ಒಂದು ಯಶಸ್ವಿ ಚಿತ್ರ ಯಾವ್ಯಾವ ಸ್ವರೂಪದಲ್ಲಿ ಪ್ರೇಕ್ಷಕರ ಗಮನಸೆಳೆಯುತ್ತದೋ ಆ ಎಲ್ಲಾ ರೀತಿಯಿಂದಲೂ ಸದ್ದು ಮಾಡುತ್ತಾ ಸಾಗುತ್ತಿರುವ ಸಿನಿಮಾ ಟಗರು ಪಲ್ಯ. ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ನಾಯಕಿನಾಗಿ ಚಿತ್ರರಂಗಕ್ಕೆ ಕಾಲಿಟ್ಟಿರುವ, ನಾಗಭೂಷಣ್ ನಾಯಕನಾಗಿ ನಟಿಸಿರುವ, ಉಮೇಶ್ ಕೆ ಕೃಪಾ ನಿರ್ದೇಶನ, ಅನುಭವಿ ತಾರಾಬಳಗ ಹಾಗೂ ಪ್ರತಿಭಾನ್ವಿತ ತಂತ್ರಜ್ಞಾನ ತಂಡದ ಪರಿಶ್ರಮದಿಂದ ತಯಾರಾಗಿರುವ ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅಪ್ಪಟ ಹಳ್ಳಿ ಸೊಗಡಿನ ಘಮಲು…ನಗುವಿನ ಹೊನಲು ಹೊತ್ತು ಬರ್ತಿರುವ ಟಗರು ಪಲ್ಯ ಸವಿಯೋದಿಕ್ಕೆ ಡಾಲಿ ಹಾಗೂ ತಾರಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ಕೊಟ್ಟಿದ್ದಾರೆ.
ಡಾಲಿ ಪಿಕ್ಚರ್ಸ್ ನ ಮೂರನೇ ಕೊಡುಗೆಯಾಗಿರುವ ಟಗರು ಪಲ್ಯ ಸಿನಿಮಾ ಕನ್ನಡ ರಾಜ್ಯೋತ್ಸವದ ಸ್ಪೆಷಲ್ ಆಗಿ ಇದೇ ತಿಂಗಳ 27ಕ್ಕೆ ರಾಜ್ಯಾದ್ಯಂತ ಮೆರವಣಿಗೆ ಹೊರಡಲಿದೆ. ಹೊಸತನ ಹಾಗೂ ಪ್ರಯೋಗಾತ್ಮಕ ಕಂಟೆಂಟ್ ಒಳಗೊಂಡಿರುವ ಈ ಚಿತ್ರದ ಟ್ರೇಲರ್ ನೋಡಿ ಮೆಚ್ಚುಕೊಂಡಿರುವ ಸಿಎಂ, ಡಾಲಿ ಆಹ್ವಾನಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ತಮ್ಮ ಆಗಮನಕ್ಕಾಗಿ ಇಡೀ ತಂಡ ಕಾಯುತ್ತದೆ ಎಂದಿದ್ದಾರೆ ಧನು.
ಮಂಡ್ಯ ಜಿಲ್ಲೆಯಲ್ಲಿ ನಡೆಯುವ ನೈಜ ಘಟನೆಯನ್ನು ಇಟ್ಕೊಂಡು ಟಗರು ಪಲ್ಯ ತಯಾರಿಸಿದ್ದಾರೆ ಉಮೇಶ್ ಕೆ ಕೃಪಾ. ಟ್ರೇಲರ್ ಅಂತೂ ಸಖತ್ ಲವ್ಲಿಯಾಗಿದೆ. ಪುಟ್ಟ ಪಾತ್ರದಲ್ಲೂ ಕಾಣಿಸಿಕೊಂಡಿರೋ ಸಂಗೀತ ನಿರ್ದೇಶಕ ವಾಸುಕಿ ವೈಭವ್, ಈ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ಡಾಲಿ ಧನಂಜಯ್ ಹಣ ಹಾಕುವುದರ ಜೊತೆಗೆ ಹಾಡುಗಳಿಗೆ ಪದ ಪೊಣಿಸಿದ್ದು, ಅದ್ರಲ್ಲೂ ಸೂರ್ಯಕಾಂತಿಯ ಸಿಂಗಿಂಗೂ ಕೇಳುಗರಲ್ಲಿ ಗುಂಗು ಹಿಡಿಸಿದೆ. ಇನ್ನು, ಟಗರು ಪಲ್ಯ ಮೇಕಿಂಗ್ ರಿವೀಲ್ ಮಾಡಿರುವ ಚಿತ್ರತಂಡ ತನ್ನ ಸಣ್ಣ ಝಲಕ್ ಮೂಲಕ ಕಿಕ್ ಕೊಡ್ತಿದೆ. ಇನ್ನೇನೂ ಬೆರಳೆಣಿಕೆಯಷ್ಟೇ ದಿನ ಮಾತ್ರ, ಡಾಲಿ ನಿರ್ಮಿಸಿರುವ ಟಗರು ಪಲ್ಯ ಸವಿಯೋದಿಕ್ಕೆ.