Rishab Shetty: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ‘ಕಾಂತಾರ’(Kantara) ಸಿನಿಮಾ ಕನ್ನಡ ಚಿತ್ರರಂಗಕ್ಕೆ ಡಿವೈನ್ ಟಚ್ ನೀಡಿದೆ. ಅಲ್ಲಿಂದ ಖುಲಾಯಿಸಿದ ರಿಷಬ್(Rishab Shetty) ಅದೃಷ್ಟ ಗ್ಲೋಬಲ್ ಲೆವೆಲ್‌ಗೆ ಬೆಳೆದು ನಿಂತಿದೆ. ಪ್ರೀಕ್ವೆಲ್ ಮೂಲಕ ಮತ್ತೆ ಸಖತ್ ಬಝ್‌ನಲ್ಲಿರುವ ರಿಷಬ್ ಮೊದಲಿಗಿಂತಲೂ ಶ್ರೀಮಂತವಾಗಿ ಕಾಂತಾರವನ್ನು ಕಟ್ಟಿಕೊಡಲು ಕಸರತ್ತು ಮಾಡ್ತಿದ್ದಾರೆ. ಇದೀಗ ಅದಕ್ಕೆ ಇಂಬು ಕೊಡುವಂತೆ ನಯಾ ಸಮಾಚಾರ ಚರ್ಚೆಯಲ್ಲಿದೆ.
ರಿಷಬ್ ಕಾಂತಾರ(Kantara) ಪ್ರೀಕ್ವೆಲ್‌ಲನ್ನು ಸಖತ್ ರಿಚ್ ಆಗಿ ಕಟ್ಟಿಕೊಡುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಹುಟ್ಟೂರಲ್ಲಿ ಬಿಗ್ ಬಜೆಟ್‌ನಲ್ಲಿ ಸೆಟ್ ನಿರ್ಮಾಣ ಮಾಡ್ತಿದ್ದಾರೆ. ಪ್ರಿ ಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ ಇದರ ನಡುವೆ ರಿಷಬ್ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್(Mohan Lal) ಭೇಟಿಯಾಗಿದ್ದಾರೆ. ಈ ಫೋಟೊ ಈಗ ಕುತೂಹಲಕ್ಕೆ ಕಾರಣವಾಗಿದೆ.
ಪತ್ನಿ ಪ್ರಗತಿ ಶೆಟ್ಟಿ ಜೊತೆ ಮೋಹನ್ ಲಾಲ್(Mohan Lal) ಭೇಟಿಯಾದ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಡಿವೈನ್ ಸ್ಟಾರ್. ಈ ಪೋಟೋ ನೋಡಿ ಕಾಂತಾರ ಪ್ರೀಕ್ವೆಲ್‌ನಲ್ಲಿ ಮೋಹನ್ ಲಾಲ್ ನಟಿಸುತ್ತಾರಾ ಎಂಬ ಚರ್ಚೆ ಈಗ ಶುರುವಾಗಿದೆ. ಪ್ರೀಕ್ವೆಲ್ ಆಗಿರೋದ್ರಿಂದ ರಿಷಬ್‌ಗೆ ನಾಯಕಿ ಯಾರಾಗ್ತಾರೆ ಅನ್ನೋ ಕುತೂಹಲವೂ ಇದೆ. ಈ ಎಲ್ಲಾ ಕುತೂಹಲದ ನಡುವೆ ಮೋಹನ್ ಲಾಲ್ ಭೇಟಿ ಮತ್ತಷ್ಟು ಕ್ಯೂರಿಯಾಸಿಟಿ ಮೂಡಿಸಿದೆ.