ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತರಾಮ ಕಲ್ಯಾಣ ಸಿನಿಮಾದಲ್ಲಿ ಮಿಂಚಿದ್ದ, ಕನ್ನಡದ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರಿಂದ ಸೈ ಎನಿಸಿಕೊಂಡಿದ್ದ ನಟಿ ಜ್ಯೋತಿ ರೈ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಜ್ಯೋತಿ ರೈ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದಿಯಾ? ನಟಿ ಜ್ಯೋತಿ ಪತಿಯಿಂದ ದೂರ ಆದ್ರಾ? ಗಂಡನ ಜೊತೆಗಿನ ಸಂಬಂಧ ಕಡಿದುಕೊಂಡರಾ? ಹೀಗೊಂದಿಷ್ಟು ಪ್ರಶ್ನೆಗಳ ಜೊತೆಗೆ ಜ್ಯೋತಿ ಬಾಳಲ್ಲಿ ಮಾಸ್ಟರ್ ಪೀಸ್ ಡೈರೆಕ್ಟರ್ ಎಂಟ್ರಿಕೊಟ್ಟಿರುವುದು ನಿಜಾನಾ? ಟಾಲಿವುಡ್ ಡೈರೆಕ್ಟರ್ ಜೊತೆ ಜ್ಯೋತಿ ಪ್ರೀತಿಯಲ್ಲಿ ಬಿದ್ದಿರುವುದು ಸತ್ಯಾನಾ? ಹೀಗೊಂದಿಷ್ಟು ಅನುಮಾನದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸ್ತಿರುವ ಇಬ್ಬರ ಫೋಟೋಗಳು ಪ್ಲಸ್ ಜ್ಯೋತಿ ರೈ ಕೊಟ್ಟಿರುವ ಹ್ಯಾಷ್ಟ್ಯಾಗ್ ಕ್ಯಾಪ್ಶನ್.
ಯಸ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ನಟಿ ಜ್ಯೋತಿ ರೈ, ಇತ್ತೀಚೆಗೆ ಬೋಲ್ಡ್ ಫೋಟೋಶೂಟ್ ಮಾಡಿಸಿ ಪಡ್ಡೆಹೈಕ್ಳ ಎದೆಗೆ ಹಾಗೂ ಸೋಷಿಯಲ್ ಸಮುದ್ರಕ್ಕೆ ಕಿಚ್ಚು ಹಚ್ಚಿದ್ದರು. ಅಮ್ಮನ ಪಾತ್ರದಲ್ಲಿ ನಾವು ನೋಡೋದೇ ಇದೇ ಜ್ಯೋತಿನಾ ಎನ್ನುವಷ್ಟರ ಮಟ್ಟಿಗೆ ನೋಡುಗರನ್ನು ಕನ್ಫ್ಯೂಸ್ ಮಾಡಿದ್ದರು. ಈ ಮಧ್ಯೆ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿ ಎಲ್ಲರ ತಲೆಗೆ ಹುಳ ಬಿಟ್ಟಿದ್ದಾರೆ. ಟಾಲಿವುಡ್ನ ಯಂಗ್ ಡೈರೆಕ್ಟರ್ ಸುಕು ಪೂರ್ವಜ್ ತೆಕ್ಕೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅದಕ್ಕೆ ಜ್ಯೋತಿಪೂರ್ವಜ್ ಅಂತ ಹ್ಯಾಷ್ಟ್ಯಾಗ್ ಕೊಟ್ಟು ಇನ್ಸ್ಟಾ ಪೇಜ್ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಪ್ಲಸ್ ಹ್ಯಾಷ್ಟ್ಯಾಗೇ ಎಲ್ಲರ ಮೆದುಳಿಗೆ ಕೆಲಸ ಕೊಟ್ಟಿದೆ. ಇವರಿಬ್ಬರು ರಿಲೇಷನ್ಶಿಪ್ನಲ್ಲಿರಬಹುದಾ? ಜ್ಯೋತಿ ಬಾಳಲ್ಲಿ ಸುಕುಪೂರ್ವಜ್ ಹೊಸಬೆಳಕಾಗಿರಬಹುದಾ ಅಂತೆಲ್ಲಾ ಅವರವರೇ ಮಾತನಾಡಿಕೊಳ್ತಿದ್ದಾರೆ.
