Kangana Ranaut: ಬಾಲಿವುಡ್ ಸ್ಟಾರ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್(Kangana Ranaut) ಸದಾ ಸುದ್ದಿಯಲ್ಲಿರುವ ನಟಿ. ತಮ್ಮ ಅಧ್ಬುತ ನಟನೆಯಿಂದ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಈ ನಟಿ ಸಿನಿಮಾಗಳ ಜೊತೆ ಕಾಂಟ್ರವರ್ಸಿಯಲ್ಲೂ ಮುಂದಿರುತ್ತಾರೆ. ಕಾಂಟ್ರವರ್ಸಿ ಕ್ವೀನ್ ಎಂದೇ ಕರೆಸಿಕೊಳ್ಳೊ ಕಂಗನಾ ರಾಜಕೀಯ ಅಖಾಡಕೆ ಧುಮುಕಿದ್ದಾರೆ.
ಸದಾ ಒಂದಿಲ್ಲೊಂದು ಸ್ಟೇಟ್ಮೆಂಟ್ ನೀಡಿ ಸುದ್ದಿಯಾಗೋ ʻಕ್ವೀನ್ʼ ಕಂಗನಾ(Kangana) ಈ ಬಾರಿ ರಾಜಕೀಯ ವಿಚಾರವಾಗಿ ಟ್ರೆಂಡಿಂಗ್ ನಲ್ಲಿದ್ದಾರೆ. ಮೋದಿ, ಬಿಜೆಪಿ ನಡೆಯ ಪರ ಸದಾ ಬ್ಯಾಟಿಂಗ್ ಬೀಸುತ್ತಿದ್ದ ಕಂಗನಾಗೆ ಬಿಜೆಪಿಯಿಂದ ರಾಜಕೀಯ ಅಖಾಡಕ್ಕೆ ಎಂಟ್ರಿ ಸಿಕ್ಕಿದೆ. ಈ ಮೂಲಕ ʻತಲೈವಿʼ ಖ್ಯಾತಿಯ ನಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಹಲವರ ಲೆಕ್ಕಾಚಾರ ನಿಜವಾಗಿದೆ. ಇದೇ ಖುಷಿಯಲ್ಲಿ ಕಂಗನಾ ಹೋಳಿ ಆಡಿ ಸಂಭ್ರಮಿಸಿದ್ದಾರೆ.
ಅಂದ್ಹಾಗೆ, ಕಂಗನಾ ರಣಾವತ್(Kangana Ranaut) ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದಿಂದಲೇ ಎಂಪಿ(MP)ಸ್ಪರ್ಧಿಯಾಗಿ ಚುನಾವಣೆಗೆ ನಿಲ್ಲುತ್ತಿದ್ದಾರೆ, ಚುನಾವಣಾ ಕ್ಯಾಂಪೈನ್ ಆರಂಭಿಸಿರುವ ಕಂಗನಾ ಟಿಕೆಟ್ ಸಿಕ್ಕಿರುವ ಬಗ್ಗೆ ಹರುಷ ವ್ಯಕ್ತಪಡಿಸಿದ್ದಾರೆ. ʻನನ್ನ ಜನ್ಮ ಭೂಮಿ ನನ್ನನ್ನು ಮರಳಿ ಕರೆದಿದೆ, ನಾನು ನಿಜಕ್ಕೂ ಅದೃಷ್ಟಶಾಲಿ, ಇದು ನನ್ನ ಹಾಗೂ ಕುಟುಂಬದ ಭಾವನಾತ್ಮಕ ಕ್ಷಣವಾಗಿದೆʼ ಎಂದು ಸಂತಸ ಹಂಚಿಕೊಂಡಿದ್ದಾರೆ.
ಕ್ವೀನ್(Queen), ತಲೈವಿ ಸೇರಿದಂತೆ ಮಹಿಳಾ ಪ್ರಧಾನ ಚಿತ್ರ ಹಾಗೂ ಬಿಟೌನ್ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿರುವ ಕಂಗನಾ(Kangana) ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಿಕ್ಕ ಯಶಸ್ಸು ರಾಜಕೀಯ ಲೈಫ್ನಲ್ಲಿ ಸಿಗುತ್ತಾ ಕಾದು ನೋಡಬೇಕಿದೆ.