ಪುಷ್ಪ ಪಾರ್ಟ್-2ಗಾಗಿ ಇಡೀ ಚಿತ್ರಜಗತ್ತು ಕುತೂಹಲದಿಂದ ಕಾಯ್ತಿದೆ. ಪುಷ್ಪರಾಜ್ ಹಾಗೂ ಭನ್ವರ್ ಸಿಂಗ್ ಶೇಖಾವತ್ ಮುಖಾಮುಖಿಯಾಗೋದನ್ನ ನೋಡೋದಕ್ಕೆ ಇವರಿಬ್ಬರು ಅಭಿಮಾನಿಗಳು ಕಣ್ಣರಳಿಸಿ ಕುಳಿತಿದ್ದಾರೆ. ಹೀಗಿರುವಾಗಲೇ ಕ್ಯಾಪ್ಟನ್ ಸುಕುಮಾರ್ ಭನ್ವರ್ ಸಿಂಗ್ ಶೇಖಾವತ್ ನ ನಯಾ ಅವತಾರವನ್ನ ಜಗತ್ತಿನ ಮುಂದೆ ಹರವಿಟ್ಟಿದ್ದಾರೆ. ಯಸ್, ಸೂಪರ್‍ಸ್ಟಾರ್ ಫಹಾದ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್‍ನ ಉಡುಗೊರೆಯಾಗಿ ನೀಡಿದ್ದಾರೆ. ಅದನ್ನ ತಮ್ಮ ಸೋಷಿಯಲ್ ಲೋಕದಲ್ಲಿ ಫಹಾದ್ ಹಂಚಿಕೊಂಡಿದ್ದು ಎಕ್ಸ್ ಪೆಕ್ಟೇಷನ್ ಡಬಲ್ ಆಗಿದೆ. ಪುಷ್ಪರಾಜ್ ಎದುರು ಭನ್ವರ್ ಸಿಂಗ್ ಶೇಖಾವತ್ ಘರ್ಜನೆ ಹೇಗಿರಬಹುದು ಎನ್ನುವ ಪ್ರಶ್ನೆ ಚಿತ್ರಪ್ರೇಮಿಗಳನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ.
ಸದ್ಯ ರಿಲೀಸ್ ಆಗಿರೋ ಪೋಸ್ಟರ್ ಕುತೂಹಲ ಕೆರಳಿಸಿದೆ. ಬಾಲ್ಡ್ ಹೆಡ್ ಆಗಿ ಕಾಣಿಸಿಕೊಂಡಿರೋ ಫಹಾದ್, ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟು, ತುಟಿ ಮಧ್ಯೆ ಸಿಗರೇಟ್ ಇಟ್ಕೊಂಡು ಹೊಗೆ ಬಿಡುತ್ತಿದ್ದಾರೆ. ಕ್ಯಾಮೆರಾಗೆ ಕಿಲ್ಲಿಂಗ್ ಪೋಸ್ ಕೊಟ್ಟಿರೋ ಫಹಾದ್, ಮೊದಲ ನೋಟದಲ್ಲೇ ಭೀಕರ ಹಾಗೂ ರಣಭಯಂಕರ ಅನ್ನೋದನ್ನ ಪ್ರೂ ಮಾಡಿದ್ದಾರೆ. ವಿಲನಿಶ್ ಶೇಡ್ ಇರುವ ಪೊಲೀಸ್ ಆಫೀಸರ್ ಭನ್ವರ್ ಸಿಂಗ್ ಶೇಖಾವತ್ ಪಾತ್ರಕ್ಕೆ ಫಹಾದ್ ಜೀವತುಂಬಿದ್ದಾರೆ.
ಅಂದ್ಹಾಗೇ, ಫಹಾದ್ ಮಲೆಯಾಳಂ ಚಿತ್ರರಂಗದ ಅತ್ಯದ್ಭುತ ನಟರು. ಅಲ್ಲಿ ಬಹುಬೇಡಿಕೆಯ ನಟರಾಗಿ ಗುರ್ತಿಸಿಕೊಂಡಿದ್ದಾರೆ. ತೆಲುಗು, ತಮಿಳು ಚಿತ್ರರಂಗದಲ್ಲೂ ಒಳ್ಳೊಳ್ಳೆ ಸಿನಿಮಾ ಮಾಡ್ತಿರೋ ಇವರು, ಇತ್ತೀಚೆಗೆ ಧೂಮಂ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೂ ಪರಿಚಯಗೊಂಡಿದ್ದಾರೆ. ಸದ್ಯ ಇಡೀ ಜಗತ್ತು ಎದುರುನೋಡ್ತಿರುವ ಪುಷ್ಪ ಚಿತ್ರದಲ್ಲೂ ಬಹುಮುಖ್ಯ ಪಾತ್ರ ನಿರ್ವಹಿಸ್ತಿದ್ದು, ವೈಶಿಷ್ಯಪೂರ್ಣ ನಟನೆಯಿಂದ ಹೊಸ ಕ್ರೇಜ್ ಸೃಷ್ಟಿಸಿದ್ದಾರೆ. ಆಲ್ ಓವರ್ ಇಂಡಿಯಾ ಅಭಿಮಾನಿ ಬಳಗವನ್ನ ಗಳಿಸಿಕೊಂಡಿದ್ದಾರೆ.
