ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

did you know: ಗಂಡಸರೇ ಇಲ್ಲದ ಗ್ರಾಮವೊಂದಿದೆಯಂತೆ!

Majja Webdeskby Majja Webdesk
13/04/2025
in Majja Special
Reading Time: 2 mins read
did you know: ಗಂಡಸರೇ ಇಲ್ಲದ ಗ್ರಾಮವೊಂದಿದೆಯಂತೆ!

Coeur d'Alene, Idaho USA - July 23, 2016: Coeur d'Alene, Idaho USA - 07-23-2016. Young dancer participates in the Julyamsh Powwow on July 23, 2016 at the Kootenai County Fairgrounds in Coeur d'Alene, Idaho.

-ಕಡಿಮೆ ಅಂಕ ಬಂದರೆ ವಿಚ್ಛೇದನವಿಲ್ಲ!

-ಎಂಬತ್ತರ ಅಜ್ಜಿಯ ನೊಣಗಳ ಶಿಖಾರಿ! 

 

ಇಲ್ಲಿ ಅಚಾತುರ್ಯಗಳಾಗಿಲ್ಲ. ಏಕೆಂದರೆ ಈ ಗ್ರಾಮದಲ್ಲಿ ಗಂಡುಗಳಿಗೆ ಪ್ರವೇಶವಿಲ್ಲ. ರೆಬ್ಕಾ ಲೆಲಾಸೊಲಿ ಎಂಬ ಬುಡಕಟ್ಟು ಮಹಿಳೆ ೧೯೯೦ರಲ್ಲಿ ಹಿಂದೆ ಒಣ ನೆಲದಲ್ಲಿ ಈ ಗ್ರಾಮ ಕಟ್ಟಿದಳು. ಈಗ ಹಲವು ಪರಿತ್ಯಕ್ತ ನಾರಿಯರಿಗೆ ನೆಲೆಯಾಗಿದೆ. ಗಂಡಿನ ಹಿಂಸೆ, ದೌರ್ಜನ್ಯ, ಶೋಷಣೆಗಳ ವಿರುದ್ಧ ‘ಉಮೋಜ’ ಅಂದರೆ ಗಂಡಿಲ್ಲದ ನಾಡುಕಟ್ಟಿದ ರೆಬ್ಕಾ ಈ ಗ್ರಾಮದ ಪ್ರಮುಖಳು. ಸ್ತ್ರೀ ಸಬಲೀಕರಣಕ್ಕಾಗಿ ಈಕೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಕೆನ್ಯಾದೇಶದ ಉತ್ತರ ಭಾಗದ ಸಂಬ್ರು ಪ್ರಾಂತ್ಯದಲ್ಲಿ ಅಂದರೆ ರಾಜಧಾನಿ ನೈರೋಬಿಯಿಂದ ೩೮೦ ಕಿಮೀ ದೂರದಲ್ಲಿ ‘ಹೆಣ್ಣುಮೆಟ್ಟಿದ ನಾಡು’ ಅಸ್ತಿತ್ವ ಪಡೆದಿದೆ. ರೆಬ್ಕಾ ಲೆಲಾಸೊಲಿ ಅದೇಕೆ ಸ್ತ್ರೀ ನಾಡುಕಟ್ಟಿದಳು?


ಅದು ಅವಳ ಕಣ್ಣೀರಿನ ಕಥೆ. ಗಂಡಿನ ಕಾಮದ ಕಥೆ-ಇವಳ ಪಾಲಿನ ವ್ಯಥೆ. ನಿತ್ಯವೂ ಕಾಡುವ ಕಾಮಣ್ಣರಿಂದ ಪಾರಾಗಲೇ ಬೇಕಿತ್ತು. ಆ ಶೋಷಣೆ, ಲೈಂಗಿಕ ದೌರ್ಜನ್ಯಗಳಿಂದ ಮುಕ್ತಳಾಗಬೇಕಿತ್ತು. ಆ ಸಂಕಟವನ್ನು ಎದುರಿಸಿ ಇಲ್ಲಿ ನೆಲೆ ನಿಂತಳು. ಹಲವರನ್ನು ಗಂಡಿನ ಕಾಮಜಾಲದಿಂದ ಬಿಡಿಸಿ ತಂದಳು. ಬಲವಂತವಾಗಿ ವಿವಾಹವಾಗುವುದನ್ನು ತಪ್ಪಿಸುತ್ತಿದ್ದಾಳೆ. ಇಲ್ಲಿಯೇ ಶಾಲೆ, ಸಮುದಾಯ ಭವನ, ಹಲವರ ಬಾಳಿಗೆ ಬೆಳಕಾಗಿದ್ದಾಳೆ.
ವಿಶ್ವದ ಮೊದಲ ಮಹಿಳಾ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಳ್ಳಿಯಲ್ಲಿ ಗಂಡುಗಳಿಗೂ ಪ್ರವೇಶವಿದೆ. ಆದರೆ ಅವರು ಅಲ್ಲಿ ಉಳಿಯುವಂತಿಲ್ಲ. ಇಲ್ಲಿರುವ ಪರಿತ್ಯಕ್ತ ಮಹಿಳೆಯರಲ್ಲಿ ಗರ್ಭಧಾರಿಗಳು ಗಂಡು ಮಕ್ಕಳಿಗೆ ಜನನ ನೀಡಿದರೆ ಅಂತಹವರು ಇಲ್ಲಿ ಉಳಿಯಬಹುದು ಅಷ್ಟೇ…! ಸಂಕಟವೇ ಶಕ್ತಿಯಾಗುತ್ತದೆನ್ನುವುದಕ್ಕೆ ಈ ಹಳ್ಳಿಯೇ ಸಾಕ್ಷಿ.

