ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಹೊತ್ತಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ. ತಮ್ಮ ಫಾರ್ಮ್‌ಹೌಸ್‌ನಲ್ಲಿ ಅದ್ದೂರಿಯಾಗಿ ನೇಮಿಂಗ್ ಸೆರಮನಿ ಹಮ್ಮಿಕೊಂಡಿದ್ದು, ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೇ ಸರ್ಜಾ ಕುಟುಂಬಸ್ಥರು ಆಂಜನೇಯ ಪರಮ ಭಕ್ತರು. ನಟ ಧ್ರುವ ಕೂಡ ಅಪ್ಪಟ ಹನುಮನ ಭಕ್ತ. ಮನೆಯಲ್ಲಿ, ಮನದಲ್ಲಿ ಸದಾ ಹನುಮಂತನ ಸ್ಮರಣೆ ಮಾಡುವ ಅದ್ದೂರಿ ಹೀರೋ, ಮಾರುತಿಯ ಆಶೀರ್ವಾದದೊಂದಿಗೆ ಎಲ್ಲಾ ಶುಭಕಾರ್ಯಗಳನ್ನ ಪ್ರಾರಂಭಿಸ್ತಾರೆ. ಅದರಂತೇ, ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಶುಭಗಳಿಗೆಯಲ್ಲಿ ತಮ್ಮ ಮನೆಯಲ್ಲಿ ಶುಭಕಾರ್ಯ ಹಮ್ಮಿಕೊಂಡಿದ್ದಾರೆ. ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೆ ಮುತ್ತಿನಂತಹ ಹೆಸರಿಟ್ಟು ಸಂಭ್ರಮಿಸಿದ್ದಾರೆ. ಸರ್ಜಾ ಕುಟುಂಬಸ್ಥರು, ಆಪ್ತರು, ಬಂಧು-ಮಿತ್ರರು ಬಹದ್ದೂರ್ ಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿ ಶುಭಹಾರೈಸಿದ್ದಾರೆ.