ಇನ್ನೂ ಪುಷ್ಪ ಪಾರ್ಟ್-2ಗೆ ಬರೋದಾದರೆ ಸಿನಿಮಾ ಶೂಟಿಂಗ್ ಆಮೆಯ ನಡೆಯಂತಾಗಿರೋದು ಸತ್ಯ. ಇದೇ ವರ್ಷ ಸಿನಿಮಾ ತೆರೆಗೆ ಬರಬಹುದು ಎನ್ನುವ ನಿರೀಕ್ಷೆಯಂತೂ ಎಲ್ಲರಲ್ಲೂ ಇತ್ತು. ಆದರೆ, 500 ಕೋಟಿ ಬಜೆಟ್ಟಿನ ಪುಷ್ಪ ಸೀಕ್ವೆಲ್ ಶೂಟಿಂಗ್ ಡಿಲೇ ಆಗ್ತಿರೋದ್ರಿಂದ 2024ಕ್ಕೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪ್ಯಾನ್ ಇಂಡಿಯಾ ಜೊತೆಗೆ ಪ್ಯಾನ್ ವಲ್ರ್ಡ್ ಪ್ರೇಕ್ಷಕರು ಸೀಕ್ವೆಲ್‍ಗಾಗಿ ಕಾದಿರುವುದರಿಂದ ಚಿತ್ರತಂಡದ ಮೇಲೆ ಜವಬ್ದಾರಿ ಹೆಚ್ಚಿದೆ. ಹೀಗಾಗಿ, ನಿರ್ದೇಶಕ ಸುಕುಮಾರ್ ಲೇಟಾದ್ರೂ ಲೇಟೆಸ್ಟ್ ಆಗಿ ಸಿನಿಮಾ ಹೊರತರಲಿಕ್ಕೆ ಪ್ರಯತ್ನಿಸುತ್ತಿದ್ದಾರೆ.
ಮೊದಲ ಭಾಗ ಮ್ಯಾಸೀವ್ ಹಿಟ್ ಆಗಿರೋದ್ರಿಂದ ಡೈರೆಕ್ಟರ್ ಕಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಹೀಗಾಗಿ, ಶೂಟಿಂಗ್ ಮಾಡೋದು ತಡವಾಗ್ತಿದೆ ಎನ್ನಲಾಗ್ತಿದೆ. ಜೊತೆಗೆ ಪುಷ್ಪ-2 ಐಟಂ ಸಾಂಗ್‍ಗೆ ಯಾರನ್ನ ಆಯ್ಕೆ ಮಾಡೋದು? ಯಾವ ನಟಿಯನ್ನ ಕರೆತಂದು ಕುಣಿಸಿ ಕ್ರೇಜ್ ಹೆಚ್ಚಿಸೋದು ಅಂತ ಡೈರೆಕ್ಟರ್ ತುಂಬಾ ತಲೆಕೆಡಿಸಿಕೊಂಡಿದ್ದಾರಂತೆ. ಅಂದ್ಹಾಗೇ, ನಟಿ ಶ್ರೀಲೀಲಾ ಐಟಂ ಸಾಂಗ್ ಮಾಡಲ್ಲ ಅಂತ ರಿಜೆಕ್ಟ್ ಮಾಡವ್ರೆ ಅನ್ನೋ ಸುದ್ದಿಯಿದೆ. ಆ ಸುದ್ದಿ ಸುಳ್ಳಾದರೆ ಕಿಸ್ ಬ್ಯೂಟಿ ಪುಷ್ಪರಾಜ್ ಸೊಂಟದ ಮೇಲೆ ಕುಳಿತು ಕುಣಿಯೋದು ಪಕ್ಕಾ, ಕುಣಿಸೋದು ಸತ್ಯ. ಎನಿವೇ ಕಾದುನೋಡೋಣ ಏನಾಗುತ್ತೆ ಅಂತ.