ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ `ಜೈಲರ್’ ಬಿಡುಗಡೆಗೆ ಇನ್ನೇನು ಕೆಲವೇ ಕೆಲವು ಗಂಟೆಗಳು ಬಾಕಿಯಿದೆ. ಹೀಗಾಗಿ, ಪಡೆಯಪ್ಪನ ಭಕ್ತರು ಸರಪಟಾಕಿ ಹಚ್ಚೋಕೆ, ಹಬ್ಬ ಮಾಡಿ ಸಂಭ್ರಮಿಸೋದಕ್ಕೆ ರೆಡಿಯಾಗಿದ್ದಾರೆ. ಆದರೆ, ತಮಿಳು ಸೂಪರ್ ಸ್ಟಾರ್ ವಿಜಯ್ ಅಭಿಮಾನಿಗಳು ಮಾತ್ರ ತಲೈವಾ ವಿರುದ್ದ ಹಲ್ಲಲ್ಲು ಕಡಿಯುತ್ತಿದ್ದಾರೆ. ಕಣ್ಣು ಕೆಂಪಗೆ ಮಾಡ್ಕೊಂಡು ಸೋಷಿಯಲ್ ಮೀಡಿಯಾ ಅಖಾಡಕ್ಕಿಳಿದು ಭಾಷಾ ವಿರುದ್ದ ದಂಗೆ ಎದ್ದಿದ್ದಾರೆ. ಇದಕ್ಕೆ ಕಾರಣ ಏನು ಅಂತೀರಾ? ಕಂಪ್ಲೀಟ್ ಈ ಸ್ಟೋರಿ ಓದಿದಿರೆ ನಿಮಗೆ ಗೊತ್ತಾಗುತ್ತೆ.
ಯಾವುದೇ ಇಂಡಸ್ಟ್ರಿ ತಗೊಳ್ಳಿ ಕೆಲ ಸ್ಟಾರ್ ಗಳ ಮಧ್ಯೆ, ಸ್ಟಾರ್ ಗಳ ಅಭಿಮಾನಿಗಳ ಮಧ್ಯೆ ಯಾವ್ಯಾವುದೋ ವಿಚಾರಕ್ಕೆ ಶೀತಲಸಮರ ಏರ್ಪಡುತ್ತಲೇ ಇರುತ್ತೆ. ಅದ್ರಂತೆ, ಕಾಲಿವುಡ್ ಅಂಗಳದಲ್ಲಿ ತಲೈವಾ ಹಾಗೂ ವಿಜಯ್ ಅಭಿಮಾನಿಗಳ ನಡುವೆ `ಸೂಪರ್ ಸ್ಟಾರ್’ ಟೈಟಲ್‍ಗಾಗಿ ಕಿತ್ತಾಟ ನಡೆಯುತ್ತಲೇ ಇದೆ. ಸೂಪರ್ ಸ್ಟಾರ್ ಪಟ್ಟ ಹಾಗೂ ಕಿರೀಟ ನಮ್ಮ ಪಡೆಯಪ್ಪನಿಗೆ ಸೇರತಕ್ಕದ್ದು ಅಂತ ರಜನಿ ಅಭಿಮಾನಿಗಳು ಹೋರಾಟ ಮಾಡಿದರೆ, ಸೂಪರ್ ಸ್ಟಾರ್ ಕಿರೀಟ ನಮ್ಮ ಬಾಸ್ ಮುಡಿಗೇರಬೇಕು ಅಂತ ದಳಪತಿ ಅಭಿಮಾನಿಗಳು ಪ್ರತಿಭಟನೆ ಮಾಡ್ತಾರೆ. ಬಟ್, ಯಾವತ್ತೋ ಹೇಳಿಬಿಟ್ಟಿದ್ದಾರೆ ತಲೈವಾ, ನಂಗೆ ಯಾವ `ಸೂಪರ್ ಸ್ಟಾರ್’ ಟೈಟಲೂ ಬೇಡ ಅಂತ. ಮೊನ್ನೆ ಜೈಲರ್ ಫಂಕ್ಷನ್‍ನಲ್ಲೂ ಅದೇ ಮಾತನ್ನ ಹೇಳಿದ್ದಾರೆ
