ರೂರಲ್ ಸ್ಟಾರ್ ಅಂಜನ್ ನಾಯಕನಾಗಿ ನಟಿಸಿರುವ ‘ಚೋಳ’ ಸಿನಿಮಾದ ಮೊದಲ ಟೀಸರ್ ಇದೀಗ ಬಿಡುಗಡೆಯಾಗಿದೆ. ಸುರೇಶ್ ಡಿ. ಎಂ ನಿರ್ದೇಶನದಲ್ಲಿ ಮೂಡಿ ಬಂದಿರುವ ವಿಭಿನ್ನ ಕಥಾಹಂದರದ ‘ಚೋಳ’ ಸಿನಿಮಾದಲ್ಲಿ ನಾಯಕ ನಟ ಅಂಜನ್ ಅಕ್ಷರಶಃ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ. ಇದರೊಂದಿಗೆ ಸಿನಿಮಾದ ಮೇಕಿಂಗ್, ಕಥೆ, ಪಾತ್ರವರ್ಗ ಸೇರಿದಂತೆ ಹಲವು ಅಂಶಗಳು ಗಮನ ಸೆಳೆದಿದೆ.
ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದವರು ಸುರೇಶ್ ಡಿ. ಎಂ. ‘ಚೋಳ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸುರೇಶ್ ಡಿ. ಎಂ ‘ಸೃಷ್ಟಿ ಎಂಟರ್ ಪ್ರೈಸಸ್’ ಲಾಂಛನದಲ್ಲಿ ಈ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿದ್ದಾರೆ.
ಇಲ್ಲಿ ದಿಶಾ ಪಾಂಡೆ ಮತ್ತು ಪ್ರತಿಭ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ. ಮನಮೋಹನ್ ರಾಯ್ ರಂಥಾ ಹಿರಿಯ ನಟರಿರುವ ಈ ತಾರಾಗಣದಲ್ಲಿ ಪ್ರತಿಭಾನ್ವಿತ ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರಿದ್ದಾರೆ. ಅವರೆಲ್ಲರ ಪಾತ್ರಗಳ ಝಲಕ್ಕುಗಳು ಟೀಸರ್ ನಲ್ಲಿ ಕಾಣಿಸಿವೆ. ಅದು ಪ್ರೇಕ್ಷಕರು ಥ್ರಿಲ್ ಆಗುವಂತೆಯೂ ಮಾಡಿದೆ. ಇನ್ನುಳಿದಂತೆ ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್ ಸಲ್ಡಾನ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸದ್ಯ ‘ಚೋಳ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಳ್ಳಲು ನಿರ್ಮಾಪಕ ಕಂ ನಿರ್ದೇಶಕ ಸುರೇಶ್ ಪ್ಲಾನು ಮಾಡಿಕೊಂಡಿದ್ದಾರೆ.