ಸ್ಥೂಲಾಸನ 


ಏಕ ಚಕ್ರದಮೇಲೆ ಯೋಗ ಮುದ್ರೆಯಲ್ಲಿರುವ ಈಕೆಯನ್ನು ‘ಚಕ್ರೇಶ್ವರಿ’ ಅನ್ನಬಹುದು. ಸ್ಥೂಲ ಕಾಯದವಳಾಗಿರುವ ಇವಳಿಗೆ ಸಹಜ ಯೋಗ ಒಲಿದು ಬರಲಿಲ್ಲ. ಹೀಗಾಗಿ ಇವಳು ಹಠಯೋಗಿನಿ. ದಪ್ಪ ಅಲ್ವಾ? ಎಂದರೆ ಹೌದಪ್ಪಾ ಎನ್ನುತ್ತಾಳೆ. ಆದರೆ ಸಪೂರ ಶರೀರಿಗಳಿಗಿಂತಲೂ ಚೆನ್ನಾಗಿ ಯೋಗಾಸನ ಮಾಡುತ್ತಾಳೆ. ಚಕ್ರಾಸನ, ಶೀರ್ಷಾಸನ, ಹಲಬಾಸನ, ಎಲ್ಲವನ್ನೂ ಸುಲಲಿತವಾಗಿ ಮಾಡುತ್ತಾಳೆ. ಸ್ಥೂಲಕಾಯದವರಿಗೆ ಯೋಗ ಒಲಿಯದು ಎಂಬ ಮಾತನ್ನು ಸುಳ್ಳಾಗಿಸಿದ್ದಾಳೆ. ಯೋಗಾಯೋಗಕ್ಕೆ ‘ಮನಸ್ಸು ಮುಖ್ಯವೇ ಹೊರತು ದೇಹದ ಸ್ಥಿತಿಯಲ್ಲ’ ಎಂಬುದು ಇವಳ ಅಭಿಪ್ರಾಯ. ತೂಕ ಇಳಿಸಬೇಕಂತೆ. ಅದಕ್ಕಾಗಿ ಇವಳು ಯೋಗಿನಿ. ೪-೫ವರ್ಷದ ಯೋಗಾಭ್ಯಾಸ ಇವಳ ತೂಕ ತಗ್ಗುವಂತೆ ಮಾಡಿದೆ.
೮೦ಸಾವಿರ ಅಭಿಮಾನಿಗಳನ್ನು ಹೊಂದಿರುವ ವೇಲ್ಯರಿಸ್ಯಾಗುನ್ ಹೆಸರಿನ ಯೋಗಿನಿ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿದ್ದಾಳೆ. ಯೋಗದಲ್ಲಿ ವಿಶೇಷ ಆವಿಷ್ಕಾರ ಕೂಡ ಮಾಡಿದ್ದಾಳೆ. ಅದರಲ್ಲೂ ಚಕ್ರಾಕಾರದ ಸಿಲಿಂಡರ್ ಬಳಸಿ ಯೋಗಮಾಡಿ ‘ಚಕ್ರವರ್ತಿನಿ’ಯಾಗಿದ್ದಾಳೆ. ಸ್ಥೂಲಸ್ತರು ಯೋಗ ಮಾಡಬಹುದು. ಅದರಲ್ಲಿ ಜೈಸಬಹುದೆಂಬುದುನ್ನು ಸಾಬೀತು ಮಾಡಿದ್ದಾಳೆ. ಇವಳ ಯೋಗಾಟ ನೋಡುತ್ತಿದ್ದರೆ ಯೋಗವನ್ನೇ ಮರುವ್ಯಾಖ್ಯಾನ ಮಾಡಬೇಕಾಗುತ್ತದೆ. ‘ಬಿಗ್‌ಗಾಲ್ ಯೋಗ’ ಎಂಬ ಗ್ರಂಥವನ್ನೂ ಬರೆದು ಅದರಲ್ಲಿ ಸ್ಥೂಲಕಾಯಸ್ಥರು ಯೋಗ ಮಾಡುವುದು, ಒಂದಷ್ಟು ಸೂಚನೆ, ಮಾಹಿತಿ ಎಲ್ಲವನ್ನೂ ನೀಡಿದ್ದಾಳೆ. ಈ ಬಾರಿಯ ಯೋಗದಿನಕ್ಕೆ ವಿಶೇಷ ಅತಿಥಿಯಾಗಿ ರಾಜ್ಯಕ್ಕೆ ಆಗಮಿಸಲು ಇವಳೇ ಸೂಕ್ತ.

