Darshan: ಮೈಸೂರು ಅರಮನೆಯಲ್ಲಿ ಹಲವು ವರ್ಷಗಳ ಕಾಲ ಅಂಬಾರಿ ಹೊತ್ತ ಅರ್ಜುನ ಆನೆ ಸಾವು ಕರುನಾಡ ಕರುಳ ಹಿಂಡಿದ್ದು ಗೊತ್ತಿರುವ ವಿಚಾರ. ಆದ್ರೆ ಅದರ ಸಾವಿನಲ್ಲೂ ರಾಜಕೀಯ ಮಾಡೋರಿಗೆ, ಅರ್ಜುನ ಆನೆ ಸಾವಿನ ಸಿಂಪತಿಯಲ್ಲಿ ಹಣ ಕೀಳುವವರನ್ನು ಏನೆನ್ನಬೇಕು. ಮನುಷತ್ವ ಕಳೆದಕೊಂಡ ಮನಸ್ಥಿತಿಗೆ ಹಿಡಿ ಶಾಪಹಾಕಬೇಕಾ..? ಹಣಕ್ಕಾಗಿ ಹೆಣವನ್ನು ಬಳಸಿಕೊಳ್ಳುತ್ತಾರೆಂದರೆ ಸಮಾಜ ಎತ್ತ ಸಾಗುತ್ತಿದೆ ಎಂದು ಮರುಕ ಪಡಬೇಕಾ..? ಇಂತಹದ್ದೊಂದು ಹಂತಕ್ಕೆ ಎಲ್ಲರನ್ನು ಕೊಂಡೊಯ್ದಿದ್ದಾನೆ ಮೈಸೂರಿನ ಯುವಕ.
ಅರ್ಜುನನ ಸಮಾಧಿ ಆದಷ್ಟು ಬೇಗ ಮಾಡಿ, ಮಳೆಗಾಲದೊಳಗೆ ಅದಕ್ಕೊಂದು ನೆಲೆ ಕಾಣಿಸಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಮನವಿ ಮಾಡಿಕೊಂಡಿದ್ರು. ತಾವೇ ನಿಂತು ಒಂದಿಷ್ಟು ಸಹಾಯ ಹಸ್ತ ನೀಡೋದಾಗಿ ತಿಳಿಸಿದ್ರು. ಈ ಹೇಳಿಕೆಯನ್ನು ಬಳಸಿಕೊಂಡ ಮೈಸೂರಿನ ನವೀನ ಎಂಬಾತ ಅರ್ಜುನ ಸಮಾಧಿಗೆ ಹಣ ಕೇಳಲು ಆರಂಭಿಸಿದ್ದಾನೆ. ಸಮಾಧಿ ಮಾಡುತ್ತೇನೆಂದು ತನ್ನ ಅಕೌಂಟ್ಗೆ ಹಣವನ್ನು ಜಮಾ ಮಾಡಿಕೊಂಡಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಯೂ ಹಣ ಪಡೆದಿದ್ದಾನೆ. ಸಮಾಧಿಗೆಂದು ದರ್ಶನ್ ಕಲ್ಲುಗಳನ್ನು ನೀಡಿದ್ದಾರೆ. ಆದರೆ ಈತ ಅದನ್ನೂ ಮಾರಿಕೊಂಡು ದೋಖಾ ಮಾಡಿದ್ದಾನೆ. ಅರಣ್ಯ ಇಲಾಖೆಗೂ ಯಾಮಾರಿಸಿದ್ದಾನೆ.
ದರ್ಶನ್(Darshan) ಹೆಸರಲ್ಲಿ ಇದೆಲ್ಲಾ ನಡೆಯುತ್ತಿದೆ ಎಂದು ಗೊತ್ತಾದಾಗ ಅವ್ರ ಅಭಿಮಾನಿಗಳು ಈ ಮೋಸದ ಜಾಲವನ್ನು ಬಟಾ ಬಯಲು ಮಾಡಿ. ಯಾರೂ ಕೂಡ ಹಣ ನೀಡದಂತೆ ಮನವಿ ಮಾಡಿದ್ದಾರೆ. ಅರ್ಜುನ ಪಡೆ ವಾಟ್ಸಾಪ ಗ್ರೂಪ್ ಮೂಲಕ ದರ್ಶನ್ ಅಭಿಮಾನಿ ನವೀನ್ ಹಣ ಸಂಗ್ರಹಿಸಿ ಯಾಮಾರಿಸಿದ್ದಾನೆ. ಇತ್ತ ಅರಣ್ಯ ಇಲಾಖೆ ಕೂಡ ಅರ್ಜುನ ಆನೆ ಸಮಾಧಿಗೆ ತಲೆ ಕೆಡಿಸಿಕೊಂಡಿಲ್ಲ, ಅತ್ತ ದರ್ಶನ್(Darshan) ಅಭಿಮಾನಿಗಳಿಗೂ ಸಮಾಧಿ ಮಾಡಲು ಬಿಡುತ್ತಿಲ್ಲ. ಇಂತಹ ಸನ್ನಿವೇಶವನ್ನು ಬಳಸಿಕೊಂಡು ಅಭಿಮಾನಿ ಹೆಸರಲ್ಲಿ ಹಣ ಸಂಗ್ರಹಿಸಿ ದಾಸನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ ನವೀನ್.