ಅಂದ್ಹಾಗೇ, ಇದು ಇಂದು ನಿನ್ನೆಯ ಹೋರಾಟವಲ್ಲ. ದಶಕಗಳಿಂದಲೂ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವೆ `ಸೂಪರ್ ಸ್ಟಾರ್ ‘ ಟೈಟಲ್ ಗೋಸ್ಕರ ಕದನ ನಡೆಯುತ್ತಲೇ ಇದೆ. ಮೊನ್ನೆ `ಜೈಲರ್’ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ತಲೈವಾ ಹೇಳಿದ `ಹದ್ದು-ಕಾಗೆ’ಯ ಕಥೆ ಕಿಚ್ಚು ಹಚ್ಚಿದೆ. ದಳಪತಿ ಅಭಿಮಾನಿಗಳ ಪಿತ್ತ ನೆತ್ತಿಗೇರಿ ಕಣಕ್ಕಿಳಿದು ಕಾದಾಡುವಂತೆ ಮಾಡಿದೆ. ಅಷ್ಟಕ್ಕೂ, ತಲೈವಾ ಹೇಳಿದ `ಕಾಗೆ-ಹದ್ದು’ ಕಥೆ ಇಲ್ಲಿದೆ ನೋಡಿ
‘ಹದ್ದಿನ ಗಾತ್ರ ಹಾಗೂ ಅದರ ತಾಕತ್ತನ್ನು ಅರ್ಥ ಮಾಡಿಕೊಳ್ಳದೆ ಕಾಗೆ, ಅದರೊಂದಿಗೆ ಹೋರಾಡಲು ಪ್ರಯತ್ನಿಸುತ್ತದೆ. ಹಾಗೇ ಹದ್ದು ಹಾರುವಷ್ಟು ಎತ್ತರಕ್ಕೆ ಎಂದಿಗೂ ಕಾಗೆ ಹಾರಾಡಲು ಸಾಧ್ಯವಿಲ್ಲ’
ಪಡೆಯಪ್ಪ ಈ ಕಥೆ ಯಾಕ್ ಹೇಳಿದ್ರು? ಯಾರ ಹೆಸರನ್ನೂ ಪ್ರಸ್ತಾಪ ಮಾಡದೇ ಈ ಕಥೆ ಹೇಳಿದ್ಯಾಕೆ? ಯಾರಿಗಾದ್ರೂ ಟಾಂಗ್ ಕೊಟ್ಟರಾ? ಭಾಷಾ ಯಾರನ್ನಾದ್ರೂ ದ್ವೇಷಿಸುತ್ತಿದ್ದಾರಾ? ಅಥವಾ ತಮ್ಮನ್ನ ದ್ವೇಷಿಸುವವರು ಹೆಚ್ಚೆತ್ತುಕೊಳ್ಳಲಿ ಅಂತ ಹೀಗೊಂದು ಉದಾಹರಣೆ ಕೊಟ್ಟರಾ ಗೊತ್ತಿಲ್ಲ. ಆದರೆ, ದಳಪತಿ ವಿಜಯ್ ಅಭಿಮಾನಿಗಳು ಮಾತ್ರ ನಮ್ಮ ಬಾಸ್‍ಗೆ ಟಕ್ಕರ್ ಕೊಟ್ಟಿದ್ದಾರೆ ಅಂತ ರೊಚ್ಚಿಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಅಭಿಮಾನಿಗಳು ಒಬ್ಬರಿಗೊಬ್ಬರು ಕಾಲೆಳೆದುಕೊಂಡು ಕಚ್ಚಾಡುತ್ತಿದ್ದಾರೆ. ನಮ್ಮ ಬಾಸ್ ಗ್ರೇಟ್, ನಮ್ಮ ಬಾಸೇ ಆಲ್‍ಟೈಮ್ ಸೂಪರ್ ಸ್ಟಾರ್ ಅಂತೆಲ್ಲಾ ಕಾಲರ್ ಪಟ್ಟಿ ಎಗರಿಸುತ್ತಿದ್ದಾರೆ.
