Dhanush: ಧನುಷ್(Dhanush) ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಯನ್(Raayan) ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ಕುಬೇರ(Kubera), ಇಳಯರಾಜ(Ilaiyaraja) ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಸುರನ್ ನಟ ರಾಯನ್ ಮೂಲಕ ಬಿಗ್ ಸ್ಕ್ರೀನ್ ಮೇಲೆ ರಂಜಿಸಲು ಬರ್ತಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಸೆಟ್ಟೇರಿದ ರಾಯನ್ ಸಿನಿಮಾ ಡಿಸೆಂಬರ್‌ನಲ್ಲಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿತ್ತು. ಧನುಷ್(Dhanush) ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರ್ತಿರುವ ತಮಿಳು ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದೆ. ಈ ಚಿತ್ರದ ಜೊತೆಗೆ ಬೇರೆ ಸಿನಿಮಾಗಳ ನಟನೆಯಲ್ಲಿ ಧನುಷ್ ಬ್ಯುಸಿಯಾಗಿದ್ದರಿಂದ ರಾಯನ್ ಬಿಡುಗಡೆ ಲೇಟ್ ಆಗಿತ್ತು. ಆದ್ರೀಗ ಚಿತ್ರತಂಡ ಸರ್ವ ರೀತಿಯಲ್ಲೂ ಬಿಡುಗಡೆಗೆ ಸಜ್ಜಾಗಿ ಬಿಡುಗಡೆ ದಿನಾಂಕ ರಿವೀಲ್ ಮಾಡಿದೆ. ಈ ಬಿಡುಗಡೆ ದಿನಾಂಕವೀಗ ಕಾಲಿವುಡ್ ಅಂಗಳದಲ್ಲಿ ಗುಸುಗುಸು ಪಿಸುಪಿಸುಗೆ ಕಾರಣವಾಗಿದೆ. ಅಂದ್ಹಾಗೆ ರಾಯನ್ ಸಿನಿಮಾ ಜೂನ್ 13ಕ್ಕೆ ಬಿಡುಗಡೆಯಾಗುತ್ತಿದೆ.
ಒಂದು ವೇಳೆ ಧನುಷ್ ಸಿನಿಮಾ ಜೂನ್ ತಿಂಗಳಲ್ಲೇ ಬಂದರೇ ಹಲವು ಸಿನಿಮಾಗಳೊಂದಿಗೆ ಕ್ಲ್ಯಾಶ್ ಆಗುವ ಸಾಧ್ಯತೆ ಇದೆ. ಈಗಾಗಲೇ ಪ್ರಭಾಸ್ ʼಕಲ್ಕಿʼ(Kalki), ಕಮಲ್ ಹಾಸನ್(Kamal Haasan) ʼಇಂಡಿಯನ್2ʼ ಹಾಗೂ ಚಿಯಾನ್ ವಿಕ್ರಮ್ ‘ತಂಗಳನ್’(Thanagalaan) ಚಿತ್ರಗಳು ಜೂನ್‌ನಲ್ಲೆ ತೆರೆ ಕಾಣೋದಾಗಿ ಅನೌನ್ಸ್ ಮಾಡಿವೆ. ಅದರಲ್ಲೂ ವಿಕ್ರಮ್ ತಂಗಳನ್ ಜೂನ್ 12ಕ್ಕೆ ಬಿಡುಗಡೆಯಾಗ್ತಿದೆ. ಈ ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳು. ಈ ಚಿತ್ರಗಳ ಜೊತೆಗೆ ಧನುಷ್ ಸಿನಿಮಾ ಕಾಂಪಿಟೇಶನ್‌ಗೆ ನಿಲ್ಲಲಿದೆ, ಚಿತ್ರಮಂದಿರದಲ್ಲಿ ಕ್ಲ್ಯಾಶ್ ಆಗುವ ಸಾಧ್ಯತೆ ಹೆಚ್ಚಿದೆ. ಇಂಟ್ರಸ್ಟಿಂಗ್ ಸಂಗತಿಯಂದ್ರೆ 2016ರಲ್ಲಿ ಧನುಷ್ ‘ತೊಡರಿ’ ಹಾಗೂ ವಿಕ್ರಮ್ ‘ಇರು ಮಗನ್’ ಒಂದೇ ಡೇಟ್ ರಿಲೀಸ್ ಆಗಿ ಕ್ಲ್ಯಾಶ್ ಆಗಿತ್ತು. ಎಂಟು ವರ್ಷದ ಬಳಿಕ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಎದುರು ಬದಲಾಗಲಿವೆ.
ರಾಯನ್(Raayan) ಸಿನಿಮಾ ಧನುಷ್(Dhanush) ನಿರ್ದೇಶನದಲ್ಲಿ ಬರ್ತಿರೋದ್ರಿಂದ ಫ್ಯಾನ್ಸ್‌ಗೆ ಈ ಸಿನಿಮಾ ತುಸು ಹೆಚ್ಚೇ ಸ್ಪೆಷಲ್. ಆಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಚಿತ್ರಕ್ಕೆ ಧನುಷ್ ಕಥೆ ಬರೆದು ನಿರ್ದೇಶನ ಹಾಗೂ ನಟನೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಧನುಷ್ ನಿರ್ದೇಶನದ ಎರಡನೇ ಸಿನಿಮಾ ಅನ್ನೋದು ಒಂದ್ಕಡೆಯಾದ್ರೆ, ಧನುಷ್ ವೃತ್ತಿ ಜೀವನದ 50ನೇ ಸಿನಿಮಾ ಅನ್ನೋದು ಚಿತ್ರದ ವಿಶೇಷತೆ. ದೊಡ್ಡ ತಾರಾಬಳಗ, ಸ್ಟಾರ್ ಟೆಕ್ನಿಶಿಯನ್ ಈ ಚಿತ್ರದ ಭಾಗವಾಗಿದ್ದಾರೆ. ಎ.ಆರ್.ರೆಹಮಾನ್(A.R.Rahman) ಸಂಗೀತ ಚಿತ್ರಕ್ಕಿದ್ದು, ಪ್ರಕಾಶ್ ರಾಜ್, ಎಸ್.ಜೆ, ಸೂರ್ಯ, ದುಶಾರ ವಿಜಯನ್, ಸಂದೀಪ್ ಕಿಶನ್, ಜೈರಾಮ್ ಸೇರಿದಂತೆ ಬಹುದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಬಿಡುಗಡೆ ದಿನಾಂಕ ಅನೌನ್ಸ್ ಮಾಡಿರುವ ರಾಯನ್ ತಂಡ ಸಿನಿಮಾ ಪ್ರಮೋಶನ್ ಕೂಡ ಆರಂಭಿಸಿದೆ. ಮೇ 9ಕ್ಕೆ ಮೊದಲ ಸಾಂಗ್ ಬಿಡುಗಡೆಯಾಗ್ತಿದೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಬಝ್ ಸೃಷ್ಟಿಸಲು ರೆಡಿಯಾಗಿದೆ ಧನುಷ್(Dhanush) ಸಿನಿಮಾ.