Yuva Rajkumar: ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಪುತ್ರ ಯುವ ರಾಜ್ ಕುಮಾರ್(Yuva Rajkumar) ʻಯುವʼ(Yuva)ನಾಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ದೊಡ್ಮನೆ ಅಭಿಮಾನಿಗಳ ಬಹು ದಿನದ ಕನಸು ಕೊನೆಗೂ ʻಯುವʼನಾಗಿ ನನಸಾಗುತ್ತಿದೆ. ಇದೇ 29ರಂದು ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ʻಯುವʼ(Yuva)ನನ್ನು ತೇರಮೇಲೆ ಹೊತ್ತು ಮೆರೆಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಡುಗಳ ಮೂಲಕ ಹವಾ ಕ್ರಿಯೇಟ್ ಮಾಡಿದ್ದ ʻಯುವʼ ಇದೀಗ ಪವರ್ ಪ್ಯಾಕಡ್ಡ್ ಟ್ರೈಲರ್ ಮೂಲಕ ಎಂಟ್ರಿ ನೀಡಿದ್ದಾನೆ.
ʻಯುವʼ(Yuva) ಸಿನಿಮಾ ಹೇಗೆ ಮೂಡಿ ಬಂದಿರಬಹುದು ಎಂಬ ಕುತೂಹಲದಲ್ಲಿದ್ದ ಸಿನಿ ರಸಿಕರ ಪ್ರಶ್ನೆಗೆ ಟ್ರೇಲರ್ ಉತ್ತರವಾಗಿ ಬಂದಿದೆ. ಅಭಿಮಾನಿ ದೇವರುಗಳು ʻಯುವʼ(Yuva) ಮೇಲೆ ಇಟ್ಟ ನಿರೀಕ್ಷೆ ಸುಳ್ಳಾಗಿಲ್ಲ. ಟ್ರೇಲರ್ ತುಣುಕಲ್ಲಿ ʻಯುವʼ ಅಕ್ಷರಶಃ ಅಬ್ಬರಿಸಿದ್ದಾರೆ. ಸಂತೋಷ್ ಆನಂದ್ ರಾಮ್(Santhosh Ananddram) ತಮ್ಮ ಜವಾಬ್ದಾರಿಯನ್ನು ಅಚ್ಚುಕೊಟ್ಟಾಗಿ ನಿಭಾಯಿಸಿದ್ದಾರೆ ಎಂಬುದಕ್ಕೆ ಕುರುಹು ಸಿಕ್ಕಿದೆ. ಮಾಸ್ ಅಂಡ್ ಕ್ಲಾಸ್ ಹೀರೋ ಆಗಿ ʻಯುವʼ ತೆರೆಮೇಲೆ ಅಬ್ಬರಿಸೋಕೆ ಸಜ್ಜಾಗಿದ್ದು, ಅವ್ರ ಅಭಿಮಾನಿಗಳಿಗೆ ಟ್ರೈಲರ್ ಹಬ್ಬದೂಟ ನೀಡಿದೆ.
ಟ್ರೈಲರ್ ತುಣುಕಲ್ಲಿ ಕಾಣುವಂತೆ ಕಾಲೇಜ್ ಲೈಫ್, ಗ್ಯಾಂಗ್ ವಾರ್ ಹಾಗೂ ಅಪ್ಪ ಮಗನ ಸೆಂಟಿಮೆಂಟ್ ಸುತ್ತ ʻಯುವʼ(Yuva) ಕಥೆ ಸಾಗಲಿದೆ. ಮಾಸ್ ಅಂಡ್ ಕ್ಲಾಸ್ ಎರಡೂ ಎಲಿಮೆಂಟ್ ಇಲ್ಲಿದೆ. ಕಿಚ್ಚು ತುಂಬಿರೋ ಕಾಲೇಜ್ ಹುಡುಗನಾಗಿ ಪವರ್ ತೋರಿಸಿರುವ ʻಯುವʼ ಡೆಲಿವರಿ ಬಾಯ್ ಪಾತ್ರವನ್ನೂ ನಿರ್ವಹಿಸಿದ್ದಾರೆ. ಲುಕ್, ಖದರ್, ಖಡಕ್ ಡೈಲಾಗ್ ಡೆಲಿವರಿ, ಲವರ್ ಬಾಯ್ ಹೀಗೆ ಎಲ್ಲಾ ಶೇಡ್ ನಲ್ಲೂ ಯುವ ಮನಸ್ಸಿಗೆ ಹಿಡಿಸುತ್ತಿದ್ದಾನೆ. ಮೇಕಿಂಗ್, ತಾರಾಬಳಗ ಎಲ್ಲವೂ ಅದ್ದೂರಿಯಾಗಿದ್ದು, ಟ್ರೈಲರ್ ನೀಡಿದ ವೈಬ್ ಸಿನಿಮಾ ನೀಡಿದ್ರೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಬಹುದು.
ಹೆಸರಾಂತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮೂಲಕ ಯುವ ರಾಜ್ ಕುಮಾರ್(Yuva Rajkumar) ನಾಯಕ ನಟನಾಗಿ ಲಾಂಚ್ ಆಗುತ್ತಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಅಚ್ಯುತ್ ಕುಮಾರ್(Achyuth Kumar), ಸುಧಾರಾಣಿ(Sudharani), ಸಪ್ತಮಿ ಗೌಡ(Sapthami Gowda), ಹಿತಾ ಚಂದ್ರಶೇಖರ್(Hitha Chandrashekar), ಕಿಶೋರ್(Kishor) ಸೇರಿದಂತೆ ಹಲವರು ನಟಿಸಿದ್ದಾರೆ