Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದಾ ಟಾಕ್ ನಲ್ಲಿರುವ ನಟಿ. ಅದು ಪರ್ಸನಲ್ ವಿಷ್ಯ ಇರಲಿ, ಸಿನಿಮಾ ಇರಲಿ, ನೆಗೆಟಿವ್ ಇರಲಿ, ಪಾಸಿಟಿವ್ ಇರಲಿ ಒಟ್‌ನಲ್ಲಿ ಸದಾ ಟ್ರೆಂಡ್ ನಲ್ಲಿ ಇರೋ ನಟಿ. ಸೌತ್ ಸಿನಿರಂಗದ ಸ್ಟಾರ್ ಹೀರೋಗಳ ಜೊತೆ ಮಿಂಚಿ ಬಾಲಿವುಡ್ ಅಂಗಳದಲ್ಲೂ ಕ್ರೇಜ್ ಸೃಷ್ಟಿಸಿರುವ ರಶ್ಮಿಕಾ ಮೋಸ್ಟ್ ಬ್ಯುಸಿಯೆಸ್ಟ್ ನಟಿಮಣಿ. ಸದ್ಯ ಸಿನಿಮಾ ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಜಪಾನ್ ನಲ್ಲಿ ಜಾಲಿ ಮೂಡ್ ನಲ್ಲಿರುವ ಕಿರಿಕ್ ಪಾರ್ಟಿ ಹುಡುಗಿಗೆ ಬ್ಯಾಡ್ ನ್ಯೂಸ್ ಒಂದು ಜಾಲಿ ಮೂಡ್ ನಲ್ಲಿ ಸ್ಯಾಡ್ ತಂದಿದೆ. ಅದುವೇ ʻಡೀಪ್ ಫೇಕ್ʻ ವಿಡಿಯೋ.
ಹೌದು, ಮತ್ತೊಮ್ಮೆ ನ್ಯಾಶನಲ್ ಕ್ರಶ್ ʻಡೀಪ್ ಫೇಕ್ʻ ವಿಡಿಯೋಗೆ ಬಲಿಪಶುವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ವಿಡಿಯೋವೊಂದು ಹರಿದಾಡ್ತಿದೆ. ಡೀಪ್ ಫೇಕ್ ಬಗ್ಗೆ ಅರಿವಿಲ್ಲದ ಕೆಲ ಜನರು ರಶ್ಮಿಕಾ ಮಂದಣ್ಣ ಎಂದೇ ಭಾವಿಸಿ ತರಹೇವಾರಿ ಕಮೆಂಟ್ ಹಾಕುತ್ತಿದ್ದಾರೆ. ಅದ್ರಲ್ಲೂ ವಿಡಿಯೋ ರಶ್ ಫ್ಯಾನ್ ಪೇಜ್ ನಲ್ಲೇ ಇರೋದ್ರಿಂದ ಅವ್ರ ಅಭಿಮಾನಿಗಳು ಕನ್ ಫ್ಯೂಸ್ ಆಗಿದ್ದಾರೆ. ಇದನ್ನು ಕಂಡು ಕೆಲವರು ಬೇಜಾರ್ ಆದ್ರೆ ಇನ್ ಕೆಲವರು ಥೋ ಇವ್ರಿಗೇನು ಬಂದಿರೋದಂತಾ ನೆಗೆಟಿವ್ ಕಮೆಂಟ್ ಹಾಕುತ್ತಿದ್ದಾರೆ. ಆದ್ರೆ ಇದು ಅಸಲಿಯಾಗಿ ರಶ್ಮಿಕಾ ಮಂದಣ್ಣ ಅಲ್ಲ. ಯಾರದ್ದೋ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಹಾಕಿ ಮಾಡಿದ ʻಡೀಪ್ ಫೇಕ್ʻ ವಿಡಿಯೋ. ಇದಕ್ಕೂ ಮೊದಲು ಇಂತಹದ್ದೊಂದು ಕುತಂತ್ರಿಗಳ ಬಲೆಗೆ ರಶ್ಮಿಕಾ ಬಲಿಯಾಗಿದ್ರು. ಈ ಬಗ್ಗೆ ಬಹಳಷ್ಟು ಮಂದಿ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ರು. ಆ ಕೆಲಸ ಮಾಡಿದಾತನನ್ನು ಬಂಧಿಸಿದ್ರು ಕೂಡ. ಇದಾದ ನಂತರ ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಬಹಳ ಗಂಭೀರವಾಗಿ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ತಿಳಿಸಿತ್ತು. ಆದ್ರೆ ಈ ಬಗ್ಗೆ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿದಂತಿಲ್ಲ. ಮತ್ತದೇ ವಿಕೃತಿಯನ್ನು ಮೆರೆಯುತ್ತಿದ್ದಾರೆ.
ಕೇವಲ ರಶ್ಮಿಕಾ ಮಂದಣ್ಣ ಮಾತ್ರವಲ್ಲ ಹಲವು ಸಿನಿ ತಾರೆಯರು, ಕ್ರೀಡಾಪಟುಗಳು ಈ ʻಡೀಪ್ ಫೇಕ್ʻ ತಂತ್ರಜ್ಞಾನದ ಬಲೆಗೆ ಬಲಿಪಶುವಾಗುತ್ತಿದ್ದಾರೆ. ಪದೇ ಪದೇ ನ್ಯಾಶನಲ್ ಕ್ರಶ್ ಈ ರೀತಿ ವೈರಲ್ ಆಗ್ತಿರೋದು ಅವರ ಅಪಾರ ಅಭಿಮಾನಿ ಬಳಗಕ್ಕೆ ಬಹಳ ಬೇಸರ ತರಿಸಿದೆ. ಈ ವೈರಲ್ ವಿಡಿಯೋ ಬಗ್ಗೆ ರಶ್ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಬಹುಶಃ ಇದನ್ನು ಜಂಟಲ್ ಮೂವ್ ಎನ್ನಬಹುದಾ ಅಥವಾ ಇದಕ್ಕೆಲ್ಲ ರಿಯಾಕ್ಟ್ ಮಾಡೋ ಬದಲು ಸದ್ದಿಲ್ಲದೇ ಕ್ರಮಕ್ಕೆ ಮುಂದಾಗಿದ್ದರೋ ಇನ್ನೂ ತಿಳಿದುಬಂದಿಲ್ಲ. ಆದ್ರೆ ಇಲ್ಲಿ ಕಾಡೋ ಪ್ರಶ್ನೆ ಜನ ಸಾಮಾನ್ಯರಿಗೆ ಈ ರೀತಿಯ ಪರಿಸ್ಥಿತಿ ಎದುರಾದ್ರೆ ಹೇಗೆ..? ಈ ಬಗ್ಗೆ ಸ್ಟ್ರಾಂಗ್ ಆದ ಕ್ರಮವೊಂದು ಆದಷ್ಟು ಬೇಗ ತೆಗೆದುಕೊಳ್ಳಬೇಕಾದ ಜಾರೂರತ್ತಿರೋದಂತೂ ಸತ್ಯ.