ರಾಕಿಭಾಯ್ ಈ ಹೆಸ್ರಿಗೆ ಒಂದ್ ತಾಕತ್ತಿದೆ. ಅದು ಎಲ್ಲರಿಗೂ ಗೊತ್ತಿದೆ. ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಇಂಟ್ರೂಡಕ್ಷನ್ ಕೊಡುವ ಕಾಲ ಹೋಗಾಯ್ತು..ಹೀಗೇನಿದ್ರೂ ರಾಕಿ ಅಂದ್ ತಕ್ಷಣ ಜೈಕಾರ ಹಾಕುವ ಕೋಟ್ಯಾಂತರ ಭಕ್ತಗಣವಿದೆ. ನರಾಚಿ ಕೋಟೆ ಕಟ್ಟಿ ಸುಲ್ತಾನನಾಗಿ ಮೆರೆದ ಯಶ್ ಅನ್ನೋದು ಬರೀ ಹೆಸರಾಗಿ ಉಳಿಯದೇ ಅದೊಂದು ಬ್ರ್ಯಾಂಡ್ ಆಗ್ಬಿಟ್ಟಿದೆ. ಈ ಬ್ರ್ಯಾಂಡ್ ಗೆ ಕೋಟಿಕೋಟಿ ಹಣ ಸುರಿಯುವ ದೊಡ್ಡ ನಿರ್ಮಾಪಕರ ವರ್ಗವಿದೆ. ಅಷ್ಟಕ್ಕೂ ಸೆಲ್ಫ್ ಮೇಡ್ ಷಹಜಾನನ ಬಗ್ಗೆ ಇಷ್ಟೊಂದೆಲ್ಲಾ ಹೇಳ್ತಿರೋದಕ್ಕೆ ಕಾರಣ..ಇನ್ನೇನೂ ಕೆಲ ದಿನಗಳಲ್ಲಿ ರಾಕಿ ಉತ್ಸವ ನಡೆಯಲಿದೆ. ಅರ್ಥಾಥ್..ಯಶ್ ಜನ್ಮೋತ್ಸವ.
ಜನವರಿ 8..ಅಖಂಡ ರಾಕಿಭಾಯ್ ಭಕ್ತಗಣ ಈ ದಿನವನ್ನು ಅದ್ಧೂರಿಯಾಗಿ ಸ್ವಾಗತಿಸೋದಿಕ್ಕೆ ಸಜ್ಜಾಗಿದೆ. ಈ ಬಾರಿಯಾದ್ರೂ ನಮ್ ಬಾಸ್ ಮೀಟ್ ಮಾಡ್ಬೇಕು. ಅವ್ರ ಜೊತೆಗೊಂದು ಫೋಟೋ ತಗೊಳ್ಳಬೇಕು ಅಂತಾ ಒಂಟಿಕಾಲಲ್ಲಿ ಅಭಿಮಾನಿಗಳು ಕಾಯ್ತಿದ್ದಾರೆ.. ನನ್ನ ಜಗದಲದ ಕನಸ್ಸನ್ನು ನಿಮ್ಮ ಮುಂದೆ ಅನಾವರಣ ಮಾಡೋದಿಕ್ಕೆ ಸಮಯ ಕೊಡಿ ಅಂತಾ ಕಳೆದ ವರ್ಷ ಕೈಗೆ ಸಿಗದ ಯಶ್ ಈ ಬಾರಿಯಾದ್ರೂ ಫ್ಯಾನ್ಸ್ ಭೇಟಿಯಾಗ್ತಾರಾ..? ಅವರೊಟ್ಟಿಗೆ ತಮ್ಮ ದಿನವನ್ನು ಸಂಭ್ರಮಿಸ್ತಾರಾ? ಗೊತ್ತಿಲ್ಲ. ಬಟ್ ರಾಕಿ ಆಪ್ತ ಮೂಲಗಳ ಪ್ರಕಾರ ಈ ಬಾರಿ ಅದ್ಧೂರಿ ಜನ್ಮೋತ್ಸವ ಮಾಡಿಕೊಳ್ಳುವ ಉತ್ಸವದಲ್ಲಿದ್ದಾರೆ ಮಿಸ್ಟರ್ ರಾಜಾಹುಲಿ.
