Thalapathy Vijay: ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್(Thalapathy Vijay) ಅಭಿನಯದ ಬಹು ನಿರೀಕ್ಷಿಯ ಸಿನಿಮಾ ‘ಗೋಟ್’(Goat). ಸೈನ್ಸ್-ಫಿಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ. ‘ಗೋಟ್’ ಬಿಡುಗಡೆಗೆ ಸಜ್ಜಾಗಿದ್ದು, ದಿನಾಂಕ ರಿವೀಲ್ ಮಾಡಿದೆ ಚಿತ್ರತಂಡ.
‘ಗೋಟ್’(Goat). ಸಿನಿಮಾ ಸೆಪ್ಟೆಂಬರ್ 5ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ನಟ ವಿಜಯ್ (Thalapathy Vijay) ಹಾಗೂ ಚಿತ್ರತಂಡ ಸಿನಿಮಾ ರಿಲೀಸ್ ಪೋಸ್ಟರ್ ಹಂಚಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸೈನ್ಸ್- ಫಿಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡಿದ್ದಾರೆ. ಯುವನ್ ಶಂಕರ್ ರಾಜ ಸಂಗೀತ ನಿರ್ದೇಶನ ‘ಗೋಟ್’ ಚಿತ್ರಕ್ಕಿದ್ದು, ಸಿನಿಮಾ ಬಿಡುಗಡೆ ದಿನಾಂಕ ಕೇಳಿ ದಳಪತಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿರೋ ಈ ಚಿತ್ರದಲ್ಲಿ ಡ್ಯುಯೆಲ್ ರೋಲ್ ಪ್ಲೇ ಮಾಡಿದ್ದಾರೆ ವಿಜಯ್(Thalapathy Vijay). ‘ಗೋಟ್’ ಚಿತ್ರದ ಪೆಪ್ಪಿ ನಂಬರ್ ಸಾಂಗ್ಗೆ ವಿಜಯ್ ಜೊತೆ ಇಂಡಿಯನ್ ಮೈಕಲ್ ಜಾಕ್ಸನ್ ಪಭುದೇವ(Prabhudheva) ಕೂಡ ಹೆಜ್ಜೆ ಹಾಕ್ತಿರೋದು ಚಿತ್ರದ ಥ್ರಿಲ್ಲಿಂಗ್ ಸಂಗತಿ.
‘ಗೋಟ್’(Goat) ವಿಜಯ್ 68ನೇ ಸಿನಿಮಾವಾಗಿದ್ದು ಇದಲ್ಲದೇ 69ನೇ ಚಿತ್ರಕ್ಕೂ ಸಹಿ ಮಾಡಿದ್ದಾರೆ. ಈ ಸಿನಿಮಾ ನಂತರ ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ದಳಪತಿ ತೊಡಗಿಕೊಳ್ಳಲಿದ್ದಾರೆ. ಸದ್ಯ ಸಿನಿಮಾ ಜೊತೆಗೆ ತಮ್ಮ ರಾಜಕೀಯ ಪಕ್ಷವನ್ನು ಬಲ ಪಡಿಸುವತ್ತಲೂ ಗಮನ ಹರಿಸುತ್ತಿದ್ದಾರೆ.