ಬಾಲ ಕಲಾವಿದರಾಗಿ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಮಿಂಚಿದ ಎಷ್ಟೋ ಪ್ರತಿಭೆಗಳಿಗೆ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವ ಅವಕಾಶ ಸಿಕ್ಕಿದೆ. ಕೆಲವರಿಗೆ ಸ್ಟಾರ್ ಪಟ್ಟಕ್ಕೇರಿ ರಜತಪರದೆಯ ಮೇಲೆ ರಾರಾಜಿಸುವ ಅದೃಷ್ಟವೂ ಒದಗಿಬಂದಿದೆ. ಹೀಗ್ಯಾಕೆ ಈ ಮಾತು ಅಂದರೆ, ಇಷ್ಟು ದಿನ ಸ್ಮಾಲ್ ಸ್ಕ್ರೀನ್ ಹಾಗೂ ಬಿಗ್‍ಸ್ಕ್ರೀನ್‍ನಲ್ಲಿ ಬಾಲಕಲಾವಿದೆಯಾಗಿ ಕಾಣಿಸಿಕೊಳ್ತಿದ್ದ ಅಂಕಿತ ಜಯರಾಮ್ ಈಗ ನಾಯಕಿಯಾಗಿ ಮೆರವಣಿಗೆ ಹೊರಡಲು ಸಜ್ಜಾಗಿದ್ದಾರೆ. `ಕಾಗದ’ ಹೆಸರಿನ ಚಿತ್ರದ ಮೂಲಕ ನಾಯಕಿಯಾಗಿ ಅಂಕಿತಾ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.
ಯಸ್, ಇಲ್ಲಿತನಕ ಅಂಕಿಯ ಬಹುಬೇಡಿಕೆಯ ಬಾಲ ಕಲಾವಿದೆಯಾಗಿದ್ದಳು. ಶಿವಣ್ಣ, ಪುನೀತ್, ಡಾಲಿ ಧನಂಜಯ್, ವಿಜಯ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ಹಲವು ಸ್ಟಾರ್‍ಗಳ ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚು ಹರಿಸಿದ್ದಳು. ಆದ್ರೀಗ, ಹೀರೋಯಿನ್ನಾಗಿ ಸಿಲ್ವರ್‍ಸ್ಕ್ರೀನ್‍ಗೆ ಪರಿಚಯಗೊಳ್ತಿದ್ದಾಳೆ. `ಕಾಗದ’ ಚಿತ್ರಕ್ಕೆ ನಾಯಕಿಯಾಗಿದ್ದು, ಆದಿತ್ಯನಿಗೆ ಜೋಡಿಯಾಗಿದ್ದಾಳೆ. ಲವ್ ಮಾಕ್ಟೇಲ್ ಜೋಡಿ ಕೈಯಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭಹಾರೈಸಿದ್ದು, ಮೊದಲ ನೋಟದಲ್ಲೇ ಎಲ್ಲರ ಮನಸೂರೆಗೊಳ್ಳುವಲ್ಲಿ ಅಂಕಿತಾ ಯಶಸ್ವಿಯಾಗಿದ್ದಾಳೆ.
ಮದರಂಗಿ, ವಾಸ್ಕೋಡಿಗಾಮ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರೋ ಅನುಭವ ವಿರುವ ರಂಜಿತ್ ರಂಜಿತ್ ಕುಮಾರ್, ಈ ಹಿಂದೆ ಆ್ಯಪಲ್ ಕೇಕ್ ಎಂಬ ಸಿನಿಮಾ ನಿರ್ದೇಶಿಸಿದ್ದರು.ಈಗ ಕಾಗದ ಚಿತ್ರದ ಮೂಲಕ ಎರಡನೇ ಭಾರಿಗೆ ಡೈರೆಕ್ಟ್ ಹ್ಯಾಟ್ ತೊಟ್ಟಿದ್ದಾರೆ. ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ಕಾಗದ ಎಷ್ಟು ಮುಖ್ಯ ಪಾತ್ರವಹಿಸಿದೆ ಅನ್ನುವುದು ಚಿತ್ರದ ಒನ್ ಲೈನ್ ಸ್ಟೋರಿಯಾಗಿದ್ದು, 2005ರ ಸಮಯದಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿದೆಯಂತೆ.
ಈ ಪ್ರೇಮಕಥಾ ಹಂದರದ ಕಾಗದಕ್ಕೆ ಅಂಕಿತಾ, ಆದಿತ್ಯ ಜೋಡಿಯಾಗಿದ್ದಾರೆ. ಮಫ್ತಿ ಖ್ಯಾತಿಯ ಬಾಲರಾಜವಾಡಿ, ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ತಾರಾಗಣದಲ್ಲಿದ್ದಾರೆ.ಬೇಲೂರು, ಮೂಡಿಗೆರೆ ಭಾಗದಲ್ಲಿ ಕಾಗದ ಸಿನಿಮಾದ ಚಿತ್ರೀಕರಣ ಮಾಡಲಾಗಿದ್ದು, ಅಮ್ಮ ಸಿನಿ ಕ್ರಿಯೇಷನ್ ನಡಿ ಅರುಣ್ ಕುಮಾರ್ ಈ ಸಿನಿಮಾ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದ್ದು, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆಯಂತೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ, ಎಸ್ ಪ್ರದೀಪ್ ವರ್ಮಾ ಸಂಗೀತ ನಿರ್ದೇಶನ, ಪವನ್ ಗೌಡ ಸಂಕಲನ, ಭೂಷಣ್ ಕೊರಿಯೋಗ್ರಫಿ ಸಿನಿಮಾಗೆ ಇದೆ.