Ravichandran: ಕ್ರೇಜಿ಼ಸ್ಟಾರ್(Crazy Star) ಕನಸಲ್ಲೂ ಕನವರಿಸುತ್ತಿರುವ, ಕನವರಿಸುತ್ತಲೇ ಇರುವ ಸಿನಿಮಾ ‘ಪ್ರೇಮಲೋಕ2’ (Preamaloka2). ರವಿಚಂದ್ರನ್ ಡ್ರೀಮ್ ಪ್ರಾಜೆಕ್ಟ್ ಈ ಸಿನಿಮಾ. ಈ ಸಿನಿಮಾಗಾಗೇ ದುಡಿಯುತ್ತಿದ್ದೇನೆ ಎಂದು ಎಷ್ಟೋ ಕಡೆ ಓಪನ್ ಆಗಿ ಕೂಡ ಹೇಳಿದ್ರು. ಫೈನಲಿ ಪ್ರೇಮಲೋಕ ಸೆಟ್ಟೇರುತ್ತಿದೆ. ಸಿನಿಮಾ ಕೆಲಸಗಳು ಗರಿ ಗೆದರಿವೆ.
‘ಪ್ರೇಮಲೋಕ2’ ಪ್ರಿಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ. ರವಿಚಂದ್ರನ್(Ravichandran) ನಾಯಕಿ ಹುಡುಕಾಟದಲ್ಲಿದ್ರು. ಯಾರಾಗ್ತಾರೆ ಪ್ರೇಮಲೋಕವನ್ನು ಕಲರ್ ಫುಲ್ ಮಾಡೋ ನಾಯಕಿ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕನ್ನಡತಿ ಅಲ್ಲವೇ ಅಲ್ಲ, ತೆಲುಗು ನಟಿಯೂ ಅಲ್ಲ, ತಮಿಳು ಬೆಡಗಿ ಪ್ರೇಮಲೋಕ ಅಂಗಳಕ್ಕೆ ಎಂಟ್ರಿ ಕೊಡ್ತಿದ್ದಾರೆ. ಆಕೆ ಮತ್ಯಾರು ಅಲ್ಲ ನಟಿ ತೇಜು ಅಶ್ವಿನಿ.
‘ಮುಡ್ರಾಂ ಕಣ್’, ‘ಕಾತು ವಾಕಲ್ ರೆಂಡು ಕಾದಲ್’, ‘ಪ್ಯಾರಿಸ್ ಜಯರಾಜ್’ ಸಿನಿಮಾದಲ್ಲಿ ತೇಜು ಅಶ್ವಿನಿ ನಟಿಸಿದ್ದಾರೆ. ಕಾಲಿವುಡ್ ಈ ಬೆಡಗಿ ಕ್ರೇಜಿ಼ಸ್ಟಾರ್‌ಗೆ ಕಣ್ಣಿಗೆ ಬಿದ್ದಿದ್ದು, ಮನೋರಂಜನ್(Manoranjan)ಗೆ ಇವಳೇ ಜೋಡಿ ಎಂದು ನಟಿಮಣಿಯನ್ನು ಕನ್ನಡಕ್ಕೆ ತರುವ ಪ್ರಯತ್ನದಲ್ಲಿದ್ದಾರೆ.
ಅಂದ್ಹಾಗೆ ಪ್ರೇಮಲೋಕ2(Premaloka2) ಸಿನಿಮಾದಲ್ಲಿ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಪ್ರೇಮಲೋಕವನ್ನೇ ಮೀರಿಸುವ ಮತ್ತೊಂದು ಪ್ರೇಮಲೋಕವನ್ನು ನಿರ್ಮಿಸಲು ಪಣತೊಟ್ಟಿರುವ ರವಿಚಂದ್ರನ್ ಮತ್ತಷ್ಟು ಎಕ್ಸೈಟಿಂಗ್ ಸುದ್ದಿ ಸದ್ಯದಲ್ಲೇ ನೀಡಲಿದ್ದಾರೆ.