ಈಗಂತೂ ಧಾರಾವಾಹಿಗಳು ಅದೆಷ್ಟು ಜನರನ್ನು ತನ್ನತ್ತ ಸೆಳೆದಿವೆ ಅಂದರೆ ಎಣಿಸಲು ಕಷ್ಟಸಾಧ್ಯ. ಕಿರುತೆರೆ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಳ್ಳೊಳ್ಳೆ ಕಥೆ ಹೊತ್ತ ಸೀರಿಯಲ್ಗಳು ಸಹ ಬರ್ತಿವೆ. ತಮ್ಮ ಕುಟುಂಬದ ಭಾಗವೇನೋ ಎಂಬಂತೆ ತಮ್ಮ ನೆಚ್ಚಿನ ಧಾರಾವಾಹಿಯ ಪಾತ್ರಗಳನ್ನೂ ಹಚ್ಚಿಕೊಂಡಿರುವ ಸೀರಿಯಲ್ ಪ್ರಿಯರು ಸಾಕಷ್ಟು ಮಂದಿ ಇದ್ದಾರೆ. ಅಂತಹ ಸೀರಿಯಲ್ಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾ ಹೆಚ್ಚು ಜನಪ್ರಿಯತೆ ಗಳಿಸಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಸಹ ಒಂದು. ಆರಂಭದಲ್ಲಿ ಭಾಗ್ಯಲಕ್ಷ್ಮೀಯಾಗಿ ಅಕ್ಕ-ತಂಗಿಯರ ಕಥೆ ಹೇಳಹೊರಟಿದ್ದ ನಿರ್ದೇಶಕರು, ಈಗ ಈ ಧಾರಾವಾಹಿಯನ್ನು ಎರಡು ಕಥೆಗಳಾಗಿ ವಿಂಗಡಿಸಿದ್ದಾರೆ. ಒಂದು ಲಕ್ಷ್ಮೀಬಾರಮ್ಮ, ಇನ್ನೊಂದು ಭಾಗ್ಯಲಕ್ಷ್ಮೀಯಾಗಿ ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಲಕ್ಷ್ಮೀ ಬಾರಮ್ಮ ಸೀರಿಯಲ್ನ ಪ್ರಮುಖ ಪಾತ್ರಗಳಾದ ವೈಷ್ಣವ್(ಶಮಂತ್ಗೌಡ), ಲಕ್ಷ್ಮೀ(ಭೂಮಿಕಾ), ಕೀರ್ತಿ(ತನ್ವಿರಾವ್) ಹೆಚ್ಚು ಗಮನ ಸೆಳೆದಿವೆ. ಮದುವೆಗೂ ಮುಂಚೆ ಇದ್ದ ಪ್ರೇಮವನ್ನೇ ವೈಷ್ಣವ್ ಮದುವೆ ನಂತರವೂ ಮುಂದುವರೆಸಿದ್ದು, ವೈಷ್ಣವ್ ಪ್ರೇಯಸಿಯಾಗಿರುವ ಕೀರ್ತಿ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಅಂದ್ಹಾಗೇ ಈ ಪಾತ್ರಕ್ಕೆ ತನ್ವಿರಾವ್ ಜೀವಕಳೆ ತುಂಬಿದ್ದು, ಸೀರಿಯಲ್ ಪ್ರಿಯರನ್ನೆಲ್ಲಾ ಮೆಚ್ಚಿಸಿದ್ದಾರೆ. ಹೀಗಿರುವಾಗ್ಲೇ ಕೀರ್ತಿ ಬಗ್ಗೆ ಅದೊಂದು ಸುದ್ದಿ ಕೇಳಿಬಂದಿದೆ. ಕೀರ್ತಿ ಪಾತ್ರಧಾರಿ ತನ್ವಿರಾವ್ ಧಾರಾವಾಹಿಯಿಂದ ಹೊರನಡೆಯಲಿದ್ದಾರೆಂಬ ಸುದ್ದಿ ಹಬ್ಬಿದೆ.
