Prabhas: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಸಿಕ್ಕಾಪಟ್ಟೇ ಬ್ಯುಸಿಯಾಗಿದ್ದಾರೆ. ಆಫ್ಟರ್ ಬಾಹುಬಲಿ ಸಾಲು ಸಾಲು ಸೋಲುಂಡ ಪ್ರಭಾಸ್ ‘ಸಲಾರ್’(Salaar) ಮೂಲಕ ಕಂ ಬ್ಯಾಕ್ ಮಾಡಿದ್ದಾರೆ. ಆ ಖುಷಿಯಲ್ಲೇ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸದ್ಯ ಅವರ ಹೊಸ ಸಿನಿಮಾ ನಯಾ ಅಪ್ಡೇಟ್ ಡಾರ್ಲಿಂಗ್ ಅಭಿಮಾನಿಗಳಿಗೆ ಸಂತಸ ನೀಡಿದೆ.
ಹೊಸ ವರ್ಷಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದ ಪ್ರಭಾಸ್ ‘ದಿ ರಾಜಾ ಸಾಬ್’(The Raja Saab) ಆಗಿ ತೆರೆ ಮೇಲೆ ಬರಲಿದ್ದಾರೆ. ಯುವ ನಿರ್ದೇಶಕ ಮಾರುತಿ ಜೊತೆ ಕೈ ಜೋಡಿಸಿರುವ ಪ್ರಭಾಸ್ ಫಸ್ಟ್ ಲುಕ್ನಲ್ಲಿ ಗಮನ ಸೆಳೆದಿದ್ರು. ಶೂಟಿಂಗ್ನಲ್ಲಿ ಬ್ಯುಸಿ ಇರುವ ಸಿನಿಮಾತಂಡದಿಂದ ಹೊಸ ಅಪ್ಡೇಟ್ ಹೊರಬಿದ್ದಿದ್ದು, ಚಿತ್ರದಲ್ಲಿ ಡಾನ್ಸಿಂಗ್ ನಂಬರ್ ಸಾಂಗ್ ಇರಲಿದ್ದು, ಪ್ರಭಾಸ್(Prabhas) ಸಖತ್ ಸ್ಪೆಪ್ ಹಾಕಲಿದ್ದಾರಂತೆ. ಪ್ರಭಾಸ್ ಜೊತೆ ನಟಿ ನಿಧಿ ಅಗರ್ವಾಲ್(Nidhi Agerwal) ಸೊಂಟ ಬಳುಕಿಸಲಿದ್ದು, ಇಬ್ಬರ ಹೈ ವೋಲ್ಟೇಜ್ ಡಾನ್ಸ್ಗೆ ಸಾಕ್ಷಿಯಾಗಲಿದೆ ಸಿನಿಮಾ.
ಸದ್ಯ ‘ದಿ ರಾಜಾ ಸಾಬ್’(The Raja Saab) ಅಂಗಳದಿಂದ ತೇಲಿ ಬಂದಿರೋ ಈ ಸುದ್ದಿ ಕೇಳಿ ಡಾರ್ಲಿಂಗ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಈ ಸುದ್ದಿ ನಿಜವಾಗ್ಲಿ ಅಂತಿದ್ದಾರೆ. ಇದು ನಿಜವೇ ಆದ್ರೆ ಆಪ್ಟರ್ ಲಾಂಗ್ ಗ್ಯಾಪ್ ಬಳಿಕ ಪ್ರಭಾಸ್(Prabhas) ಮೈ ಚಳಿ ಬಿಟ್ಟು ಕುಣಿಯೋದನ್ನೂ ಕಣ್ತುಂಬಿಕೊಳ್ಳಲಿದೆ ಭಕ್ತಗಣ. ರೋಮ್ಯಾಂಟಿಕ್ ಹಾರಾರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕ ಮೋಹನನ್, ರಿದ್ಧಿ ಕುಮಾರ್, ಯೋಗಿ ಬಾಬು, ವರಲಕ್ಷ್ಮಿ ಶರತ್ ಕುಮಾರ್ ಒಳಗೊಂಡ ತಾರಾಗಣವಿದೆ. ತಮನ್.ಎಸ್(Thaman S), ಮ್ಯೂಸಿಕ್ ಸಿನಿಮಾಗಿದೆ.