ಎಸ್ ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಜುಗಲ್ ಬಂಧಿಯ ಸಿನಿಮಾ ಎಲ್ಲಿಗ್ ಬಂತು? ಯಾವಾಗಿನಿಂದ ಶೂಟಿಂಗ್ ಚಾಲುವಾಗಲಿದೆ? ಹೇಗಿರಲಿದೆ ಸಿನಿಮಾ ? ಯಾರು ಯಾರು ಚಿತ್ರದಲ್ಲಿ ಇರಲಿದ್ದಾರೆ? ಎಲ್ಲದಕ್ಕಿಂತ ಮುಖ್ಯವಾಗಿ ಸಿನಿಮಾ ಅನೌನ್ಸ್ ಆಗೋದು ಯಾವಾಗ? ಹೀಗೆ ನಾನಾ ಪ್ರಶ್ನೆಗಳು ಪ್ರಿನ್ಸ್ ಭಕ್ತಗಣವನ್ನು ಕಾಡ್ತಿದೆ. ಮಹೇಶ್ ಬಾಬು ಜನ್ಮದಿನಕ್ಕೆ ಸಿನಿಮಾ ಘೋಷಣೆಯಾವುದು ಬಹುತೇಕ ಖಚಿತ ಎನ್ನಲಾಗಿತ್ತಾದರೂ ಈ ಬಗ್ಗೆ ಸದ್ದು-ಸುದ್ದಿಯೇ ಇಲ್ಲದಿರುವುದು ಫ್ಯಾನ್ಸ್ ಗೆ ಬೇಸರ ಮೂಡಿಸಿದೆ. ಆದ್ರೆ ಪ್ರಿನ್ಸ್ ಹಾಗೂ ಜಕ್ಕಣ್ಣನ ಸಿನಿಮಾದ ಕಥೆಯ ಸಾರಥಿ ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸಿನಿಮಾ ಬಗ್ಗೆ ಎಕ್ಸೈಟ್ ಆಗುವ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ.
ಇಬ್ಬರು ಕೂಡಿ ಸಿನಿಮಾ ಮಾಡ್ತಾರೆನ್ನುವ ಸುದ್ದಿ ಹೊರಬಿದ್ದು ವರ್ಷಗಳೇ ಕಳೀತು. ಆದರೆ, ಅವರಿಬ್ಬರ ಅಂಗಳದಿಂದ ಯಾವೊಂದು ಅಪ್‍ಡೇಟ್ ಕೂಡ ಹೊರಬಿದ್ದಿಲ್ಲ. ಮೌಳಿ-ಮಹರ್ಷಿ ಮೂವೀ ಅಧಿಕೃತವಾಗಿ ಅನೌನ್ಸ್ ಆಗ್ತಿಲ್ಲ. ಬಟ್, ಇವರಿಬ್ಬರ ಜುಗಲ್ ಬಂಧಿಯ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಹೀಗಾಗಿ, ಕಲಾಭಿಮಾನಿಗಳಿಂದ ಹಿಡಿದು ಸಿನಿಮಾಮಂದಿ ತನಕ ಕುತೂಹಲದ ಕಣ್ಣಲ್ಲೇ ಅವರಿಬ್ಬರತ್ತ ಚಿತ್ತನೆಟ್ಟಿದ್ದಾರೆ. ಅಧಿಕೃತವಾಗಿ ಸಿನಿಮಾ ಘೋಷಣೆಯಾಗಲಿ, ಪೋಸ್ಟರ್ ಹೊರಬರಲೆಂದು ಆಶಿಸುತ್ತಿದ್ದಾರೆ. ಹೀಗಿರುವಾಗಲೇ ಮೌಳಿ ಫಾದರ್ರು ಹಾಲಿವುಡ್ ಸ್ಟಾರ್ ಕಾಸ್ಟ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಹಿಂದೊಮ್ಮೆ ಈ ಬಗ್ಗೆ ಸುದ್ದಿಯಾಗಿತ್ತು ಮೌಳಿ-ಮಹರ್ಷಿ ಕಾಂಬೋ ಪಿಕ್ಚರ್ ಗೆ ಹಾಲಿವುಡ್ ಸ್ಟಾರ್ ಗಳು ಎಂಟ್ರಿಕೊಡ್ತಾರೆನ್ನುವ ನ್ಯೂಸು ಪಟಾಕಿ ಹಚ್ಚಿತ್ತು. ಇದೀಗ ಆ ಸುದ್ದಿಗೆ ಪುಷ್ಟಿ ಸಿಕ್ಕಿದೆ. ಥಾರ್ ಸೇರಿದಂತೆ ಹಲವು ಹಾಲಿವುಡ್ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿರುವ ಕ್ರಿಸ್ ಹೆಮಸವರ್ತ್ ಗೆಸ್ಟ್ ಅಪಿಯರೆನ್ಸ್ ಮಾಡೋದು ಪಕ್ಕಾ ಎನ್ನಲಾಗ್ತಿದೆ. ಯಾಕಂದ್ರೆ, ಹಾಲಿವುಡ್ ಸ್ಟಾರ್ ಇರಲಿದ್ದಾರೆ ಅನ್ನೋದನ್ನು ಸ್ವತಃ ಕಥೆಗಾರ ವಿಜಯೇಂದ್ರ ಪ್ರಸಾದ್ ಬಿಚ್ಚಿಟ್ಟಿದ್ದಾರೆ.
