Thalapathy Vijay: ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್(Thalapathy Vijay) ಅಭಿನಯದ ‘ಗೋಟ್’(Goat)ಸಿನಿಮಾ ಸೆಪ್ಟೆಂಬರ್ನಲ್ಲಿ ತೆರೆಕಾಣುತ್ತಿದೆ. ದಳಪತಿಯನ್ನು ಡ್ಯುಯೆಲ್ ರೋಲ್ನಲ್ಲಿ ಕಣ್ತುಂಬಿಕೊಳ್ಳಲು ಅವರ ಸಹಸ್ರಾರು ಭಕ್ತಗಣ ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ವಿಜಯ್ ಭಕ್ತಗಣವನ್ನು ಬೇಸರಗೊಳಿಸಿದ್ದಾರೆ ಸ್ಟಾರ್ ನಿರ್ದೇಶಕ ವೆಟ್ರಿಮಾರನ್(Vetrimaaran).
ಫೆಬ್ರವರಿಯಲ್ಲಿ ತಮ್ಮದೇ ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ ದಳಪತಿ. ‘ಗೋಟ್’ ನಂತರ ಮೊದಲೇ ಒಪ್ಪಿಕೊಂಡ ಒಂದು ಸಿನಿಮಾದಲ್ಲಿ ಮಾತ್ರ ವಿಜಯ್ ನಟಿಸಲಿದ್ದು, ಈ ಚಿತ್ರ ದಳಪತಿ ವೃತ್ತಿ ಜೀವನದ 69ನೇ ಸಿನಿಮಾವಾಗಲಿದೆ. ಈ ಸುದ್ದಿ ಕೇಳಿದ್ದ ಭಕ್ತಗಣ ವೆಟ್ರಿಮಾರನ್(Vetrimaaran) 69ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಾರೆ ಎಂದು ಬಝ್ ಕ್ರಿಯೇಟ್ ಮಾಡಿತ್ತು. ಅದರಂತೆ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ವೆಟ್ರಿಮಾರನ್ ಉತ್ತರ ನೀಡಿದ್ದು, ನಾವು ಸಿನಿಮಾ ಮಾಡ್ತೀವಿ ಅಂತ ಹೇಳಿರಲಿಲ್ಲ. ಇದು ನೀವೇ ಸೃಷ್ಟಿಸಿದ್ದ ರೂಮರ್ಸ್ ಎಂದಿದ್ದಾರೆ.
ನಾನು ವಿಜಯ್(Thalapathy Vijay ಒಂದು ಸ್ಟೋರಿ ಬಗ್ಗೆ ತುಂಬಾ ಹಿಂದೆ ಮಾತುಕತೆ ನಡೆಸಿದ್ವಿ. ಆದರೆ ಆ ಸಿನಿಮಾವೀಗ ಸೆಟ್ಟೇರೋದಿಲ್ಲ. ನಾವೀಗ ಆ ಸಿನಿಮಾ ಮಾಡುತ್ತಿಲ್ಲ ಎನ್ನುವ ಮೂಲಕ ವಿಜಯ್ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದಾರೆ ವೆಟ್ರಿಮಾರನ್(Vetrimaaran). ಹಾಗಾದ್ರೆ ದಳಪತಿ 69ನೇ ಸಿನಿಮಾಗೆ ನಿರ್ದೇಶಕ ಯಾರು ಅನ್ನೋದು ಈಗ ಅಭಿಮಾನಿಗಳನ್ನು ಕಾಡುತ್ತಿರುವ ಸಂಗತಿ.
ʼಪೊಲ್ಲಧವನ್ʼ, ʼಆಡುಕಾಲಂʼ, ʼಅಸುರನ್ʼ(Asuran) ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ವೆಟ್ರಿಮಾರನ್. ಸಾಮಾಜಿಕ ಕಳಕಳಿಯ ಸಿನಿಮಾ ಮೂಲಕ ಸೂಕ್ಷ್ಮವಾಗಿ ಗಮನ ಸೆಳೆಯುವ ಸೃಜನಶೀಲ ನಿರ್ದೇಶಕನಿಗೆ ಅಪಾರ ಅಭಿಮಾನಿ ಬಳಗವಿದೆ. ಇವರ ನಿರ್ದೇಶನದಲ್ಲಿ ವಿಜಯ್(Thalapathy Vijay) ನಟಿಸಬೇಕು ಅನ್ನೋದು ದಳಪತಿ ಭಕ್ತಗಣದ ಬೇಡಿಕೆ. ಆದರೆ ಆ ಬೇಡಿಕೆ ಈಡೇರೋದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ ವೆಟ್ರಿಮಾರನ್(Vetrimaaran).