ಸ್ಖಲನ ಮಹೋತ್ಸವ


ಡೇನಿಯಲ್ ಮೆಡ್‌ಫೋರ್‍ತ್ ೩೫ ಗುಳಿಗೆಗಳನ್ನು ಸೇವಿಸಿದ. ಒಂದು ಮಾತ್ರೆಯೇ ಸಾಕಿತ್ತು. ಆದರೂ ತೆವಲುಗಾರ ಈ ಪಾಟಿ ಗುಳಿಗೆ ನುಂಗಿ ನೀರು ಕುಡಿದ. ಶರೀರ ತಡೆಯಲಿಲ್ಲ, ಅಸ್ವಸ್ಥನಾದ. ಆಂಬ್ಯುಲೆನ್ಸ್ ಕರೆದ ಮಡದಿ, ಆಸ್ಪತ್ರೆಗೆ ಕೆಡವಿ ಬಂದಳು. ಹೃದಯ, ಮೆದುಳು, ಜೀವ ಎಲ್ಲವೂ ಗಟ್ಟಿಗಿತ್ತು. ಆದರೆ, ಆದರೇ, ಒನ್ಸ್ ಎಗೈನ್ ಆದರೇ ೫ ದಿನಗಳ ನಿರಂತರ ಸ್ಖಲನದಿಂದ ಶಿಶ್ನ ಬಸವಳಿದಿತ್ತು. ಕಿವುಚಿ ಬಿಸಾಡಿದ ಹುಣಿಸೆ ಹಿಪ್ಪೆಯಂತಾಗಿತ್ತು. ಮುಟ್ಟಿ ಕೊಂಡರೆ ನೋವಿತ್ತು. ‘ಒಂದ’ ಮಾಡಲು ಕೂತರೂ ಮುಖದ ಅಂದವೇ ಮಾಯವಾಗುವಷ್ಟು ನೋವು ಇರುತ್ತಿತ್ತು. ಮಿಲನ ಬಯಸಿ, ಸ್ಖಲನ ಸುಖ ಅನುಭವಿಸಿದ ಡೇನಿಯಲ್ ಇಂಗ್ಲೆಂಡ್‌ನ ಯಾರ್ಕ್‌ಶೈರ್‌ನಲ್ಲಿದ್ದಾನೆ.
ಎಲ್ಲಾ ಓ.ಕೆ. ಈತ ಗುಳುಂ ಎನಿಸಿದ ಗುಳಿಗೆ ಯಾವುದು? ಛೀ… ತುಂಟಾ… ಈಗಾಗಲೇ ಗೊತ್ತಾಗಿರಬೇಕು… ಆದರೂ ಕೇಳ್ತೀಯಾ… ಹೇಳ್ತೀನಿ ಕೇಳು… ವಯಾಗ್ರ. ಈಗ ‘ವಯಾಗ್ರ’ ಗುಳಿಗೆ ಅಂದರೆ ಬೆಚ್ಚಿ ಬೀಳುತ್ತಾನೆ.ಕೇಳಬಾರದ ಪ್ರಶ್ನೆಯಿದು: ‘ಆ ನಾನ್ ಸ್ಟಾಪ್ ೫ ದಿನಗಳಲ್ಲಿ ಡೇನಿಯಲ್ ಅದೆಷ್ಟು ಚೆಡ್ಡಿ ಬದಲಿಸಿದ?!’ ಡೇನಿಯಲ್‌ನೇ ಕೇಳಬೇಕು. ನೀತಿ: ಸ್ಖಲನಕ್ಕೆ ಮಿಲನಕ್ಕೆ ಗಳಿಗೆ ಕೂಡಿ ಬಂದರು ಗುಳಿಗೆ ಕೂಡಿಬರಲಿಲ್ಲ!

ವಿಚ್ಛೇದನ ಪರೀಕ್ಷೆ


ಚೀನಾದಲ್ಲಿ ವಿಚ್ಛೇದನಗಳು ಹೆಚ್ಚುತ್ತಿವೆ. ಸಹಜವಾಗಿಯೇ ‘ಉತ್ಪಾದನೆ’ ಕಮ್ಮಿಯಾಗುತ್ತಿದೆ. ಸಮಸ್ಯೆಗೆ ಪರಿಹಾರವಾಗಿ ಸಿಚುಯಾನ್ ಪ್ರಾಂತ್ಯದ ಕೋರ್ಟ್ ಡೈವೋರ್‍ಸಿಗಳಿಗೆ ಪರೀಕ್ಷೆ ನಡೆಸುತ್ತಿದೆ. ಶೇ. ೬೦ಕ್ಕಿಂತಲೂ ಕಡಿಮೆ ಅಂಕಗಳನ್ನು ಪಡೆದವರಿಗೆ ‘ಡೈವೋರ್‍ಸ್ ಭಾಗ್ಯ’ ಇಲ್ಲ. ಇಷ್ಟವಿರಲಿ-ಇಲ್ಲದಿರಲಿ ಒಟ್ಟಿಗೆ ಬಾಳಬೇಕು. ಹೋಗಲಿ ಹೆಚ್ಚಿನ ಅಂಕಕ್ಕಿಂತಲೂ ಹೆಚ್ಚು ಗಳಿಸಿದವರಿಗೆ ವಿಚ್ಛೇದನ ಗ್ಯಾರಂಟಿನಾ?ಇಲ್ಲ. ಅಂತಹ ಜಾಣರನ್ನು ಕರೆದು ಕೌನ್ಸೆಲಿಂಗ್ ಮಾಡಲಾಗುತ್ತದೆ. ಒಂದಷ್ಟು ದಿನ ತಳ್ಳುತ್ತಾರೆ. ಅಷ್ಟಾಗಿಯೂ ಡೈವೋರ್‍ಸ್ ಬೇಕೆಂದರೆ ಮತ್ತೊಮ್ಮೆ ವಿಚ್ಛೇದನ ಪರೀಕ್ಷೆ ಎದುರಿಸಬೇಕು. ಅದರಲ್ಲಿ ೬೦ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿದರೆ ಅಂತಹವರನ್ನು ವಿಚಾರಣೆಗೊಳಪಡಿಸುತ್ತಾರೆ. ಇಲ್ಲಿ ವಿಚ್ಛೇದನಕ್ಕೆ ಕಾರಣ, ಸಾಕ್ಷಿ, ಎಲ್ಲವನ್ನೂ ಸಾಬೀತಪಡಿಸಬೇಕು.
ಅದು ನ್ಯಾಯಾಧೀಶರಿಗೆ ಒಪ್ಪಿಗೆ ಆದಲ್ಲಿ ಮಾತ್ರ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಚೀನಾದಲ್ಲಿ ಪಾಶ್ಚಿಮಾತ್ಯತೆ ಆವರಿಸಿದೆ. ಸ್ವಚ್ಛಂದ ಬದುಕು ಹೆಚ್ಚುತ್ತಿದೆ. ದಾಂ ‘ಪಥ್ಯ’ವಾಗುತ್ತಿಲ್ಲ. ವಿಚ್ಛೇದನದ ಹಾದಿಯಲ್ಲಿ ಹಲವರು ಸಾಗಿದ್ದಾರೆ. ಹೀಗಾದಲ್ಲಿ ಜನ ಸಂಖ್ಯೆ ಹೆಚ್ಚಾಗದು ಎಂಬ ಕಳವಳ. ಅದಕ್ಕಾಗಿ ಡೈವೋರ್‍ಸ್‌ಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಚೀನೀಯರ ಸಂಖ್ಯೆ ಹೆಚ್ಚಾಗಲು ಸುಲಭವಾಗ ಏನು ಮಾಡಬೇಕು? ನಮ್ಮ ಘೋರಿ ಪಾಳ್ಯದಿಂದ ೧-೨ ಕುಟುಂಬಗಳನ್ನು ಕರೆದೋಯ್ದು ಚೀನಾದಲ್ಲಿ ಬಿಟ್ಟು ಬಂದರೂ ಸಾಕು ಕೆಲವೇ ವರ್ಷಗಳಲ್ಲಿ ಚೀನಾ ಮಕ್ಕಳಿಂದ ಸಮೃದ್ಧವಾಗಿರಲಿದೆ.

