S.Shankar: ಕಾಲಿವುಡ್ ಮಾಸ್ಟರ್ ಮೈಂಡ್, ಸ್ಟಾರ್ ನಿರ್ದೇಶಕ ಎಸ್. ಶಂಕರ್(S.Shankar). ಸದ್ಯ ಇವರ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಎರಡು ಸಿನಿಮಾಗಳಿಗಾಗಿ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ. ಕೊನೆಗೂ ಅಭಿಮಾನಿಗಳ ಕಾಯುವಿಕೆಗೆ ಉತ್ತರ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
2018ರಲ್ಲಿ ತೆರೆಕಂಡ 2.0 ಸಿನಿಮಾ ನಂತರ ಶಂಕರ್(S.Shankar) ನಿರ್ದೇಶನದ ಯಾವ ಸಿನಿಮಾಗಳು ತೆರೆ ಕಂಡಿಲ್ಲ. ಶಂಕರ್ ಸಿನಿಮಾ ಅಭಿಮಾನಿಗಳು, ಸೂಪರ್ ಸ್ಟಾರ್ ಕಮಲ್ ಹಾಸನ್(Kamal Haasan) ಅಭಿಮಾನಿಗಳು ಇಂಡಿಯನ್-2ಗಾಗಿ(Indian-2) ಜಪಿಸುತ್ತಿದ್ದಾರೆ. ಆದ್ರಿಂದ ಸಿನಿಮಾ ಬಿಡುಗಡೆ ಡೇಟ್ ಅಂತಿಮ ಗೊಳಿಸುವತ್ತ ಶಂಕರ್ ಸೀರಿಯಸ್ ಆಗಿದ್ದಾರೆ.
ಕಮಲ್ ಹಾಸನ್(Kamal Haasan) ಅಭಿನಯದ `ಇಂಡಿಯನ್-2’`(Indian-2) ಹಾಗೂ ರಾಮ್ ಚರಣ್(Ram Charan) ಅಭಿನಯದ `ಗೇಮ್ ಚೇಂಜರ್’(Game Changer) ಸಿನಿಮಾಗೆ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಎರಡೂ ಸಿನಿಮಾಗಳು ಸಖತ್ ಕ್ರೇಜ಼್ ಸೃಷ್ಟಿಸಿವೆ. `ಇಂಡಿಯನ್-2’ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಬಿಡುಗಡೆಗೆ ರೆಡಿಯಿದೆ. ಆದರೆ ಲೋಕಸಭೆ ಚುನಾವಣೆ ಎದುರಾಗಿದ್ದು ಬಿಡುಗಡೆ ದಿನಾಂಕವನ್ನು ಜೂನ್‌ಗೆ ಮುಂದೂಡಲಾಗಿದೆ. ಕಾಲಿವುಡ್ ಮೂಲಗಳ ಪ್ರಕಾರ ನಿರ್ದೇಶಕ ಎಸ್. ಶಂಕರ್ ಜೂನ್ 14ಕ್ಕೆ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿದ್ದಾರಂತೆ.
ಇತ್ತ, ರಾಮ್ ಚರಣ್(Ram Charan) ಅಭಿನಯದ `ಗೇಮ್ ಚೇಂಜರ್’ ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿದೆ. 20 ದಿನಗಳಲ್ಲಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಿದೆ ಚಿತ್ರತಂಡ. ಅಕ್ಟೋಬರ್‌ನಲ್ಲಿ ‘ಗೇಮ್ ಚೇಂಜರ್’(Game Changer) ಸಿನಿಮಾ ಬಿಡುಗಡೆ ಮಾಡಲು ಶಂಕರ್ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಸಖತ್ ವೈರಲ್ ಆಗಿದೆ.