‘ಸಿಂಘಂ’ ಸರಣಿಯ ಎರಡು ಸಿನಿಮಾಗಳ ಮೂಲಕ ಬಾಲಿವುಡ್ನಲ್ಲಿ ಗೆಲುವು ಸಾಧಿಸಲು ಯಶಸ್ವಿಯಾಗಿರುವ ನಟ ಅಜಯ್ ದೇವಗನ್ ಈಗ ‘ಸಿಂಘಂ 3’ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ‘ಸಿಂಘಂ 3’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಇದೇ ವರ್ಷಾಂತ್ಯಕ್ಕೆೆ ‘ಸಿಂಘಂ 3’ ಸಿನಿಮಾದ ಶೂಟಿಂಗ್ ಆರಂಭಿಸುವ ಯೋಚನೆಯಲ್ಲಿದೆ ಚಿತ್ರತಂಡ.
ಇನ್ನು ‘ಸಿಂಘಂ’ ಸರಣಿ ಸಿನಿಮಾಗಳಲ್ಲಿದ್ದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ‘ಸಿಂಘಂ 3’ ಸಿನಿಮಾದಲ್ಲೂ ಮುಂದುವರೆಯಲಿದ್ದಾರೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. ಈ ಸಿನಿಮಾದಲ್ಲೂ ಅಜಯ್ ದೇವಗನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಸಿನಿಮಾದಲ್ಲಿ ಅಜಯ್ ದೇವಗನ್ ಸಹೋದರಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಶಾರುಖ್ ಜೊತೆ ‘ಪಠಾಣ್’ ಸಿನಿಮಾದಲ್ಲಿ ನಟಿಸಿ ಗೆಲುವಿನ ನಗೆ ಬೀರಿದ್ದ ದೀಪಿಕಾ ಪಡುಕೋಣೆ ‘ಸಿಂಘಂ 3’ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಕೇಳಿ ಇಷ್ಟಪಟ್ಟಿದ್ದಾರೆ.
ನಿರ್ಮಾಪಕ ರೋಹಿತ್ ಶೆಟ್ಟಿ ನಿರ್ಮಾಣದ ‘ಸಿಂಘಂ 3’ ಸಿನಿಮಾದಲ್ಲಿ ದೀಪಿಕಾ ಲೇಡಿ ಸಿಂಘಂ ಆಗಿ ಕಾಣಿಸಿಕೊಳ್ಳಲಿದ್ದು, ದೀಪಿಕಾ- ಅಜಯ್ ಇಬ್ಬರ ಪಾತ್ರಕ್ಕೂ ಬಹಳಷ್ಟು ಪ್ರಾಮುಖ್ಯತೆಯಿದೆ. ತಮ್ಮ ಪಾತ್ರದ ಬಗ್ಗೆೆ ಥ್ರಿಲ್ ಆಗಿರುವ ದೀಪಿಕಾ ಸಿನಿಮಾಕ್ಕಾಾಗಿ 50 ದಿನಗಳ ಕಾಲ್ಶೀಟ್ ಕೂಡ ನೀಡಿದ್ದಾರೆ ಎನ್ನುವುದು ಬಾಲಿವುಡ್ ಮೂಲಗಳ ಮಾಹಿತಿ.