ಯಶ್ ಧಾಮ್ ಧೂಮ್ ಅಂತಾ ಜನ್ಮೋತ್ಸವ ಮಾಡಿಕೊಳ್ಳದೇ ಮೂರು ವರ್ಷಗಳೇ ಕಳೆದು ಹೋಯ್ತು. ಕೆಜಿಎಫ್ ಫಸ್ಟ್ ಪಾರ್ಟ್ ಮೆಗಾ ಹಿಟ್ ಆದ್ಮೇಲೆ ನಾ ಭೂತೋ ನಾ ಭವಿಷ್ಯತ್ ಎನ್ನುವಂತೆ ಹುಟ್ದಬ್ಬ ಆಚರಿಸಿಕೊಂಡಿದ್ದರು. 2020 ಜನವರಿ 8ರಂದು ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ತಲೆ ಎತ್ತಿದ್ದ ತಮ್ಮದೇ 216 ಕಟೌಟ್ ಮುಂದೆ 5000 ಸಾವಿರ ಕೇಕ್ ಕಟ್ ಮಾಡಿ ತಮ್ಮ ದಿನವನ್ನು ಅಭಿಮಾನಿಗಳಿಗೆ ಮೀಸಲಿಟ್ಟಿದ್ದರು. ಅದೇ ರೀತಿ ಈ ವರ್ಷದ ಬರ್ತ್ ಡೇಯೂ ಇರಲಿದೆಯಂತೆ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬವನ್ನು ರಂಗೇರಿಸಲು ಟ್ಯಾಕ್ಸಿಕ್ ಬಳಗ ಕೂಡ ಸಜ್ಜಾಗಿದೆ ಎನ್ನಲಾಗ್ತಿದೆ.
ಸುಲ್ತಾನನ ಜನ್ಮದಿನಕ್ಕೆ ಟ್ಯಾಕ್ಸಿಕ್ ಟೀಂ ಸ್ಪೆಷಲ್ ಉಡುಗೊರೆ ನೀಡಲಿದೆ.. ಜಸ್ಟ್ ಒಂದೇ ಒಂದು ನಿಮಿಷ 18 ಸೆಕೆಂಡ್ ನ ‘ಟಾಕ್ಸಿಕ್’ ಝಲಕ್ ರಾಕಿಭಾಯ್ ಭಕ್ತಗಣವನ್ನು ಸೈಕ್ ಮಾಡಿಬಿಟ್ಟಿದೆ. ಯಶ್ ಮಾಲಯಾಳಂ ನಿರ್ದೇಶಕಿ ಗೀತು ಜೊತೆಗೂಡಿ ಅದ್ಯಾವ ವಿಷಕಾರಿ ಕಥೆ ಹೇಳೋದಿಕ್ಕೆ ಹೊರಟಿದ್ದಾರೆ? ತಾರಾಬಳಗದಲ್ಲಿ ಯಾರ್ ಯಾರು ಇರ್ತಾರೆ? ಮ್ಯೂಸಿಕ್ ಪುಳಕ -ಕ್ಯಾಮೆರಾ ಕೈಚಳಕ ಯಾರದ್ದು ಇರಬಹುದು? ನಾಯಕಿ ಯಾರು ಆಗಬಹುದು? ಹೀಗೆ ನಾನಾ ಪ್ರಶ್ನೆಗಳ ಕಾಡುತ್ತಿರುವ ಹೊತ್ತಲ್ಲೇ, ಅಣ್ತಮ್ಮಾನ ಫ್ಯಾನ್ಸ್ ಧಿಡೀರನೆ ಎದ್ದು ಕುರುವಂತಹ ಮತ್ತೊಂದು ಸಮಾಚಾರ ರಿವೀಲ್ ಆಗಿದೆ. ಇದು ಸತ್ಯವೋ..?ಮಿಥ್ಯಯೋ..ಬಟ್ ರಾಕಿ ಭಕ್ತಗಣ ಈ ಖಬರ್ ಕೇಳಿದ್ರೆ ಥ್ರಿಲ್ ಆಗುವುದು ಗ್ಯಾರೆಂಟಿ.
