`ಖುಷಿ’… ಸೌತ್ ಸುಂದರಿ ಸಮಂತಾ ಹಾಗೂ ರೌಡಿಬಾಯ್ ವಿಜಯ್ ದೇವರಕೊಂಡ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ. ಟ್ರೇಲರ್ ಮತ್ತು ಹಾಡುಗಳ ಮೂಲಕ ಸಿನಿಮಾ ಪ್ರೇಮಿಗಳನ್ನ ಹುಚ್ಚೆಬ್ಬಿಸಿರೋ ಖುಷಿ ಸಿನಿಮಾ, ನಟಿ ಸಮಂತಾ ಮಾಜಿ ಪತಿಯನ್ನ ಕೆರಳಿಸಿತಾ? ಹೀಗೊಂದು ಪ್ರಶ್ನೆ ಏಕಾಏಕಿ ಹುಟ್ಟಿಕೊಂಡಿದೆ. ಮತ್ತದಕ್ಕೆ ಕಾರಣವೂ ಇದೆ. ಹೌದು, ಇತ್ತೀಚೆಗೆ ಆಪ್ತರ ಸಿನಿಮಾ ನೋಡಲಿಕ್ಕೆಂದು ನಟ ಅಕ್ಕಿನೇನಿ ನಾಗಚೈತನ್ಯ ಮಾಲ್‍ಗೆ ಹೋಗಿದ್ದರಂತೆ. ಆ ಸಮಯದಲ್ಲಿ ಇಂಟರ್‍ವಲ್ ಟೈಮ್‍ನಲ್ಲಿ `ಖುಷಿ’ ಸಿನಿಮಾದ ಟ್ರೇಲರ್ ಪ್ಲೇ ಆಯ್ತಂತೆ. ಆಗ ಬಿಗ್‍ಸ್ಕ್ರೀನ್ ಕಡೆ ಕಣ್ಣೆತ್ತಿಯೂ ನೋಡದೇ ಚೈತನ್ಯ ಥಿಯೇಟರ್ ನಿಂದ ಹೊರಬಂದರಂತೆ. ಹೀಗೊಂದು ಅಂತೆಕಂತೆ ಸುದ್ದಿ ಟಾಲಿವುಡ್ ಫಿಲ್ಮ್‍ನಗರದಲ್ಲಿ ಜೋರಾಗಿ ಕೇಳಿಬರ್ತಿದೆ. ಅಲ್ಲಿನ ಕೆಲ ವೆಬ್‍ಸೈಟ್‍ಗಳು ಈ ಕುರಿತು ವರದಿ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಆಗಿವೆ.
ಅಷ್ಟಕ್ಕೂ, ಖುಷಿ ಟ್ರೇಲರ್ ನೋಡದೇ ನಟ ಅಕ್ಕಿನೇನಿ ನಾಗಚೈತನ್ಯ ಥಿಯೇಟರ್ ನಿಂದ ಎದ್ದುಬಂದಿದ್ದು ನಿಜಾನಾ? ರಿಯಲ್ಲಾಗಲ್ಲ ರೀಲ್‍ನಲ್ಲೂ ಕೂಡ ಮಾಜಿ ಪತ್ನಿಯ ಮುಖ ನೋಡಬಾರದು ಅಂತ ಚೈ ಫಿಕ್ಸಾಗಿರೋದು ಸತ್ಯಾನಾ? ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಆದರೆ, ಈ ಸುದ್ದಿ ಮಾತ್ರ ತೆಲುಗು ಗಾಸಿಪ್ ಅಂಗಳದಲ್ಲಿ ಚಾಯ್ ಪೇ ಚರ್ಚೆಯಾಗ್ತಿದೆ. ಬಟ್ ಸ್ಯಾಮ್ ಹಾಗೂ ಚೈ ಇಬ್ಬರು ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಘೋಷಿಸಿ ಮುಂದಿನ ದಾರಿ ಕಂಡುಕೊಂಡಿದ್ದಾರೆ. ಮಾರ್ಗಮಧ್ಯೆ ಸ್ಯಾಮ್ ಮಯೋಸೈಟೀಸ್ ಎಂಬ ಮಾರಣಾಂತಿಕ ಖಾಯಿಲೆಗೆ ತುತ್ತಾಗಿದ್ದಾರೆ. ದೇಶ-ವಿದೇಶ ಸುತ್ತಿ ಚಿಕಿತ್ಸೆ ಪಡೆದುಕೊಂಡು, ಕಂಡ ಕಂಡ ದೇವರಿಗೆ ಹರಕೆ ಕಟ್ಟಿಕೊಂಡು ಈಗೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ `ಖುಷಿ’ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಸೆಪ್ಟೆಂಬರ್ 01ರಂದು ವಲ್ಡ್ ವೈಡ್ ತೆರೆಕಾಣ್ತಿದೆ.
ಖುಷಿ ಒಂದು ರೊಮ್ಯಾಂಟಿಕ್ ಎಂಟರ್ ಟೈನರ್ ಚಿತ್ರ. ಶಿವನಿರ್ವಾಣ ನಿರ್ದೇಶನ ಸಿನಿಮಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಇದೇ ಮೊದಲ ಭಾರಿಗೆ ವಲ್ರ್ಡ್ ಫೇಮಸ್ ಲವ್ವರ್ ವಿಜಯ್ ಹಾಗೂ ಸ್ಯಾಮ್ ಜೊತೆಯಾಗಿದ್ದಾರೆ. ಟ್ರೇಲರ್ ಹಾಗೂ ಹಾಡುಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿನಾ ನೋಡಿ ಕಲಾಭಿಮಾನಿಗಳು ಕಳೆದೋಗಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲಿಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ. ಇನ್ನೇನು ಎರಡ್ಮೂರು ದಿನದಲ್ಲಿ ಪಿಕ್ಚರ್ ರಿಲೀಸ್ ಆಗ್ತಿದೆ. ಸ್ಯಾಮ್ ಅಂಡ್ ವಿಜಯ್ ಜೋಡಿ ಕಮಾಲ್ ಮಾಡುತ್ತಾ? ಸೋಲಿನ ಸುಳಿಗೆ ಸಿಕ್ಕಿರೋ ಲೈಗರ್ ಗೆ `ಖುಷಿ’ ಸಿನಿಮಾದಿಂದ ಬಿಗ್ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.