ಬಜಾರ್ನಲ್ಲಿ ಜೋರಾಗಿ ಕೇಳಿಬರುತ್ತಿರುವ ಈ ಸುದ್ದಿ ಕೇಳಿ ಕೀರ್ತಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.ಅಸಲಿಗೆ ಈ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ಯಾಕಂದ್ರೆ ಈ ಬಗ್ಗೆ ಕೀರ್ತಿಯಾಗ್ಲೀ ಅಥವಾ ಸೀರಿಯಲ್ ಟೀಮ್ ಆಗ್ಲೀ ಮಾಹಿತಿ ಹಂಚಿಕೊಂಡಿಲ್ಲ. ಅದಾಗ್ಯೂ ಹೀಗೊಂದು ರೂಮರ್ಸ್ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡ್ತಿದೆ. ಕೀರ್ತಿ ಸೀರಿಯಲ್ನಿಂದ ಹೊರಬಂದರೆ ನಾವು ಧಾರಾವಾಹಿನೇ ನೋಡಲ್ಲ, ಯಾಕಂದರೆ ಕೀರ್ತಿ ಪಾತ್ರಾನಾ ಬೇರೆ ಯಾರೂ ಮಾಡಿದ್ರೂ ಸ್ಯೂಟೇಬಲ್ ಆಗಲ್ಲ ಅಂತ ವೀಕ್ಷಕರು ಪ್ಲಸ್ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಅಂದ್ಹಾಗೇ, ಕೀರ್ತಿ ಪಾತ್ರಧಾರಿ ತನ್ವಿರಾವ್ ಒಳ್ಳೆ ಅಭಿನೇತ್ರಿ ಅಂದ್ರೂ ಬಹುಷಃ ತಪ್ಪಾಗಲ್ಲ. ಯಾಕಂದ್ರೆ, ಅಷ್ಟು ಅದ್ಭುತವಾಗಿ ಲಕ್ಷ್ಮೀಬಾರಮ್ಮ ಕ್ಯಾರೆಕ್ಟರ್ಗೆ ಜೀವತುಂಬಿದ್ದಾರೆ. ಬರೀ ಕನ್ನಡ ಮಾತ್ರವಲ್ಲ ಬೇರೆ ಭಾಷೆಯ ಸೀರಿಯಲ್ಗಳಲ್ಲೂ ತನ್ವಿರಾವ್ ಮಿಂಚಿದ್ದಾರೆ. `ಆಕೃತಿ’, `ರಾಧೆಶ್ಯಾಮ’, ತಮಿಳಿನ `ಜಮೆಲ’ ಸೇರಿದಂತೆ ಒಂದಿಷ್ಟು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಕಿರುತೆರೆಗೆ ಕಾಲಿಡುವ ಮುನ್ನ ತನ್ವಿರಾವ್ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಮಾಧುರಿ ದೀಕ್ಷಿತ್ ಜೊತೆ `ಗುಲಾಬ್ ಗ್ಯಾಂಗ್’ ಹಾಗೂ `ರಂಗ್ ಬಿ ರಂಗ್’, `ಗುಲ್ಮೋಹರ್’ ಚಿತ್ರಗಳಲ್ಲಿ ನಟಿಸಿದ್ದರು. ಇಂಟ್ರೆಸ್ಟಿಂಗ್ ಅಂದರೆ ತನ್ವಿ ಭರತನಾಟ್ಯದಲ್ಲೂ ಪ್ರಾವೀಣ್ಯತೆ ಪಡೆದಿದ್ದಾಳೆ. ಕಥಕ್ ಹಾಗೂ ಸೆಮಿಕ್ಲಾಸಿಕಲ್ ನೃತ್ಯವನ್ನ ಕರಗತ ಮಾಡ್ಕೊಂಡಿದ್ದಾಳೆ.