Sridevi: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಸುಂದರಿ, ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ (Sridevi). ಭಾರತೀಯ ಚಿತ್ರರಂಗದಲ್ಲಿ ಅಪಾರ ಬೇಡಿಕೆ ಸೃಷ್ಟಿಸಿಕೊಂಡಿದ್ದ ಅಭಿನಯ ಅಪ್ಸರೆ. 2018ರಲ್ಲಿ ಇಹಲೋಕ ತ್ಯಜಿಸಿದ ಶ್ರೀದೇವಿ ಅಪಾರ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಆದ್ರೀಗ ಅವರ ನೆನಪುಗಳೊಂದಿಗೆ, ಅವರ ಅರಮನೆಯಲ್ಲೇ ಕಾಲ ಕಳೆಯೋ ಅವಕಾಶವೊಂದು ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ನಟಿಯರಿಗಿಂತ ನಟರುಗಳ ಕ್ರೇಜ಼್ ಹೆಚ್ಚಿರುತ್ತೆ, ಫ್ಯಾನ್ಸ್ ಹೆಚ್ಚಿರುತ್ತಾರೆ. ಆದರೆ ಇಂತಹದ್ದೊಂದು ಲೈನ್ ಕ್ರಾಸ್ ಮಾಡಿ ಸ್ಟಾರ್ ನಟರಷ್ಟೇ ಅಭಿಮಾನಿ ಬಳಗ ಹೊಂದಿದ್ದ ಏಕೈಕ ನಟಿ ಶ್ರೀದೇವಿ(Sridevi). ಇಪ್ಪತ್ತು ವರ್ಷ ಬಾಲಿವುಡ್ ಆಳಿದ ಸ್ಪುರದ್ರೂಪಿ ಚೆಲುವೆ. ಕೇವಲ ಬಿಟೌನ್ ಅಲ್ಲ, ತೆಲುಗು, ತಮಿಳು ಸಿನಿಮಾದಲ್ಲೂ ನಟಿಸಿದ್ದ ಲೇಡಿ ಸೂಪರ್ ಸ್ಟಾರ್. ಒಂದ್ ಕಾಲದಲ್ಲಿ ಈಕೆ ಸೃಷ್ಟಿಸಿದ್ದ ಕ್ರೇಜ಼್ ಪದಗಳಿಗೂ ನಿಲುಕದ್ದು.
ಶ್ರೀದೇವಿ(Sridevi) ಕೋಟಿ ಕೋಟಿ ಆಸ್ತಿಯ ಒಡತಿ. ಅನೇಕ ಪ್ರಾಪರ್ಟಿಗಳನ್ನು ಮುಂಬೈ, ಚೆನ್ನೈ ಸೇರಿದಂತೆ ಹಲವು ಭಾಗದಲ್ಲಿ ಹೊಂದಿದ್ದಾರೆ. ಆದರೆ ಈಕೆ ಮೊದಲು ಖರೀದಿಸಿದ ಪ್ರಾಪರ್ಟಿ ಚೆನ್ನೈನಲ್ಲಿದೆ. ಶ್ರೀದೇವಿ ನೆಲೆಸಿದ್ದ ಈ ಮ್ಯಾನ್ಷನ್‌ನಲ್ಲಿ ಈಗ ಯಾರೂ ಬೇಕಾದರೂ ಒಂದು ರೌಂಡ್ ಹಾಕಬಹುದು. ಅತಿಲೋಕ ಸುಂದರಿ ನೆಲೆಸಿದ್ದ ಚೈನ್ನೈ ಮ್ಯಾನ್ಷನ್‌ಗೆ ವಿಸಿಟ್ ಮಾಡಲು ಅವಕಾಶವಿದೆ. ಪತಿ ಬೋನಿ ಕಪೂರ್ ತನ್ನ ಪತ್ನಿಯ ಬಲು ಪ್ರೀತಿಯ ಮ್ಯಾನ್ಷನ್‌ನನ್ನು ರಿನೋವೇಟ್ ಮಾಡಿಸಿದ್ದಾರೆ. ಶ್ರೀದೇವಿ ಅಭಿರುಚಿ, ಆಕೆಯ ಜೀವನ ಶೈಲಿ, ಸಿನಿಮಾ ಮೆಮೆರಿ ಎಲ್ಲವನ್ನೂ ಈ ಮ್ಯಾನ್ಷನ್ ಕಟ್ಟಿಕೊಡಲಿದೆ.
ಪುತ್ರಿ ಜಾನ್ವಿ ಕಪೂರ್(Janhvi Kapoor) ಚೆನ್ನೈ ಮನೆಯ ವೀಡಿಯೋ ಮಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವೀಡಿಯೋ ಶ್ರೀದೇವಿ ಬದುಕು ಎಷ್ಟು ಅದ್ದೂರಿಯಾಗಿತ್ತು, ಆಕೆಯ ಅಭಿರುಚಿ ಎಷ್ಟು ವಿಭಿನ್ನವಾಗಿತ್ತು ಅನ್ನೋದಕ್ಕೆ ಸಾಕ್ಷಿಯಾಗಿದೆ. ತರಹೇವಾರಿ ದೇಶ ವಿದೇಶಗಳ ಪೇಂಟಿಂಗ್‌ನಿಂದ ಕಂಗೊಳಿಸುವ ಮ್ಯಾನ್ಷನ್ ಶ್ರೀದೇವಿ ನೆನಪನ್ನು ಕಟ್ಟಿಕೊಡುತ್ತಿದೆ.