ಜಕ್ಕಣ್ಣ-ಪ್ರಿನ್ಸ್..ಈ ಕ್ರೇಜಿ ಕಾಂಬಿನೇಷನ್ ನ ಮೋಸ್ಟ್ ಎಕ್ಸ್ ಪೆಕ್ಟೇಡ್ ಪ್ರಾಜೆಕ್ಟ್ ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರಕ್ಕಾಗಿ ಮೂರು ತಿಂಗಳು ವರ್ಕ್ ಶಾಪ್ ಆಯೋಜಿಸಲಾಗಿದ್ದು, ಮಹೇಶ್ ಬಾಬು ಶೀಘ್ರದಲ್ಲಿಯೇ ವರ್ಕ್ ಶಾಪ್ ನಲ್ಲಿ ಭಾಗಿಯಾಗಲಿದ್ದಾರೆ. ಹಾಗಿದ್ರೆ ಪ್ರಿನ್ಸ್ ಪಾತ್ರ ಹೇಗಿಲಿದೆ ಎಂಬ ಕುತೂಹಲಕ್ಕೆ ಉತ್ತರವೂ ಸಿಕ್ಕಿದ್ದು, ಹನುಮಾನ್ ಪ್ರೇರೇಪಿತವಾಗಿರಲಿದೆಯಂತೆ.
ರಾಜಮೌಳಿ ಸಿನಿಮಾಗಳೇ ಹಾಗೇ..ಸಿನಿಮಾಕ್ಕೊಂದು ಜಾನರ್..ಸಿನಿಮಾಕ್ಕೊಂದು ಬದಲಾವಣೆ..ಯಾರು ಮಾಡಿರದೆ, ಊಹೆಯೂ ಮಾಡಲಾಗದ ಟ್ವಿಸ್ಟ್ ಅಂಡ್ ಟರ್ನ್ ಎಲ್ಲವೂ ಮೌಳಿ ಚಿತ್ರಗಳ ಹೈಲೆಟ್ಸ್..ಅಂತಹದ್ದೇ ನಿರೀಕ್ಷೆಗಳೊಂದಿಗೆ ಮುಂದಿನ ಸಿನಿಮಾವೂ ತಯಾರಾಗ್ತಿದೆ. ಅದು ದೊಡ್ಡ ಮಟ್ಟದಲ್ಲಿ…ಹಾಲಿವುಡ್ ಸ್ಟಾರ್ಸ್ ಜೊತೆಗೆ ಬಾಲಿವುಡ್ ಮಂದಿಯೂ ಪ್ರಿನ್ಸ್ ಅಡ್ಡ ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ದೀಪಿಕಾ ಪಡುಕೋಣೆಯನ್ನು ಮಹೇಶ್ ಬಾಬುಗೆ ಜೋಡಿಯಾಗಿ ನಿಲ್ಲಿಸುವ ಐಡಿಯಾ ಹಾಕಿರುವ ಮೌಳಿಗಾರು, ಮಿಸ್ಟರ್ ಫರ್ಪೆಕ್ಷನಿಸ್ಟ್ ಖಳನಾಯಕನಾಗಿ ಕರೆತರಲಿದ್ದಾರೆ ಎನ್ನಲಾಗ್ತಿದೆ. ನೋಡೋಣಾ ಎಲ್ಲವೂ ಅಂತೇ ಕಂತೇಗಳೇ..ಪ್ರಿನ್ಸ್ ಬರ್ತ್ ಡೇಗೆ ಸಿನಿಮಾ ಅನೌನ್ಸ್ ಆಗೇ ಆಗುತ್ತೇ ಎಂಬ ಭರವಸೆಯಲ್ಲಿದ್ದ ಫ್ಯಾನ್ಸ್ ನಿರಾಸೆಯಾಗಿದೆ. ಯಾವಾಗ ಅನೌನ್ಸ್ ಆಗಲಿದೆ ಎಂಬ ಪ್ರಶ್ನೆಯೂ ಕಾಡ್ತಿದೆ. ಅದಕ್ಕೆ ರಾಜಮೌಳಿಯೇ ಉತ್ತರಕೊಡಬೇಕಿದೆ.