ನೊಣಪಾತಕಿ

ನಮಗೆಲ್ಲಾ ಋಣಪಾತಕರು ಗೊತ್ತು. ಆದರೆ ನೊಣಪಾತಕರು ತಿಳಿಯದು. ಆದರೆ ಇಲ್ಲೊಬ್ಬಳು ನೊಣಪಾತಕಿ ಇದ್ದಾಳೆ. ಏನವಳ ಚೇಷ್ಟೆ ಇಲ್ಲಿದೆ ಮಾಹಿತಿ… ನಿತ್ಯ ನೊಣ ಹೊಡೆಯೋದು ಅಂದ್ರೆ ‘ನೊಣ ಹೊಡೆದಷ್ಟು’ ಸುಲಭವಲ್ಲ. ವ್ರತಾ ಎಂಬಂತೆ ವೃಥಾ ನೊಣಪಾತಕತನ ಮಾಡೋದು ಕಡುಕಷ್ಟ. ‘ಮನಸ್ಸಿದ್ದಲ್ಲಿ ಮಶ್ಚಿಕವಿದೆ’ ಎಂದುಕೊಂಡು ನೊಣ ಭೇಟೆಯಾಡುತ್ತಿದ್ದಾಳೆ…. ೮೦ರ ಅಜ್ಜಿ. ೧೪ ವರ್ಷಗಳಿಂದ ಪ್ರತಿದಿನ ಕನಿಷ್ಠ ಸಾವಿರ ನೊಣಗಳಿಗೆ ಮುಕ್ತಿ ಕಾಣಿಸುತ್ತಿದ್ದಾಳೆ. ಅಷ್ಟೊಂದು ನೊಣ ಎಲ್ರೀ ಸಿಗುತ್ತದೆ? ಕೊಂಡು ತರಲೇನು ಅದೇನು ಬೆಲ್ಲದ ಉಂಡೆಯಾ? ಹುಡುಕಿ ಹೋಗಬೇಕು.
ತ್ಯಾಜ್ಯ ವಿಲೇವಾರಿ ಕೇಂದ್ರ, ತಿಪ್ಪೆಗುಂಡಿ, ಕಸದರಾಶಿ, ಕೊಳಚೆ ಪ್ರದೇಶಗಳಲ್ಲಿ ಇವು ಹೇರಳ. ಅಲ್ಲಿಗೆಲ್ಲಾ ಬ್ಯಾಟ್ ಧಾರಿಯಾಗಿ ತೆರಳುವ ಈ ಅಜ್ಜಿ ನಿಶ್ಶಸ್ತ್ರ ನೊಣಗಳ ಮೇಲೆ ಮನ ಬಂದಂತೆ ದಾಳಿ ಮಾಡುತ್ತಾಳೆ. ಸಾವಿರ ಸತ್ತಿರುವುದು ಮನದಟ್ಟಾಗುತ್ತಿದಂತೆಯೇ ಕದನ ವಿರಾಮ ಘೋಷಿಸಿ ಮನೆಗೆ ಮರಳುತ್ತಾಳೆ. ಮರುದಿನ ಅದೇ ಚಾಳಿ. ಗೊಣಗುಟ್ಟದೆ ನೊಣ ಹೊಡೆಯುವ ಟ್ಯಾಂಗ್ ಅಜ್ಜಿ ಚೈನಾದ ದಕ್ಷಿಣಭಾಗದ ಹ್ಯಾಂಗ್‌ಝೌ ಪ್ರಾಂತ್ಯದಲ್ಲಿದ್ದಾಳೆ. ಅಜ್ಜಿಯ ದಾಳಿ ಏಕೆ? ನೊಣಗಳ ಉಪಟಳ ಹೆಚ್ಚಾಗುತ್ತಿದ್ದು ಹಲವು ಕಾಯಿಲೆಗಳಿಗೆ ಮೂಲವೆಂದು ಹೇಳುತ್ತಾಳೆ ಈ ಅಜ್ಜಿ. ಹೀಗಾಗಿ ಭೇಟೆಯಾಡಿ ಅವುಗಳನ್ನು ಕೊಂದು ಹಾಕುತ್ತಾಳಂತೆ.
ಕನ್ಯೆಯ ಮೈಗೆ ಕಾರ್‌ಮ್ಯಾಟ್
‘ತುಂಡು ಬಟ್ಟೆ ಸಾಕೂ ನನ್ನ ಮಾನಾ ಮುಚ್ಚೋಕೇ…’ ಎಂದು ಡಾ. ವಿಷ್ಣುವರ್ಧನ್ ಹಾಡು ಹೇಳಿ ೩ದಶಕಗಳಾಯಿತು. ಇದೀಗ ಈ ಮಿಟುಕಲಾಡಿ ‘ಕಾರ್ ಮ್ಯಾಟು ಸಾಕೂ… ನನ್ನ ಮಾನಾ ಮುಚ್ಚೋಕೇ..!’ ಎಂದು ಹಾಡಬಹುದು. ಕಾರ್ ಮ್ಯಾಟ್ ಸುತ್ತಿಕೊಂಡು ತನ್ನ ಮಾನ ಮುಚ್ಚಿಕೊಳ್ಳುತ್ತಾಳಾ? ಇಲ್ಲ. ಕಾರ್‌ಮ್ಯಾಟ್ ಮಾದರಿಯ ಬಟ್ಟೆಯಿದು. ಥೂ ಅದೇನು ಚಂದವಿಲ್ಲ ಚಂದವಿಲ್ಲ ಅಲ್ವಾ?ಇಲ್ಲಾ. ಇದೇ ಚಂದ/ಫ್ಯಾಷನ್ ಅಂತೆ. ‘ಅಂz’ಹಾಗೆ ಈ ಕಾರ್‌ಮ್ಯಾಟ್ ಮಾದರಿಯ ಬಟ್ಟೆಯನ್ನು ಗುಣಮಟ್ಟದ ಕುರಿ ತೊಗಲಿನಿಂದ ಮಾಡಲಾಗಿದೆ. ನೋಡಲು ರೆಕ್ಸಿನ್‌ನಂತೆ ಕಂಡರೂ ಅದು ಮೇಷ, ಬಕರಗಳ ಚರ್ಮದಿಂದ ಆಧುನಿಕ ತಂತ್ರಜ್ಞಾನದಲ್ಲಿ ಹೊಸೆಯಲಾಗಿದೆ.
ಈ ಮ್ಯಾಟ್ ಬೆಲೆ ೧,೭೦೦ ($,೨೩೦೦) ಪೌಂಡ್‌ಗಳು. ಬ್ಯಾಲೆನ್ಸಿಯಾಗ ಎಂಬ ಹೆಸರಿನ ಈ ಬಟ್ಟೆಗಳನ್ನು ಬಡವರು ಬ್ಯಾಲೆನ್ಸ್ ಮಾಡುವುದು ತುಸು ಕಷ್ಟವೇ ಆಗಬಹುದು. ಅಮೆರಿಕ/ಇಂಗ್ಲೆಂಡ್‌ಗಳಲ್ಲಿ ಲಭ್ಯ. ಅಪ್‌ಡೇಟ್ ಅಮ್ಮಾಯಿಗಳಿಗೆ ಇದು ಬಹಳ ಸೊಗಸಂತೆ. ಇದನ್ನು ಧರಿಸದಿದ್ದರೆ ಇನ್ನೂ ಸೊಗಸೆಂದು ಜೊಲ್ಲು ಸುರಿಸುವ ಪಡ್ಡೆಗಳು ಹೇಳಬಹುದು. ಕೆಲವು ಕಾಮಿಡಿ ಕಾಮಣ್ಣಗಳು ರೋಮಾಂಚನಗೊಂಡು ಗಂಡಸರಿಗೂ ರೂಪಿಸಿಕೊಡಿ ಎಂದು ಕೇಳಿದರೆ? ಬೇಡ. ಗಂಡಿನ ‘ತುಂಡು’ ಮುಚ್ಚಲು ಡೋರ್‌ಮ್ಯಾಟೇ ಸಾಕು! ಎಂದು ಅಮೆರಿಕನ್ ಕಂಪೆನಿಯ ಮಂದಿ ಹೇಳಿದ್ದು ಶುದ್ಧ ಸುಳ್ಳಂತೆ.

