Pooja Hegde: ಕರಾವಳಿ ಬೆಡಗಿ, ಸೌತ್ ಸುಂದರಿಯರಲ್ಲೊಬ್ಬಳು ನಟಿ ಪೂಜಾ ಹೆಗ್ಡೆ(Pooja Hegde). ‘ಬುಟ್ಟಬೊಮ್ಮ’ ಹಾಡಿಗೆ ಅಲ್ಲು ಅರ್ಜುನ್ ಜೊತೆ ಗೊಂಬೆಯಂತೆ ಸೊಂಟ ಬಳುಕಿಸಿ ಖ್ಯಾತಿಗಳಿಸಿ ಎಲ್ಲರ ಮನಗೆದ್ದವರು. ಅಂದ-ಚೆಂದ, ವೈಯ್ಯಾರ, ಡಾನ್ಸ್, ಆಕ್ಟಿಂಗ್ ಎಲ್ಲದರಲ್ಲೂ ಸೂಪರ್ ಈಕೆ. ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲೂ ಬೇಡಿಕೆಯಿರುವ ಈ ನಟಿ ಮುಂಬೈನ ಫೇಮಸ್ ಫ್ಲೇಸ್‌ನಲ್ಲಿ ಲಕ್ಷುರಿ ಮನೆ ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ.
ಬಿಟೌನ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕರಾವಳಿ ಬೆಡಗಿ ಶಾಹಿದ್ ಕಪೂರ್ ಜೊತೆ ‘ದೇವ’(Deva) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. ಸದ್ಯ ಪೂಜಾ(Pooja Hegde) ಐಶಾರಾಮಿ ಮನೆ ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಪೂಜಾ ಹೆಗ್ಡೆ ಹೊಸ ಮನೆ ಖರೀದಿಸಿದ್ದಾರೆ. ಸಮುದ್ರತ್ತ ಮುಖ ಮಾಡಿರುವ ಈ ಐಶಾರಾಮಿ ಮನೆ ಬೆಲೆ ಬರೊಬ್ಬರಿ 45 ಕೋಟಿ. ಲಕ್ಷುರಿ ಮನೆ ಖರೀದಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಸೌತ್ ಬೆಡಗಿ.
2012ರಲ್ಲಿ ತಮಿಳು ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದ ಕರಾವಳಿ ಬೆಡಗಿ, ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಚಿರಂಜೀವಿ ಸೇರಿದಂತೆ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿದ ಖ್ಯಾತಿ ಈಕೆಯದ್ದು. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಸೋಲಿನ ಸುಳಿ ಈಕೆಯನ್ನೂ ಬಾಧಿಸುತ್ತಿದೆ. ಶಾಹಿದ್ ಕಪೂರ್ ಜೊತೆ ನಟಿಸಿರುವ ‘ದೇವ’(Deva) ಸಿನಿಮಾ ಬಿಡುಗಡೆಯಾಗಬೇಕಿದ್ದು, ‘ಸಂಕಿ’ ಸೇರಿದಂತೆ ಮೂರು ಸೌತ್ ಸಿನಿಮಾಗಳು ಪೂಜಾ ಹೆಗ್ಡೆ(Pooja Hegde) ಕೈಯಲ್ಲಿವೆ.