Dhanush: ನಟ ಧನುಷ್(Dhanush) ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸದಾ ಬ್ಯುಸಿ ಇರುವ ಸೌತ್ ಇಂಡಿಯನ್ ನಟ. ತಮ್ಮ ಅದ್ಭುತ ನಟನೆ, ಮ್ಯಾನರಿಸಂ, ಸಿನಿಮಾಳ ಆಯ್ಕೆ ಎಲ್ಲದರಲ್ಲೂ ವಿಶೇಷ ಅಭಿಮಾನಿ ಬಳಗ ಹೊಂದಿರುವ ಧನುಷ್ ಸದ್ಯ ‘ಕುಬೇರ’(Kubera) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡದಿಂದ ಹೊಸ ಅಪ್ಡೇಟ್ ಸಿಕ್ಕಿದ್ದು, ಸುದ್ದಿ ಕೇಳಿ ಧನುಷ್ ಅಭಿಮಾನಿ ಬಳಗ ಥ್ರಿಲ್ ಆಗಿದೆ.
‘ಕುಬೇರ’(Kubera) ಸಿನಿಮಾ ಶೂಟಿಂಗ್ ಕಳೆದ ವಾರದಿಂದ ಆರಂಭವಾಗಿದೆ. ಮುಂಬೈನಲ್ಲಿ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ನಟಿ ರಶ್ಮಿಕಾ ಮಂದಣ್ಣ(Rashmika Mandanna) ಇದೇ ಮೊದಲ ಬಾರಿಗೆ ಧನುಷ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದು, ಸಖತ್ ಎಕ್ಸೈಟ್ ಆಗಿದ್ದಾರೆ. ಇದೀಗ ಚಿತ್ರತಂಡ ಟೀಸರ್ ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ. ಮೇ2ರಂದು ‘ಕುಬೇರ’ ಟೀಸರ್ ಬಿಡುಗಡೆಯಾಗುತ್ತಿದೆ. ಸಿಡಿಲಬ್ಬರದ ಟೀಸರ್ ಬಿಡುಗಡೆ ಮಾಡೋದಾಗಿ ಪೋಸ್ಟ್ ಹಂಚಿಕೊಂಡಿದೆ.
ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಿನಿಮಾ ಇದಾಗಿದ್ದು, ಟೈಟಲ್, ಫಸ್ಟ್ ಲುಕ್ ಮೂಲಕ ಗಮನ ಸೆಳೆದ ಚಿತ್ರದ ಟೀಸರ್ ನೋಡಲು ಕಾತುರರಾಗಿದ್ದಾರೆ ಸಿನಿಪ್ರಿಯರು. ಚಿತ್ರದಲ್ಲಿ ಧನುಷ್(Dhanush) ಮಾಫಿಯಾ ಲಾರ್ಡ್ ಹಾಗೂ ಕಡು ಬಡತನದ ರೋಲ್ ಎರಡು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಸಿಗಲಿದ್ದಾರೆ ಅನ್ನೋದು ಈ ಚಿತ್ರದ ವಿಶೇಷ.