ಕಣ್ಣು ಗುಡ್ಡೆಗೂ ರೇಜರ್


ತಲೆ, ಹುಬ್ಬು, ಕಣ್ಣಿನ ರೆಪ್ಪೆ ಭುಜಕೆಳಗಿನ ಕೂದಲು ಬೋಳಿಸುವವರು ಗೊತ್ತು. ಹೆಚ್ಚಿನ ರೊಕ್ಕ ಕೊಟ್ಟರೆ ‘ಜನರೇಟರ್’ ಭಾಗದ ಕೂದಲೂ ಬೋಳಿಸುವರು ಇದ್ದಾರೆ! ಆದರೆ ಇವನು ಸಾಮಾನ್ಯನಲ್ಲ. ಕೇಶ, ರೆಪ್ಪೆ ನಂತರ…ಕಣ್ಣಿನ ಗುಡ್ಡೆಗಳನ್ನೂ ಶೇವ್ ಮಾಡ್ತಾನೆ. ಅಯ್ಯೋ ಕಣ್ಣೇ ‘ಢಮಾರ್’ ಆಗಲಿದೆಯಲ್ಲವೇ?! ಇಲ್ರೀ… ಇವನು ಎಕ್ಸ್ ಪರ್‍ಟ್. ಈತನೇನು ವೈದ್ಯನಲ್ಲ. ಸಾಧಾರಣ ಮೋಚಿ. ಸುಮಾರು ೪೦ ವರ್ಷಗಳಿಂದಲೂ ಬೀದಿಯಲ್ಲಿಯೇ ಕೂಡಿಸಿ ಬೋಳಿಸುತ್ತಾನೆ. ಇವನ ರೇಜರ್‌ನಿಂದ ಕಣ್ಣು ಬೋಳಿಸಕೊಂಡರೆ ದೃಷ್ಟಿ ಉತ್ತಮವಾಗುತ್ತದಂತೆ. ಕಣ್ಣಿಗೆ ಮೆತ್ತಿದಕೊಳೆ, ಪೊರೆ ಎಲ್ಲವೂ ಮಾಯವಂತೆ. ಹಾಗೆಂದು ಕಣ್ಣಿಗೆ ಸೋಂಕು ತಗಲಿಲ್ಲ. ಅಥವಾ ಕಣ್ಣಿಗೂ ಅಪಾಯ ಮಾಡಿಲ್ಲವೆಂಬುದು ಇವನ ಬಗೆಗಿರುವ ಮೆಚ್ಚುಗೆ.
ಹಿಡಿದ ಚಾಕುವಿನಿಂದ ಯಾವುದೇ ರೀತಿಯ ಅಪಾಯ ಮಾಡದೆ, ಉಪಾಯವಾಗಿ ಬೋಳಿಸುವ ಕಲಾಕಾರ್ ಇವನು. ಗ್ಸಿಯಾಂಗ್ ಗೌ ಹೆಸರಿನ ಈತ ನುರಿತ ಕಣ್ಣಿನ ವೈದ್ಯರಿಗೆ, ಹೈಟೆಕ್ ಆಸ್ಪತ್ರೆಗಳಿಗೂ ತೊಡಕಾಗಿರುವ ಸಮಸ್ಯೆಯನ್ನು ತಡವರಿಸದೆ ತರಿದುಹಾಕುತ್ತಾನಂತೆ. ಈತನಿಂದ ಕಣ್ಣುಗುಡ್ಡೆ ಮೋಚಿಸಿಕೊಳ್ಳಬೇಕಿದ್ದರೆ ನೆರೆಯ ಚೀನಾ ದೇಶದ ಜಿನ್‌ಜಿಯಾಂಗ್ ಜಿಲ್ಲೆಯ ಚೆಂಗ್ಡುಪಟ್ಟಣಕ್ಕೆ ತೆರಳಬೇಕು. ಆದರೆ ಇಂತಹ ಕಣ್ಣಿನ ಗುಡ್ಡೆಯ ಶೇವ್‌ಗಳು ಅಪಾಯಕಾರಿ, ನೇತ್ರದ ಕಾಯಿಲೆಗಳು ಹರಡಲು ಸಹಕಾರಿಯಾಗಲಿದೆ ಎನ್ನುತ್ತಾರೆ ‘ಐ’ಡಾಕ್ಟರ್‌ಗಳು!
ಇರಬಹುದು ಏಕೆಂದರೆ ಅವರಿಗೆ ಬ್ಯುಸಿನೆಸ್ ನಷ್ಟ ಅಲ್ಲವಾ?!