ಅಂದ್ಹಾಗೇ, ಒಮ್ಮೆ ಪಬ್ಲಿಕ್ ಫಿಗರ್ ಗಳಾದ್ಮೇಲೆ ಮುಗೀತು ಅವರ ಬಗ್ಗೆ ತಿಳಿದುಕೊಳ್ಳೋಕೆ ಪ್ರತಿಯೊಬ್ಬರು ಕುತೂಹಲಭರಿತರಾಗಿರ್ತಾರೆ. ಅದ್ರಲ್ಲೂ, ನಟ-ನಟಿಯರ ಬಗ್ಗೆ ತಿಳಿದುಕೊಳ್ಳೋದಕ್ಕಂತೂ ಜನ ಹೆಚ್ಚು ಉತ್ಸುಕತೆ ತೋರುತ್ತಾರೆ. ಅವರ ಬದುಕಲ್ಲಿ ಏನಾದರೂ ಕೊಂಚ ವ್ಯತ್ಯಾಸ ಕಂಡುಬಂದರೆ ಮುಗೀತು, ಗಲ್ಲಿಗಾಸಿಪ್ನಲ್ಲಿ ಅವರ ಬಗ್ಗೆ ನೂರೆಂಟು ಸುದ್ದಿಗಳು ಹರಿದಾಡಿಬಿಡುತ್ತವೆ. ಇದೀಗ ನಟಿ ಜ್ಯೋತಿ ರೈ ಬದುಕಿನ ಬಗ್ಗೆಯೂ ಇಂತಹದ್ದೇ ಸುದ್ದಿಗಳು ಗಾಸಿಪ್ ಕಾಲೋನಿಯಲ್ಲಿ ಓಡಾಡುತ್ತಿವೆ. ಜ್ಯೋತಿ ರೈ ಸಂಸಾರದ ಸೇತುವೆ ಮುರಿದುಬಿದ್ದಿದೆ, ಅದನ್ನು ಸರಿಪಡಿಸೋಕೆ ತೆಲುಗು ಯುವನಿರ್ದೇಶಕ ಸುಕುಪೂರ್ವಜ್ ಎಂಟ್ರಿಯಾಗಿದೆ ಅಂತೆಲ್ಲಾ ಸುದ್ದಿಯಾಗ್ತಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿರುವ ಫೋಟೋಗಳು ಸಾಕ್ಷಿ ಒದಗಿಸಲಿಕ್ಕೆ ನೋಡ್ತಿವೆ.
ಇಂಟ್ರೆಸ್ಟಿಂಗ್ ಅಂದರೆ ನಟಿ ಜ್ಯೋತಿ ಹಾಗೂ ಸುಕುಪೂರ್ವಜ್ ಒಟ್ಟಿಗೆ ಕೆಲಸ ಮಾಡಿದ್ದಾರೆ. `ಶುಕ್ರ’, `ಮೌತರಾನಿ ಮೌನಮಿದಿ’, `ಎ ಮಾಸ್ಟರ್ ಪೀಸ್’ ಸಿನಿಮಾಗಳನ್ನ ಸುಕುಪೂರ್ವಜ್ ನಿರ್ದೇಶನ ಮಾಡಿದ್ದು, ಮಾಸ್ಟರ್ ಪೀಸ್ ಚಿತ್ರದಲ್ಲಿ ನಟಿ ಜ್ಯೋತಿ ರೈ ಮಿಂಚಿದ್ದಾರೆ. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿ, ಆ ಪರಿಚಯ ಸ್ನೇಹಕ್ಕೆ ತಿರುಗಿ ಈಗ ಡೇಟ್ ಮಾಡ್ತಿದ್ದಾರೆನ್ನುವ ಸುದ್ದಿ ತೆಲುಗು ಅಂಗಳದಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ. ಆದರೆ, ನಟಿ ಜ್ಯೋತಿಯಾಗ್ಲೀ ಅಥವಾ ಸುಕುಪೂರ್ವಜ್ ಆಗ್ಲೀ ತಮ್ಮಿಬ್ಬರ ಲವ್ವಿಡವ್ವಿ ಕಹಾನಿಯನ್ನ ಓಪನ್ನಾಗಿ ಹೇಳಿಕೊಂಡಿಲ್ಲ. ಅಂದ್ಹಾಗೇ, ನಟಿ ಜ್ಯೋತಿ 20ನೇ ವಯಸ್ಸಿಗೆ ಮದುವೆಯಾಗಿದ್ದರು. ಪದ್ಮನಾಭ ರೈ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಗಂಡುಮಗು ಪಡೆದಿದ್ದರು. ಆ ಮಗು ಆಟಿಸಂ ಎನ್ನುವ ಖಾಯಿಲೆಗೆ ತುತ್ತಾಗಿತ್ತು. ಆಗ ಮಗನನ್ನುನ ಉಳಿಸಿಕೊಳ್ಳುವುದಕ್ಕೆ ತುಂಬಾ ಶ್ರಮಪಟ್ಟಿದ್ದರು. ಈಗ ಮಗ ಎಲ್ಲಿದ್ದಾನೆ? ಹೇಗಿದ್ದಾನೆ? ಈ ಪ್ರಶ್ನೆಗೆ ಉತ್ತರವಿಲ್ಲ. ಜ್ಯೋತಿಯವ್ರ ಸಾಮಾಜಿಕ ಜಾಲತಾಣದಲ್ಲಿ ಮಗನ ಫೋಟೋವೂ ಕಾಣಸಿಗ್ತಿಲ್ಲ.
ಇನ್ನೂ ಬಣ್ಣದಲೋಕದಲ್ಲಿ ಕನ್ನಡತಿ ಜ್ಯೋತಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಮದುವೆಯಾದ್ಮೇಲೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ವಿನು ಬಳಂಜ ಅವರ `ಬಂದೇ ಬರತಾವ ಕಾಲ’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ಕಿನ್ನರಿ, ಜೋಗುಳ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕನ್ನಡ ಸೀರಿಯಲ್ಗಳಲ್ಲಿ ಮಿಂಚಿದ್ದರು. ಸೀತರಾಮ ಕಲ್ಯಾಣ ಸೇರಿದಂತೆ ಹಲವು ಸೂಪರ್ ಹಿಟ್ ಕನ್ನಡ ಸಿನಿಮಾಗಲ್ಲಿ ಸ್ಕ್ರೀನ್ ಶೇರ್ ಮಾಡಿದರು. ನಡುವೆ ತೆಲುಗಿಗೆ ಹಾರಿ ಅಲ್ಲೂ ಸಿನಿಮಾ, ಸೀರಿಯಲ್ ನಲ್ಲಿ ಮಿಂಚಿ ಟಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾದರು. `ಗುಪ್ಪೆದಂಥ ಮನಸು’ ಧಾರಾವಾಹಿ ಮೂಲಕ ತೆಲುಗು ಮಂದಿಯ ಮನಸ್ಸು ಗೆದ್ದ ಜ್ಯೋತಿ ರೈ, ಈಗ ಪ್ರಿಟಿಗರ್ಲ್ ಆಗಿದ್ದಾರೆ. ಇದೇ ಹೆಸರಿನ ವೆಬ್ಸೀರಿಸ್ ಮೂಲಕ ಕಮಾಲ್ ಮಾಡಲು ಹೊರಟಿದ್ದಾರೆ. ಈ ಹೊಸ ಪ್ರಯತ್ನಕ್ಕೆ ಒಳ್ಳೆದಾಗ್ಲಿ ಅಂತ ಹೇಳ್ತಾ?ಆದಷ್ಟು ಬೇಗ ಸುಕುಪೂರ್ವಜ್ ಜೊತೆಗಿನ ಸಂಬಂಧಕ್ಕೆ ಕ್ಲ್ಯಾರಿಟಿ ಕೊಡಿ ಮೇಡಂ ಅಂತ ಕೇಳೋಣ