Vijay Deverakonda: ಟಾಲಿವುಡ್ ಸೆನ್ಸೇಶನಲ್ ಸ್ಟಾರ್ ವಿಜಯ್ ದೇವರಕೊಂಡ(Vijay Deverakonda) ಹಾಗೂ ನಿರ್ಮಾಪಕ ದಿಲ್ ರಾಜು(Dil Raju) ಮತ್ತೆ ಒಂದಾಗಿದ್ದಾರೆ. ಇಬ್ಬರ ಕಾಂಬಿನೇಶನ್‌ನಲ್ಲಿ ಬಂದ ಫ್ಯಾಮಿಲಿ ಸ್ಟಾರ್ ಸಿನಿಮಾ ಸೋಲು ಕಂಡರೂ ಮತ್ತೆ ಈ ಜೋಡಿ ಒಂದಾಗಿರೋದು ಅಚ್ಚರಿ ಎನಿಸಿದೆ. ಮೇ9ರಂದು ಹೊಸ ಸಿನಿಮಾ ಅನೌನ್ಸ್ ಆಗಲಿದೆ.
‘ಫ್ಯಾಮಿಲಿ ಸ್ಟಾರ್’(Family Star) ಜೊತೆಗೆ ದಿಲ್ ರಾಜು(Dil Raju) ವಿಜಯ್ ಜೊತೆ ಇನ್ನೊಂದು ಸಿನಿಮಾ ಮಾಡೋದಾಗಿ ತಿಳಿಸಿದ್ರು. ಅದರಂತೆ ಸಿನಿಮಾ ಮಾಡೋಕೆ ಇಬ್ಬರೂ ರೆಡಿಯಾಗಿದ್ದಾರೆ. ಯುವ ನಿರ್ದೇಶಕ ರವಿ ಕಿರಣ್ ಕೊಲ(Ravi Kiran Kola) ವಿಜಯ್‌ಗಾಗಿ ಒಂದು ಕಥೆ ರೆಡಿ ಮಾಡಿಕೊಂಡಿದ್ದಾರೆ. ರೂರಲ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ವಿಭಿನ್ನ ಕಥಾಹಂದರ ಚಿತ್ರ ಇದಾಗಿದೆ. ರವಿ ಕಿರಣ್ ಕೊಲ ಕಥೆಯನ್ನು ನಿರ್ಮಾಪಕ ದಿಲ್ ರಾಜು ಹಾಗೂ ವಿಜಯ್ ದೇವರಕೊಂಡ(Vijay Deverakonda) ಓಕೆ ಮಾಡಿದ್ದಾರೆ. ಮೇ9 ವಿಜಯ್ ದೇವರಕೊಂಡ ಹುಟ್ಟುಹಬ್ಬ ಅಂದೇ ಈ ಸಿನಿಮಾದ ಅನೌನ್ಸ್‌ಮೆಂಟ್ ಆಗಲಿದೆ.
ದಿಲ್ ರಾಜು(Dil Raju) ‘ಫ್ಯಾಮಿಲಿ ಸ್ಟಾರ್’ ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲೇ ನಿರ್ಮಾಣ ಮಾಡಿದ್ರು. ಈ ಸಿನಿಮಾ ಮೇಲೆ ಸಾಕಷ್ಟು ಭರವಸೆ ಇಟ್ಟು ಕೋಟಿ ಕೋಟಿ ಸುರಿದಿದ್ರು, ಪ್ರಮೋಷನ್ ಕೂಡ ಅಷ್ಟೇ ಜಬರ್ದಸ್ತ್ ಆಗಿ ಮಾಡಿದ್ರು. ಆದ್ರೆ ಸಿನಿಮಾ ಖಾತೆ ತೆರೆಯದೇ ಹೀನಾಯವಾಗಿ ಸೋತಿದೆ. ಇದೀಗ ಮತ್ತೆ ಈ ಜೋಡಿ ಒಂದಾಗಿ ಮ್ಯಾಜಿಕ್ ಮಾಡ್ತೀವಿ ಅಂತಿದೆ. ದಿಲ್ ರಾಜು ನಿರ್ಮಾಣದ 59ನೇ ಸಿನಿಮಾ ಇದಾಗಿದೆ.