ಮಹಿಳಾ ರೈಲ್ವೇ ಸ್ಟೇಷನ್


ನಮ್ಮ ರಾಜ್ಯದಲ್ಲಿ ಹಲವು ಮಹಿಳಾ ಪೋಲೀಸ್ ಸ್ಟೇಷನ್ ಗಳಿರಬಹುದು. ಅದೇ ರೀತಿ ಮಹಿಳೆಯರೇ ನಿರ್ವಹಣೆ ಮಾಡುತ್ತಿರುವ ಬ್ಯಾಂಕ್‌ಗಳಿವೆ. ಆದರೆ ಮಹಿಳೆಯರೇ ನಿರ್ವಹಣೆ ಮಾಡುತ್ತಿರುವ ರೈಲ್ವೇಸ್ಟೇಷನ್ ನಮ್ಮಲ್ಲಿ ಮಾತ್ರವಲ್ಲದೆ ದೇಶದಲ್ಲೇ ಇಲ್ಲ. ಆ ಕೊರತೆಯನ್ನು ನೀಗಿಸಲು ೨೦೧೭ರ ಜುಲೈನಲ್ಲಿ ಕನಸು ಕಾಣಲಾಯಿತು. ಕೇಂದ್ರೀಯ ರೈಲ್ವೆ ವಿಭಾಗದ ಡಿ.ಕೆ.ಶರ್ಮಾ ಅವರ ಪರಿಕಲ್ಪನೆಯಿದು. ಅದೀಗ ಸಾಕಾರವಾಗಿದೆ. ಇದೇ ೨೦೧೮ನೇ ಜನವರಿ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ. ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೂ ಈ ರೈಲ್ವೇ ಸ್ಟೇಷನ್ ದಾಖಲಾಗಿದೆ. ಮ್ಯಾನೇಜರ್ ಆಗಿ ಮಮತಾ ಕುಲಕರ್ಣಿ ಕಾರ್ಯನಿರ್ವಹಿಸುತ್ತಿದ್ದಾರೆ.
೧೭ ಮಹಿಳಾ ಸಿಬ್ಬಂದಿ ಇಲ್ಲಿನ ಹಣಕಾಸು ವ್ಯವಹಾರಗಳ ನೋಡಿಕೊಳ್ಳುತ್ತಿದ್ದಾರೆ. ರೈಲ್ವೇ ಆರಕ್ಷಕ ಪಡೆಯ ೬ ಸಿಬ್ಬಂದಿ ಸೇರಿ ಒಟ್ಟು ೪೧ ಮಹಿಳಾ ಸಿಬ್ಬಂದಿಗಳು ಮಹಿಳಾ ರೈಲ್ವೇ ಸ್ಟೇಷನ್‌ಗೆ ಕೊಡುಗೆ ನೀಡುತ್ತಿದ್ದಾರೆ. ಪುರುಷರಿಗಿಂತಲೂ ಮಹಿಳೆ ಯಾವುದೇ ವಿಭಾಗದಲ್ಲೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಆದರೆ ಆಲ್ ವುಮನ್ ರೈಲ್ವೇ ಸ್ಟೇಷನ್ ಮಾತ್ರ ಇದರಿಂದ ದೂರ ಉಳಿದಿತ್ತು. ಈಗ ಎಲ್ಲವೂ ಸಾಕಾರವಾಗಿದೆ. ಹೌದು? ಇಲ್ಲಿಗೆ ಕಾಮಣ್ಣಗಳ ಪ್ರವೇಶಕ್ಕೆ ಅವಕಾಶವಿದೆಯಾ? ಇದೆ. ಆದರೆ ಚೇಷ್ಟೆ ಮಾಡಿದರೆ ಗೊತ್ತಲ್ಲಾ? ಹಿಡಿದು ರುಬ್ಬಿ ಬಿಡುತ್ತಾರೆ. ಮಹಿಳೆಯರೇ ತಾನೆ ರುಬ್ಬುವುದು ಎಂದು ಜೊಲ್ಲು ಸುರಿಸಿಕೊಂಡು ತೆರಳುವ ಐನಾತಿ ಕಾಮಣ್ಣರನ್ನು ಗಂಡುಗಳಿರುವ ಠಾಣೆಗೆ ವರ್ಗಾಯಿಸಿ ಅಲ್ಲಿ ಏರೋಪ್ಲೇನ್ ಹತ್ತಿಸುತ್ತಾರೆ!

೮೪ರಲ್ಲೂ ೨೪ರ ತಾಕತ್ತಿನ ತಾತ


ಜಿಮ್ ಆರಿಂಗ್‌ಟನ್‌ಗೆ ೮೪ರ ವಯಸ್ಸು. ತಾಕತ್ತಿನ ವಿಷಯದಲ್ಲಿ ೨೪. ಸಕ್ಕತ್ ಕಟ್ಟು ಮಸ್ತಾದ ಆಳು ಈ ಅಜ್ಜ. ಜಗತ್ತಿನ ಅತಿ ಹಿರಿಯ ದೇಹದಾರ್ಢ್ಯ ಪಟು ಎಂಬ ಕಿರೀಟ ಈ ಅಜ್ಜನಿಗಿದೆ. ಈ ಮುಕುಟ ಇಟ್ಟಿದ್ದು ಗಿನ್ನೀಸ್‌ನ ಮಂದಿ. ಹೀಗಾಗಿ ಅಜ್ಜನ ಕಿಮ್ಮತ್ತು ಲೋಕದ ತುಂಬ ಹಬ್ಬಿದೆ. ಅಷ್ಟೇ ಅಲ್ಲದೆ ಸುಮಾರು ೬೨ ಸ್ಪರ್ಧೆಗಳಲ್ಲಿ ಭಾಗವಹಿಸಿ ೨೦ಕ್ಕೂ ಹೆಚ್ಚು ಬಾರಿ ಗೆದ್ದು ಬಂದಿದ್ದಾನೆ ಈ ಅಜ್ಜ. ನಿತ್ಯ ವ್ಯಾಯಮ ಮಾಡುವ ಈ ಅಜ್ಜನಿಗೆ ಬಾಲ್ಯದಲ್ಲಿಯೇ ಉತ್ತಮ ದೇಹದಾಡ್ಯ ಹೊಂದಬೇಕೆಂಬ ಆಸೆಯಿತು. ತನ್ನ ೧೪ನೇ ವಯಸ್ಸಿಗೆ ಈತ ‘ಫೀಲ್ಡಿ’ಗಿಳಿದು ಕಸರತ್ತು ಆರಂಭಿಸಿದ. ಆಗ ಶುರುವಾಗಿದ್ದು ಇಂದಿಗೂ ನಿಂತಿಲ್ಲ.
೩ಮಕ್ಕಳ ತಂದೆಯಾಗಿದ್ದಾನೆ. ಮೊಮ್ಮಕ್ಕಳು ಹಲವರಿದ್ದಾರೆ. ಎಲ್ಲರಿಗೂ ಆರಿಂಗ್ ಟನ್ ಅಜ್ಜ ಫೇವರಿಟ್. ಊಟ, ತಿಂಡಿವಿಷಯದಲ್ಲಿ ಅಚ್ಚುಕಟ್ಟು. ವ್ಯಾಯಾಮದಲ್ಲಿ ಕಟ್ಟುನಿಟ್ಟು. ಶ್ರವಣ ಸಮಸ್ಯೆಯಿಲ್ಲ. ದೃಷ್ಟಿ ದೋಷವೂ ಇಲ್ಲದ ಆರಿಂಗ್‌ಟನ್ ಅಮೆರಿಕದ ಕ್ಯಾಲಿಫೊರ್ನಿಯದಲ್ಲಿದ್ದಾನೆ. ವಯಸ್ಸಾಗುತ್ತಾ ಹೋದಂತೆ ಮುಪ್ಪು ಅಡರುವುದು ಸಹಜ. ಮೂಳೆ ಸವೆತ ಆರಂಭವಾಗಬಹುದು. ಆದರೆ ಮಾಂಸಖಂಡಗಳಿಗೆ ತೊಂದರೆಯಿಲ್ಲ. ವ್ಯಾಯಾಮ ಮಾಡಿ ಎನ್ನುತ್ತಾರೆ ವೈದ್ಯರು. ಆರಿಂಗ್‌ಟನ್ ಅಜ್ಜನ್ನ ಮಾದರಿಯಾಗಿಸಿಕೊಂಡು ಕಸರತ್ತು ಮಾಡಿ… ಏಳಿ ಬೇಗ…!