ಇನ್ನೂ ಮೊದಲಿಗೆ ಯೂಟ್ಯೂಬರ್ ಒಬ್ಬರು ರಜನಿಕಾಂತ್ ವಿರುದ್ಧ ಗರಂ ಆಗಿದ್ದರು. ‘ಹದ್ದಿಗೆ ಮೇಲೆ ಏರುವ ಸಾಮರ್ಥ್ಯ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅದನ್ನು ಹೊರತುಪಡಿಸಿದರೆ ಹದ್ದು ಯಾವಾಗಲೂ ಏಕಾಂಗಿಯಾಗಿಯೇ ಇರುತ್ತೆ. ಹದ್ದಿಗೆ ಸ್ವಾರ್ಥ ಸ್ವಭಾವ ಇದೆ. ಸೂಪರ್‌ಸ್ಟಾರ್ ರಜನಿಕಾಂತ್‌ಗೆ ತನ್ನ ಹೆಸರನ್ನು ಹೇಳಿಕೊಳ್ಳುವ ಧೈರ್ಯ ಇಲ್ಲ’ ಎಂದು ಟ್ವೀಟ್ ಮಾಡಿದ್ದರು, ಅಲ್ಲಿಂದ ಈ ಗಲಾಟೆ ಹೊತ್ತಿಕೊಂಡಿದೆ. ಈ ಗಲಾಟೆ ರಜನಿ-ವಿಜಯ್ ಅಭಿಮಾನಿಗಳ ಆನ್ಲೈನ್ ಘರ್ಷಣೆಯ ಟ್ರೆಂಡ್ ಆಗಿಯೂ ಮುಂದುವರೆದಿದೆ. ಜೈಲರ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ‘ಹುಕುಂ’ ಹಾಡು “ಉಂಗಕಪ್ಪನ್ ವಿಚಿತ್ರ ಕೇಟವನ್… ಪಟ್ಟತ್ತ ಫೊಕ್ಕ ಉದೋರ್ ಬೇರು” ಸೇರಿದಂತೆ ಆಕ್ರಮಣಕಾರಿ ಸಾಲುಗಳನ್ನು ಒಳಗೊಂಡಿದ್ದು, ಇದು ವಿಜಯ್ ದಳಪತಿ ಅವರಿಗಾಗಿಯೇ ಇರುವುದು ಎಂದು ಫ್ಯಾನ್ಸ್ ಕೆಂಗಣ್ಣು ಬೀರುತ್ತಿದ್ದಾರೆ.
ಒಟ್ನಲ್ಲಿ ನಾಳೆ ಸಿನಿಮಾ ರಿಲೀಸ್ ಆದ್ಮೇಲೆ ಆ ಹಾಡು ಯಾವ ಕಾರಣಕ್ಕೆ ಬರುತ್ತೆ, ಸಮಯ ಸಂದರ್ಭ ಸಮಯೋಚಿತವಾಗಿದೆಯೋ ಅಥವಾ ಬೇಕಂತಲೇ ಹೀಗೊಂದು ಹಾಡು ರಚಿಸಿದ್ದಾರೋ ಅನ್ನೋದು ಗೊತ್ತಾಗಲಿದೆ. ಅನಂತ ಅಭಿಮಾನಿಗಳ ನಡುವಿನ ಕಿತ್ತಾಟ ಯಾವ ಸ್ವರೂಪ ಪಡೆಯಲಿದೆ ಅನ್ನೋದು ಕಾದುನೋಡಬೇಕಿದೆ