Challenging Star Darshan: ʻಕಾಟೇರʼ(Katera) ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ನಟ ಚಾಲೆಂಜಿಗ್ ಸ್ಟಾರ್ ದರ್ಶನ್(Challenging Star Darshan) ಸದ್ಯʻಡೆವಿಲ್ʼ(Devil) ಅವತಾರ ತಾಳಿರುವ ದಚ್ಚು ಅಕ್ಟೋಬರ್‌ನಲ್ಲಿ ಡೆವಿಲ್ ಕನ್ಫರ್ಮ್ ಅಂತಿದ್ದಾರೆ.
‘ತಾರಕ್’ ಸಿನಿಮಾ ನಂತರ ಮಿಲನ ಪ್ರಕಾಶ್(Milana Prakash), ದರ್ಶನ್(Darshan) ಒಂದಾಗಿರುವ ಸಿನಿಮಾ ಡೆವಿಲ್(Devil). ಟೈಟಲ್, ದರ್ಶನ್ ಲುಕ್, ಟೀಸರ್ ಝಲಕ್ ಎಲ್ಲವೂ ‘ಡೆವಿಲ್’ ಬಗ್ಗೆ ಥ್ರಿಲ್ ಆಗುವಂತೆ ಮಾಡಿದೆ. ಡೆವಿಲ್ ಅಖಾಡಕ್ಕೆ ಇಳಿದಿರುವ ದಚ್ಚುಗೆ ಶೂಟಿಂಗ್ ಸಮಯದಲ್ಲಿ ಎಡಗೈಗೆ ಪೆಟ್ಟು ಬಿದ್ದಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಿರುವಾಗ ಶತಾಯ ಗತಾಯ ಡೆವಿಲ್ ಅಕ್ಟೋಬರ್‌ನಲಲಿ ರಿಲೀಸ್ ಮಾಡೇ ಮಾಡ್ತೀವಿ ಅಂತಿದ್ದಾರೆ ಚಾಲೆಂಜಿಂಗ್ ಸ್ಟಾರ್.
‘ಡೆವಿಲ್’(Devil) ಸಿನಿಮಾ ಸೆಟ್ಟೇರಿದಾಗಲೇ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ಇದೆ ಎಂದು ಚಿತ್ರತಂಡ ತಿಳಿಸಿತ್ತು. ಅದರಂತೆ ಕಳೆದ ತಿಂಗಳಿಂದ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್ ವೇಳೆ ದಚ್ಚು ಎಡಗೈಗೆ ಏಟಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಒಂದು ತಿಂಗಳ ರೆಸ್ಟ್. ಮೂರು ತಿಂಗಳು ಜಿಮ್ ಮಾಡವಂತಿಲ್ಲ ಎಂದಿದ್ದಾರೆ ಡಾಕ್ಟರ್. ಆದ್ರೆ ದರ್ಶನ್(Darshan) ಮಾತ್ರ ಹೆಚ್ಚು ದಿನ ವಿಶ್ರಾಂತಿ ಪಡೆಯದೇ ಆದಷ್ಟು ಬೇಗ ಚೇತರಿಸಿಕೊಂಡು ಹೇಗಾದ್ರೂ ಸರಿ ಚಿತ್ರೀಕರಣ ಮುಗಿಸಿಕೊಡುತ್ತೇನೆ. ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ತರೋದಂತೂ ಫಿಕ್ಸು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅಲ್ಲಿಗೆ ಈ ಬಾರಿ ದಸರಾಗೆ ದಾಸನ ಕಡೆಯಿಂದ ಅಭಿಮಾನಿಗಳಿಗೆ ‘ಡೆವಿಲ್’ ಉಡುಗೊರೆಯಾಗಿ ಸಿಗೋದು ಕನ್ಫರ್ಮ್ ಆಗಿದೆ.