ನಡೆವಳಿಕೆ ಹಗುರ


‘ಥೂ ಅವನೊಬ್ಬ ಭೂಮಿಗೆ ಭಾರ’ ಎಂದು ಆಗಾಗ ಕೆಲವರನ್ನು ನಿಂದಿಸುತ್ತೇವೆ. ಅಂತಹವರು ಈ ಬೈಗುಳದಿಂದ ಪಾರಾಗಬೇಕಿದ್ದರೆ ಮೂನ್‌ವಾಕರ್ ಬೂಟುಗಳನ್ನು ಧರಿಸಬೇಕು. ಏನದು ಮೂನ್‌ವಾಕರ್? ಇದನ್ನು ಧರಿಸಿದಲ್ಲಿ ನಡೆಯುವ ಸ್ಪೀಡಿಗೆ ಓಡಿದಂತೆ, ಓಡುವ ವೇಗಕ್ಕೆ ನೆಗೆದಂತೆ, ನೆಗೆದರೆ ಹಾರಿದ ಅನುಭವವಾಗಲಿದೆಯಂತೆ. ಪವಾಡ ಅಲ್ಲ ವಿಜ್ಞಾನ. ಈ ಶೂಗಳಲ್ಲಿ ಮೂರು ಪದರಗಳಿದ್ದು ಇವುಗಳ ನಡುವೆ ವಿಶ್ವದ ಪ್ರಬಲ ೧೨-೧೩ ಅಯಸ್ಕಾಂತಗಳನ್ನು ವಿಶೇಷ ತಂತ್ರಜ್ಞಾನ ಬಳಸಿ ಈ ತಯಾರಿಸಲಾಗಿದೆ. ಇದನ್ನು ಧರಿಸಿದರೆ ಗುರುತ್ವಾಕರ್ಷಣೆ ತಗ್ಗಲಿದೆ. ನಡುಗೆ ಹಗುರವಾಗಲಿದೆ. ಚಂದ್ರನ ಮೇಲಿನ ಹೆಜ್ಜೆ ಇಟ್ಟಂತಾಗಲಿದೆ. ಸದ್ಯ ಅಮೆರಿಕದಲ್ಲಿ ಮಾತ್ರ ಲಭ್ಯ.
ಬೆಲೆ ೮೯ರಿಂದ ೧೩೯ ಡಾಲರ್‌ಗಳು. ಧಾರಣೆ ಅಧಿಕ ಎನಿಸಿದರೂ ಹಗುರ ‘ನಡೆವಳಿಕೆ’ ಸಾಧ್ಯ ಎನ್ನುತ್ತದೆ ಕಂಪೆನಿ. ಕಾಲಿಗೆ ಹಾಕಿಕೊಳ್ಳದೆ ಕೈಲಿ ಹಿಡಿದು ಹೋದರೆ ಏನಾದರೂ ಪ್ರಭಾವ ಬೀರಲಿದೆಯೇ? ಖಂಡಿತ ಇಂತಹ ಐನಾತಿ ಪ್ರಶ್ನೆಗಳನ್ನು ಯಾರೂ ಕೇಳಿಲ್ಲ. ‘ಚಂದ್ರನಮೇಲಿನ ಅನುಭವಕ್ಕಿಂತಲೂ ಮಧುಚಂದ್ರದ ಅನುಭವವಾಗೋ…. ಶೂಗಳಿದ್ದರೆ ಚೆನ್ನಾ’ ಎಂಬ ನಮ್ಮ ಪಡ್ಡೆಗಳ ಮಾತು ಮೂನ್‌ವಾಕರ್ ತಯಾರಕರಿಗೆ ಕೇಳಿಸಿಲ್ಲ! ಅದು ಹಾಳಾಗಿ ಹೋಗಲಿ ಎಂದರೆ ಈ ಮೂನ್‌ವಾಕರ್ ಧರಿಸಿದವರನ್ನು ಮತ್ತೊಂದು ರೀತಿಯಲ್ಲಿ ನಿಂದಿಸುತ್ತಿದ್ದಾರೆ…

Tags: #curiousfacts#didyo know

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Sneezing may cause sudden death: ಸೀನು ತಡೆದರೆ ಜೀವಕ್ಕೇ ಕಂಟಕ!

Sneezing may cause sudden death: ಸೀನು ತಡೆದರೆ ಜೀವಕ್ಕೇ ಕಂಟಕ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.