ಕರ್ವ’ ಖ್ಯಾತಿಯ ನವನೀತ್ ನಿರ್ದೇಶನದ
ಛೂ ಮಂತರ್’ ಚಿತ್ರದ ಮೂಲಕ ದಶಕಗಳ ನಂತರ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ಮತ್ತೆ ಬಣ್ಣ ಹಚ್ಚಿದ್ದಾರೆ. ಹೌದು ಶರಣ್ ನಾಯಕ ನಟರಾಗಿ ನಟಿಸಿರುವ ಈ ಚಿತ್ರದಲ್ಲಿ ಗುರುಕಿರಣ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇದಕ್ಕೂ ಮುನ್ನ 2007ರಲ್ಲಿ ತೆರೆಕಂಡ ಡಾ. ವಿಷ್ಣುವರ್ಧನ್ ,ರಮೇಶ್ ಅರವಿಂದ್ ಹಾಗು ನಟಿ ಪ್ರೇಮಾ ನಟನೆಯ ಏಕದಂತ ಸಿನಿಮಾದಲ್ಲಿ ನಟಿಸಿದ್ದರು.
ಈಗಾಗಲೇ `ಛೂ ಮಂತರ್’ ಚಿತ್ರದ ಪೋಸ್ಟರ್, ಟೀಸರ್ ರಿಲೀಸ್ ಆಗಿ ಸಂಚಲನ ಹುಟ್ಟುಹಾಕಿದೆ. ಚಿತ್ರದಲ್ಲಿ ಶರಣ್ ಅವರು ಒಬ್ಬ ಮಂತ್ರವಾದಿ ಪಾತ್ರದಲ್ಲಿ ಹೆದರಿಸಿ,ನಗಿಸಲು ಬಣ್ಣ ಹಚ್ಚಿದ್ರೆ, ತಾರಾಗಣದಲ್ಲಿ ಮೇಘನಾ ಗಾಂವ್ಕರ್, ಅದಿತಿ, ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಭಿನ್ನ ಕಥೆಯ ಛೂ ಮಂತರ್ ಸಿನ್ಮಾ, ಮಾನಸ ತರುಣ್, ತರುಣ್ ಶಿವಪ್ಪ ನಿರ್ಮಾಣದಲ್ಲಿ ಮೂಡಿ ಬಂದಿದೆ.ರಿಲೀಸ್ ಆಗಿರುವ ಟೀಸರ್ ನ ನೋಡಿದ್ರೆ ಚಿತ್ರದಲ್ಲಿ ಒಳ್ಳೆಯ ವಿಷ್ಯೂವಲ್ ಟ್ರೀಟ್ ಸಿಗೋದು ಕನ್ ಫರ್ಮ್ ಅನಿಸುತ್ತದೆ.
ಪಾಳು ಬಿದ್ದ ಉತ್ತರಾಕಾಂಡದ ಮಾರ್ಗನ್ ಹೌಸ್ ಪ್ಯಾಲೇಸ್‌ನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಭೂತ ಪ್ರೇತ ಇರುವ ಆತಂಕ ಮನೆಯಲ್ಲಿರುವವರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಾಯಕನಾಗಿ ಶರಣ್ ಎಂಟ್ರಿ ಕೊಡುತ್ತಾರೆ. ಟೀಸರ್ ನೋಡುಗರನ್ನು ಕಥೆಯ ಒಳಗೆ ಕರೆದುಕೊಂಡು ಹೋಗುತ್ತೆ ಅಂದ್ರೆ ಇನ್ನು ಸಿನೆಮಾ ಹೇಗಿರಬೇಡ ಅನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಸಿನಿಮಾ ಚಿತ್ರೀಕರಣ ಕೂಡ ಕಂಪ್ಲಿಟ್ ಆಗಿದ್ದು, ಸದ್ಯದಲ್ಲಿಯೇ ತೆರೆಯ ಮೇಲೆ ಅಬ್ಬರಿಸಲಿದೆ. ಛೂ ಮಂತರ್ ನಲ್ಲಿ ಶರಣ್ ರ ಹೊಸ ಅವತಾರ ಹಾಗು ದಶಕಗಳ ನಂತ್ರ ಮತ್ತೆ ಬಣ್ಣ ಹಚ್ಚಲಿರುವ ಗುರುಕಿರಣ್ ರ ರನ್ನ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.