ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ತಯಾರಾಗ್ತಿರೋ KD ಸಿನೆಮಾ ಹಲವು ಕಾರಣಗಳಿಂದ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಸಿನೆಮಾದ ಮೂಲಕ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡಲಿದ್ದಾರೆ.
ಹೌದು 17 ವರ್ಷಗಳ ನಂತರ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡ್ತೀರೋ ಸಂಗತಿ ಈಗಾಗಲೇ ಚಿತ್ರತಂಡ ಹೇಳಿಕೊಂಡು ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಾಗಿದೆ.
KD ಸಿನಿಮಾದ ಸತ್ಯವತಿ ಲುಕ್‌ನಿಂದ ಈಗಾಗಲೇ ಹೈಪ್ ಕ್ರಿಯೆಟ್ ಮಾಡಿದ್ದ ಕಡಲಬೆಡಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿ ಕೊಟ್ಟಿದ್ದರು. ಈಗ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಮತ್ತೆ ಬಿ ಟೌನ್ ನಿಂದ ಸಿಲಿಕಾನ್ ಸಿಟಿ ಗೆ ಹಾರಿ ಬಂದಿದ್ದಾರೆ.
ಈ ಹಿಂದೆ ಕರಾವಳಿ ಕುವರಿ ಶಿಲ್ಪಾ ಶೆಟ್ಟಿ ಅವರು ಕ್ರೇಜಿಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗುವ ಮೂಲಕ ಕನ್ನಡ ಸಿನಿಪ್ರಿಯರ ಮನಸೋಳಗೆ ನುಗ್ಗಿದವರು. ಕನ್ನಡ ಚಿತ್ರಗಳ ಮೇಲೆ ವಿಶೇಷ ಒಲವಿರುವ ನಟಿ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ೧೭ ವರ್ಷಗಳ ನಂತ್ರ ದ್ರುವ ಸರ್ಜಾ ನಟನೆಯ KD ಮೂಲಕ ಮತ್ತೆ ಆಕ್ಟೀವ್ ಆಗ್ತಿದ್ದಾರೆ.
ಚಿತ್ರದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗೋದ್ರೊಂದಿಗೆ ಶಿಲ್ಪಾ ಶೆಟ್ಟಿ ಪಾತ್ರ ಸಖತ್ ಪವರ್ ಫುಲ್ ಆಗಿರಲಿದೆ ಅನ್ನೋದು ಕನ್ಫರ್ಮ್ ಆಗಿದೆ. ನಿರ್ದೇಶಕ ಪ್ರೇಮ್ ಕಥೆ ಹೇಳಿದಾಗಲೇ ಖುಷಿಯಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಕರಾವಳಿ ಬ್ಯೂಟಿ ಸದ್ಯ ೨ ನೇ ಹಂತದ ಚಿತ್ರೀಕರಣಕ್ಕೆ ಬೆಂಗಳೂರಿಗೆ ಬಂದು ತಲುಪಿದ್ದಾರೆ. ಇನ್ನು ಚಿತ್ರದ ಕುರಿತು ಏನೇನು ಅಪ್ಡೇಟ್ ಹೊರಬೀಳಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ.