Martin: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’. ‘ಅದ್ದೂರಿ’ ಜೋಡಿ ಮತ್ತೆ ಒಂದಾಗಿರೋ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಮೊದಲೇ ಸಿನಿಮಾ ರಿಲೀಸ್ ಲೇಟ್ ಆಗ್ತಿದೆ ಅಂತ ಧ್ರುವ ಅಭಿಮಾನಿಗಳು ಗೋಳಾಡುತ್ತಿರುವಾಗ ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲ, ನಿರ್ಮಾಪಕ ಹಾಗೂ ನಿರ್ದೇಶಕರ ನಡುವೆ ಮನಸ್ತಾಪ ಏರ್ಪಟ್ಟಿದೆ ಎಂಬ ಸುದ್ದಿ ಗಾಂದೀನಗರದಲ್ಲಿ ಪಸರ್ ಆಗಿತ್ತು. ಆದ್ರೀಗ ಅದಕ್ಕೀಗ ಕ್ಲಾರಿಟಿ ಸಿಕ್ಕಿದೆ.
‘ಮಾರ್ಟಿನ್’(Martin)ನಿರ್ದೇಶಕ ಎ.ಪಿ.ಅರ್ಜುನ್(A.P.Arjun) ನಿರ್ಮಾಪಕ ಉದಯ್ ಕೆ ಮೆಹ್ತಾ(Uday K Mehta) ನಡುವೆ ಬಿರುಕು ಮೂಡಿದೆ. ಸಂಭಾವನೆ ವಿಚಾರ, ಸಿನಿಮಾ ಬಜೆಟ್ ವಿಚಾರವಾಗಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬಂದಿತ್ತು. ಇದರ ಸಲುವಾಗಿ ಫಿಲ್ಮಂ ಛೇಂಬರ್ ಮೆಟ್ಟಿಲು ಹತ್ತುವವರೆಗೆ ಕಿರಿಕ್ ನಡೆದಿದೆ ಎನ್ನುವ ಸುದ್ದಿ ಪಸರ್ ಆಗಿತ್ತು. ಆದ್ರೆ ಇದೆಲ್ಲ ಅಂತೆ ಕಂತೆ ಎಂದು ನಿರ್ದೇಶಕರ ಹಾಗೂ ನಿರ್ಮಾಪಕರಿಬ್ಬರು ಕ್ಲಾರಿಟಿ ನೀಡಿದ್ದಾರೆ.
‘ನಮ್ಮಿಬ್ಬರ ನಡುವೆ ಏನು ನಡೆದಿಲ್ಲ, ನಮ್ ಮಧ್ಯೆ ಯಾವುದೇ ಕಿತ್ತಾಟ ನಡೆದಿಲ್ಲ. ಇದೆಲ್ಲಾ ರೂಮರ್ಸ್ ಅಷ್ಟೇ ಯಾರೂ ಕಿವಿಗೊಡಬೇಡಿ ಅಂತೇಳಿದ್ದಾರೆ. ತಪ್ಪು ಮಾಹಿತಿ ಸ್ರ್ಪೆಡ್ ಮಾಡ್ಬೇಡಿ, ನಾವಿಬ್ಬರು ಚೆನ್ನಾಗಿದ್ದೀವಿ. ಇಬ್ಬರೂ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದೇವೆ’ ಎಂದು ಹೇಳಿ ವೀಡಿಯೋ ಹಂಚಿಕೊಂಡಿದ್ದಾರೆ ಎ.ಪಿ.ಅರ್ಜುನ್(A.P.Arjun) ಹಾಗೂ ಉದಯ್ ಕೆ ಮೆಹ್ತಾ. ಈ ಮೂಲಕ ಚಿತ್ರರಂಗದಲ್ಲಿ ಇಬ್ಬರ ಬಗ್ಗೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಹರಿದಾಡ್ತಿರೋ ಸುದ್ದಿಗೆ ತಿಲಾಂಜಲಿ ಇಟ್ಟಿದ್ದಾರೆ.
ಡಬ್ಬಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ನಟಿಸುತ್ತಿದ್ದಾರೆ. 30 ರಿಂದ 40 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಚಿಕ್ಕಣ್ಣ, ಸಾಧು ಕೋಕಿಲ(Sadhu Kokila), ಮಾಳವಿಕಾ ಅವಿನಾಶ್ ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.