Chiyaan Vikaram: ಕಾಲಿವುಡ್ ಸೂಪರ್ ಸ್ಟಾರ್, ಹ್ಯಾಂಡ್ಸಮ್ ಹಂಕ್ ಚಿಯಾನ್ ವಿಕ್ರಮ್ ತಮ್ಮ62ನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಎಸ್.ಯು.ಅರುಣ್ ಕುಮಾರ್(SU Arun Kumar) ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ವಿಕ್ರಮ್(Chiyaan Vikaram) ನಾಯಕಿ ಯಾರಾಗುತ್ತಾರೆ ಎಂಬ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಯುವ ನಟಿಯೊಬ್ಬರು ಈ ಸಿನಿಮಾ ಅಡ್ಡ ಸೇರಿಕೊಂಡಿದ್ದಾರೆ.
ಚಿಯಾನ್ ವಿಕ್ರಮ್(Chiyaan Vikaram) 62ನೇ ಸಿನಿಮಾದಲ್ಲಿ ವಿಕ್ರಮ್ ಜೊತೆ ಯುವ ನಟಿ ರೋಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಪ.ರಂಜಿತ್ ನಿರ್ದೇಶನದ ʻಸರಪಟ್ಟ ಪರಂಪರೈʼ ಖ್ಯಾತಿಯ ದುಶಾರ ವಿಜಯನ್(Dushara Vijayan). ನಿರ್ದೇಶಕ ಅರುಣ್ ಕುಮಾರ್ ಹಾಗೂ ನಿರ್ಮಾಣ ಸಂಸ್ಥೆ ದುಶಾರ ವಿಜಯನ್ ಚಿತ್ರತಂಡ ಸೇರಿಕೊಂಡಿದ್ದನ್ನು ಅಧೀಕೃತವಾಗಿ ಘೋಷಣೆ ಮಾಡಿದೆ. ದುಶಾರ ವಿಜಯನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಲೆಜೆಂಡರಿ ಆಕ್ಟರ್, ಬಾಲ್ಯದ ಹೀರೋ ಜೊತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್(Rajinikanth) 170ನೇ ಸಿನಿಮಾಗೂ ನಾಯಕಿಯಾಗಿರುವ ದುಶಾರಗೆ ಇದೀಗ ಮತೊಬ್ಬ ಸೂಪರ್ ಸ್ಟಾರ್ ಜೊತೆ ನಟಿಸೋ ಅದೃಷ್ಟ ಸಿಕ್ಕಿದೆ.
ʻಚಿತ್ತʼ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಎಸ್.ಯು ಅರುಣ್ ಕುಮಾರ್(SU Arun Kumar). ಇದೀಗ ಸೂಪರ್ ಸ್ಟಾರ್ ವಿಕ್ರಮ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿ ಹೊಸ ಅವತಾರದಲ್ಲಿ ಕಾಣಸಿಗಲಿದ್ದಾರೆ ಚಿಯಾನ್ ವಿಕ್ರಮ್(Chiyaan Vikaram). ಮಲಯಾಳಂ ನಟ ಸೂರಜ್ ವೆಂಜರಮೂಡು, ಹಾಗೂ ಎಸ್‌ಜೆ.ಸೂರ್ಯ ಈಗಾಗಲೇ ಚಿಯಾನ್ ಸಿನಿಮಾ ಭಾಗವಾಗಿದ್ದು, ಇದೀಗ ಯುವ ನಟಿ ದುಶಾರ ಎಂಟ್ರಿ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಚಿತ್ರೀಕರಣ ಮೇ ತಿಂಗಳಿನಲ್ಲಿ ಆರಂಭವಾಗಲಿದ್ದು, ಸದ್ಯದಲ್ಲೇ ಸಿನಿಮಾದ ಟೈಟಲ್ ರಿವೀಲ್ ಮಾಡಲಿದೆ ಚಿತ್ರತಂಡ. ಚಿಯಾನ್(Chiyaan Vikaram) ಹಾಗೂ ಪ.ರಂಜಿತ್ ಕಾಂಬಿನೇಶನ್‌ನಲ್ಲಿ ಮೂಡಿ ಬರ್ತಿರುವ ತಂಗಳನ್(Thangalaan) ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಲೋಕಸಭೆ ಚುನಾವಣೆ ಪ್ರಯುಕ್ತ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿದೆ.