ಹೆಡ್ಡಿಂಗ್ ನೋಡಿದಾಕ್ಷಣ ಕೆಲವರಲ್ಲಿ ಕುತೂಹಲ ಮೂಡಿರುತ್ತೆ, ಇನ್ನೂ ಕೆಲವರಲ್ಲಿ ಮದುವೆಯಾದ್ಮೇಲೆ ಅಭಿಗೆ ಇದೆಲ್ಲಾ ಬೇಕಿತ್ತಾ ಎಂತಲೂ ಅನಿಸಿರುತ್ತೆ. ಆದರೆ, ಅಸಲಿ ವಿಚಾರ ಬೇರೆನೆ ಇದೆ. ಅದೇನು ಅನ್ನೋದನ್ನ ನಿಮಗೆ ತಿಳಿಸಬೇಕು ಅಂತಲೇ ಈ ಸುದ್ದಿನಾ ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇವೆ.
ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅಂಬರೀಷ್ ಈಗ ಫ್ಯಾಮಿಲಿ ಮ್ಯಾನ್. ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಕೆಲವೇ ಕೆಲವು ತಿಂಗಳಾಗಿವೆ. ಬ್ಯಾಚುಲರ್ ಲೈಫ್‍ಗೆ ಗುಡ್ ಬೈ ಹೇಳಿ ಮನದನ್ನೆ ಅವಿವಾ ಬಿದ್ದಪ್ಪ ಕೈಹಿಡಿದಿರೋ ಅಭಿಷೇಕ್ ಅಂಬರೀಷ್ ಈಗ ಸುಖಸಂಸಾರ ಸಾಗಿಸುತ್ತಿದ್ದಾರೆ. ಎಂದಿನಂತೆ ಸಿನಿಮಾಗಳಲ್ಲೂ ತೊಡಗಿಸಿಕೊಂಡು ಶೂಟಿಂಗ್, ಡಬ್ಬಿಂಗ್ ಅಂತ ಬ್ಯುಸಿಯಾಗಿರೋ ಅಭಿ, ಇದ್ದಕ್ಕಿದ್ದ ಹಾಗೇ ಫಸ್ಟ್ ಗರ್ಲ್‍ಫ್ರೆಂಡ್‍ನ ನೆನಪು ಮಾಡಿಕೊಂಡಿದ್ದಾರೆ. ಮಾತ್ರವಲ್ಲ ಆಕೆ ಯಾರು? ಏನು ಅನ್ನೋದನ್ನ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ, ಮರಿರೆಬೆಲ್‍ಸ್ಟಾರ್ ಮನಸ್ಸು ಕದ್ದ ಮೊದಲ ಗೆಳತಿ ಯಾರು ಅಂತೀರಾ? ಇಟ್ಸ್ ನನ್ ಅದರ್ ದ್ಯಾನ್ ಧಕ್ ಧಕ್ ಚೆಲುವೆ ಮಾಧುರಿ ದೀಕ್ಷಿತ್. ಯಸ್, ಬಾಲಿವುಡ್‍ನ ಈ ಬ್ಯೂಟಿಯೇ ಅಭಿಷೇಕ್ ಅಂಬರೀಷ್ ಅವರ ಫಸ್ಟ್ ಗರ್ಲ್‍ಫ್ರೆಂಡ್ ಅಂತೆ. ಈ ಬಗ್ಗೆ ಸ್ವತಃ ಅಭಿಯೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರೋ `ಮಜಾ ಕೆಫೆ’ ಶೋಗೆ ಅತಿಥಿಯಾಗಿ ಹೋಗಿರುವ ಅಭಿ, `ಪ್ರಪಂಚದಲ್ಲಿ ಯಾರು ಹೇಳಿಕೊಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ನಾನು ಧೈರ್ಯವಾಗಿ ಹೇಳ್ತೀನಿ. ನನ್ನ ಫಸ್ಟ್ ಗರ್ಲ್‍ಫ್ರೆಂಡ್ ಮಾಧುರಿ ದೀಕ್ಷಿತ್’
ಈ ಸಾಜನ್ ಚೆಲುವೆಗೆ ನಮ್ಮ ಅಭಿ ಮಾತ್ರವಲ್ಲ ಜಗತ್ತಿನ ಸಾಕಷ್ಟು ಮಂದಿ ಪುರುಷರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಈಕೆಯ ಚೆಲುವಿಗೆ, ಸುಂದರ ನಗುವಿಗೆ ಮನಸೋತು ಮಂಡಿಯೂರಿದ್ದಾರೆ. ಆದರೆ, ಮಾಧುರಿ ಅಮೇರಿಕಾ ಮೂಲದ ಕಾರ್ಡಿಯೋ ಸರ್ಜನ್‍ಗೆ ಮನಸ್ಸು ಕೊಟ್ಟರು. ಮಾಧವ್ ನೆನೆ ಜೊತೆ ಮದುವೆಯಾಗಿ ಸೆಟಲ್ ಆದರು. ಈಗ ಇವರಿಬ್ಬರಿಗೆ ಇಬ್ಬರು ಮುದ್ದಾದ ಗಂಡುಮಕ್ಕಳಿದ್ದಾರೆ. ಪರ್ಸನಲ್ ಲೈಫ್ ಅಂಡ್ ಪ್ರೊಫೆಷನ್ ಲೈಫ್‍ನ ಬ್ಯಾಲೆನ್ಸ್ ಮಾಡ್ತಾ, ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಮಾಧುರಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇನ್ನೂ ನಮ್ಮ ಮರಿರೆಬೆಲ್ ಸ್ಟಾರ್ ವಿಚಾರಕ್ಕೆ ಬರುವುದಾದರೆ ಮೂರು ಸಿನಿಮಾಗಳು ಕೈಯಲ್ಲಿವೆ. ಅಮರ್ ನಂತರ ಸುಕ್ಕಾ ಸೂರಿ ನಿರ್ದೇಶನದ `ಬ್ಯಾಡ್ ಮ್ಯಾನರ್ಸ್’ ಚಿತ್ರ ಒಪ್ಪಿಕೊಂಡರು. ಇದು ಬಿಡುಗಡೆಯಾಗುವ ಮುನ್ನವೇ ಹೆಬ್ಬುಲಿ ಸಿನಿಮಾ ಖ್ಯಾತಿಯ ಕಿಟ್ಟಪ್ಪ ನಿರ್ದೇಶನದ `ಕಾಳಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಯೋಗ್ಯ ಮಹೇಶ್ ನಿರ್ದೇಶನದಲ್ಲಿ ಅಭಿಷೇಕ್ ನಾಲ್ಕನೇ ಸಿನಿಮಾ ಮೂಡಿಬರಲಿದೆ. ಹೀಗೆ, ಮೂರ್ಮೂರು ಚಿತ್ರಗಳು ಒಟ್ಟೊಟ್ಟಿಗೆ ಸಾಗುತ್ತಿದ್ದು, ಒಂದರ ಹಿಂದೆ ಒಂದರಂತೆ ರಿಲೀಸ್‍ಗೆ ರೆಡಿಯಾಗುತ್ತಿವೆ. ಈ ಮಧ್ಯೆ ಖಾಸಗಿ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗಿ ಅಲ್ಲಿ `ಮಾಧುರಿ ದೀಕ್ಷಿತ್ ಫಸ್ಟ್ ಗರ್ಲ್‍ಫ್ರೆಂಡ್’ ಎನ್ನುವ ಮೂಲಕ ಎಲ್ಲರ ಕಿವಿ ನೆಟ್ಟಗಾಗುವಂತೆ ಮಾಡಿದ್ದಾರೆ ಅಭಿಷೇಕ್.