ಟಾಕ್ಸಿಕ್ ಟೈಟಲ್ ಟೀಸರ್ ನೋಡಿದಾಗಲೆಲ್ಲಾ ಹೊಸತರದ ಅನುಭವವನ್ನು ಕೊಡ್ತಿದೆ. ಪ್ರತಿ ಫ್ರೇಮ್ ಅಚ್ಚರಿಗಳ ಗುಚ್ಛವೇ ಸರಿ..ಊಹೆ ಮಾಡಲಿಕ್ಕೂ ಆಗದ ಒಂದಷ್ಟು ಅಂಶಗಳಂತೂ ಆ ತುಣುಕಿನಲ್ಲಿ ಅಡಕವಾಗಿದೆ. ವಾವ್ ಎನಿಸುವ ಮ್ಯೂಸಿಕ್, ಬ್ಯಾಗ್ರೌಂಡ್ ವಾಯ್ಸ್ ಮ್ಯಾಜಿಕ್..ಟೋಟಲಿ ಟಾಕ್ಸಿಕ್ ಟೈಟಲ್ ಟೀಸರ್ ಬಿರುಗಾಳಿ ಸೃಷ್ಟಿಸಿದೆ. ಎಲ್ಲಾ ವುಡ್ ಗಳಲ್ಲಿ ಟಾಕ್ ಐಟಂ ಎನಿಸಿಕೊಂಡಿದೆ. ಸದ್ಯ ಯಶ್ ದೃಷ್ಟಿಕೋನ ಒಂದೇ ಅದು ಟಾಕ್ಸಿಕ್..ಟಾಕ್ಸಿಕ್..ಟಾಕ್ಸಿಕ್.. ಬರೋಬ್ಬರಿ 599 ದಿನಗಳಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯ್ತಿದ್ದ ಫ್ಯಾನ್ಸ್ ಗೆ ಸೆಲ್ಫ್ ಮೇಡ್ ಷಹಜಾನ ಕಾಯಿಸಿ ಸತಾಯಿಸಿಯೇ ಭರ್ಜರಿ ಟ್ರೀಟ್ ಕೊಟ್ಟಿದ್ದಾರೆ. ನನ್ನದು ಜಗದಗಲದ ಕನಸ್ಸು ಎನ್ನುತ್ತಲೇ ಹಾಲಿವುಡ್ ರೇಂಜ್ ನಲ್ಲಿ ಸಿನ್ಮಾ ಮಾಡೋದಿಕ್ಕೆ ಹೊರಟಿರುವ ಬಗ್ಗೆ ಸಂದೇಶ ರವಾನಿಸಿದ್ದಾರೆ. ಟೈಟಲ್ ಟೀಸರ್ ನ್ನು ಹೊಸ ರೀತಿ ಪ್ರಾಸೆಂಟ್ ಮಾಡಿದ್ದ ಚಿತ್ರತಂಡ ರಾಕಿ ಬರ್ತ್ ಡೇಗೆ ಟಾಕ್ಸಿಕ್ ಹೊಸ ಝಲಕ್ ಕಿಕ್ ಕೊಡಲು ಹೊರಟಿದೆಯಂತೆ..ಅದಕ್ಕಾಗಿ ಗೀತು ತಯಾರಿಯಲ್ಲಿದ್ದಾರೆ.
ಜನ್ಮದಿನ ಮುಗಿಸಿಕೊಂಡು ಟ್ಯಾಕ್ಸಿಕ್ ಶೂಟಿಂಗ್ ಅಖಾಡಕ್ಕೆ ಧುಮಕಲಿದ್ದಾರೆ ರಾಕಿಂಗ್ ರಾಮಾಚಾರಿ..ಫೆಬ್ರವರಿಯಿಂದ ಟಾಕ್ಸಿಕ್ ಶೂಟಿಂಗ್ ಶುರುವಾಗಲಿದೆ ಎನ್ನಲಾಗ್ತಿದೆ. ಸ್ಟಾರ್ ಕಾಸ್ಟ್ ನಲ್ಲಿ ಯಾರ್ ಇರ್ತಾರೆ ಅನ್ನೋದನ್ನು ಟಾಪ್ ಸೀಕ್ರೆಟ್ ಆಗಿ ಚಿತ್ರತಂಡ ಇಟ್ಟಿದೆ. ಆದ್ರೆ ಅಂತೇ ಕಂತೇ ಸುದ್ದಿಗಳು ಸಿನಿ ಬಜಾರ್ ನಲ್ಲಿ ಹರಿದಾಡ್ತಿವೆ. ಸಾಯಿಪಲ್ಲವಿ, ಮೃಣಲ್ ಠಾಕೂರ್, ಶೃತಿ ಹಾಸನ..ಈ ಮೂವರಲ್ಲಿ ಒಬ್ರು ರಾಕಿಭಾಯ್ ಟಾಕ್ಸಿಕ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗ್ತಿದೆ. ಬಟ್ ಈಟ್ಸ್ ನಾಟ್ ಎ ಕನ್ಫರ್ಮ್..ಲೇಡಿ ಡೈರೆಕ್ಟರ್ ಜೊತೆ ಕೈ ಜೋಡಿಸಿ ವಿಷಕಾರಿ ಕಥೆ ಹೇಳೋದಿಕ್ಕೆ ಹೊರಟಿರುವ ಯಶ್ ಗುರಿ ಈ ಬಾರಿ ವರ್ಲ್ಡ್ ಸಿನಿಮಾ..ನೋಡೋಣಾ ಹೇಗೆ ಇರಲಿದೆ ಟಾಕ್ಸಿಕ್ ಹಂಗಾಮ..ಅದಕ್ಕೆ ನೀವು ಏಪ್ರಿಲ್ 10 2025ರವೆರೆಗೆ ಕಾಯ್ಲೇಬೇಕು.