಚ ಸುದೀಪ್ ಅವ್ರೇ ನಿರೂಪಣೆಯ ಜವಬ್ದಾರಿ ಹೊತ್ತಿದ್ದಾರೆ.ಈಗ ಸೀಸನ್ 10ರ ಮೂಲಕ ಮತ್ತೊಮ್ಮೆ ಕನ್ನಡಿಗರನ್ನ ರಂಜಿಸಲು ರನ್ನನ ಆಗಮನವಾಗಲಿದೆ. ಸದ್ಯ, ತಮ್ಮ 46ನೇ ಚಿತ್ರದ ಶೂಟಿಂಗ್‍ನಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ಚೆನ್ನೈನ ಮಹಾಬಲಿಪುರಂನಲ್ಲಿ ಮಾಣಿಕ್ಯನ ಮುಂದಿನ ಸಿನಿಮಾ ಶೂಟಿಂಗ್ ನಡೀತಿದ್ದು, ಸೆಪ್ಟೆಂಬರ್ ಕೊನೆಯ ವಾರದೊತ್ತಿಗೆ ಕುಂಬಳಕಾಯಿ ಹೊಡೆಯಲು `ಕಿಚ್ಚ-46′ ಟೀಮ್ ಪ್ಲ್ಯಾನ್ ಮಾಡಿದೆ. ಅನಂತರ 3 ಸಿನಿಮಾಗಳು ಲೈನಪ್ ಆಗಿದ್ದು, ಆ ಸಿನಿಮಾದ ಶೂಟಿಂಗ್ ಹೊರಡೋದಕ್ಕೂ ಮುನ್ನ ಬಿಗ್‍ಬಾಸ್ ಶೋನ ಮುಗಿಸಿಕೊಡುವುದಕ್ಕೆ ಕಿಚ್ಚ ತೀರ್ಮಾನಿಸಿರೋದಾಗಿ ಸುದ್ದಿಯಿದೆ.

ಕಳೆದ ಬಾರಿ ಬಿಗ್ಬಾಸ್ ಒಟಿಟಿ ಮೊದಲ ಸೀಸನ್ ಸಹ ಪ್ರಾರಂಭವಾಗಿದ್ದು ಅದನ್ನೂ ಕೂಡ ಸುದೀಪ್ ಅವರೇ ನಿರೂಪಣೆ ಮಾಡಿದ್ದರು. ಈ ಬಾರಿ ಬಿಗ್​ಬಾಸ್ ಒಟಿಟಿ ಎರಡನೇ ಸೀಸನ್ ಜೊತೆ ಬಿಗ್​ಬಾಸ್ ಸೀಸನ್ 10 ಎರಡೂ ಸಹ ಒಂದರ ಬಳಿಕ ಒಂದು ನಡೆಸಬೇಕಿರುವುದು ಕೊಂಚ ಚಾಲೆಂಜಿಂಗ್ ಆಗಿದೆ.ಕೆಲ ಮೂಲಗಳ ಪ್ರಕಾರ ಈಗಾಗಲೇ ಬಿಗ್​ ಬಾಸ್ ಹೊಸ ಸೀಸನ್​ಗೆ ತಯಾರಿ ಆರಂಭವಾಗಿದೆ. ಬಿಗ್ ಬಾಸ್ ಒಟಿಟಿಗಾಗಿ ಸ್ಪರ್ಧಿಗಳ ಹುಡುಕಾಟ, ಸಂದರ್ಶನ, ಚರ್ಚೆ, ಒಪ್ಪಂದ ಕಾರ್ಯಗಳು ಶುರುವಾಗಿದೆಯಂತೆ. ಹೊಸ ಸೆಟ್ ನಿರ್ಮಾಣ ಹಾಗೂ ಚಿತ್ರೀಕರಣಗಳು ಪ್ರಾರಂಭಗೊಳ್ಳಲಿವೆ. ಹಿಂದಿ ಮಾದರಿಯಲ್ಲಿಯೇ ಬಿಗ್​ಬಾಸ್ ಟಿವಿ ಸೀಸನ್ ನಡೆದ ಬಳಿಕ ಬಿಗ್ಬಾಸ್ ಒಟಿಟಿ ಸೀಸನ್ 2ರ ಆರಂಭ ಆಗುವ ಸಾಧ್ಯತೆ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್​ನಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿ ಶುರುವಾಗಲಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
‘ಘೋಸ್ಟ್‌’ನಲ್ಲಿ ಮಲಯಾಳಂ ನಟನ ಕನ್ನಡ ಪ್ರೇಮ; ಡಬ್ಬಿಂಗ್ ವಿಡಿಯೋಗೆ ನೆಟ್ಟಿಗರ ಶಹಬ್ಬಾಸ್ !

'ಘೋಸ್ಟ್‌'ನಲ್ಲಿ ಮಲಯಾಳಂ ನಟನ ಕನ್ನಡ ಪ್ರೇಮ; ಡಬ್ಬಿಂಗ್ ವಿಡಿಯೋಗೆ ನೆಟ್ಟಿಗರ ಶಹಬ್ಬಾಸ್ !

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.