ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

economy of kumbh mela 2025: ಕುಂಭ ಮೇಳದಿಂದ ಸೃಷ್ಟಿಯಾಗುತ್ತೆ ಕೋಟಿ ಕೋಟಿ ಆರ್ಥಿಕತೆ!

Majja Webdeskby Majja Webdesk
26/02/2025
in Majja Special
Reading Time: 1 min read
economy of kumbh mela 2025: ಕುಂಭ ಮೇಳದಿಂದ ಸೃಷ್ಟಿಯಾಗುತ್ತೆ ಕೋಟಿ ಕೋಟಿ ಆರ್ಥಿಕತೆ!

-ಭಕ್ತಿಯ ಸುತ್ತಾ ಹೊಸೆದುಕೊಂಡಿರೋ ಪ್ರವಾಸೋದ್ಯಮ!

-ಉತ್ತರಪ್ರದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್!

ನೂರಾ ನಲವತ್ನಾಲಕ್ಕು ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳ ಅತ್ಯಂತ ಯಶಸ್ವಿಯಾಗಿದೆ. ಮಿಲಿಯನ್ನುಗಟ್ಟಲೆ ಭಕ್ತರು ದೇಶ ವಿದೇಶಗಳಿಂದ ಬಂದು ಪವಿತ್ರ ಗಂಗೆಯಲ್ಲಿ ಮಿಂದು ಪುನೀತರಾಗಿದ್ದಾರೆ. ಈ ಬಾರಿ ತಲೆದೋರಿದ್ದ ಅತ್ಯಂತ ನಿಷ್ಠುರವಾದ ವಿಮರ್ಶೆ, ಟೀಕೆ ಟಿಪ್ಪಣಿಗಳಾಚೆಗೂ ಪವಿತ್ರ ಕುಂಭ ಮೇಳ ಯಶ ಕಂಡಿದೆ. ಹಾಗಾದರೆ, ಈ ಯಶಸ್ಸು ಭಾರತದ ಆಧ್ಯಾತ್ಮಿಕತೆಗೆ ಮಾತ್ರವೇ ಸೀಮಿತವಾ? ಹೀಗೊಂದು ಪ್ರಶ್ನೆ ಮೂಡಿಕೊಳ್ಳೋದು ಸಹಜ. ಭಕ್ತಿ ಭಾವ ಹೊಂದಿರುವ ಮಂದಿಗೆ ಇದು ಅಧ್ಯಾತ್ಮಿಕ ಗೆಲುವಿನಂತೆ ಕಾಣಿಸೋದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅದರಲ್ಲಿ ತಪ್ಪೂ ಇಲ್ಲ. ಆದರೆ, ನಮ್ಮ ದೇಶದಲ್ಲಿರುವ ಅಷ್ಟೂ ಪುಣ್ಯಕ್ಷೇತ್ರ, ತೀರ್ಥಕ್ಷೇತ್ರಗಳಿಗೆ ತೆರಳೋ ಭಕ್ತರ ಮೂಲಕ ಬಹುದೊಡ್ಡ ಆರ್ಥಿಕ ಚಟುವಟಿಕೆ ಇರುತ್ತೆ. ಅದರಿಂದಲೇ ಆಯಾ ರಾಜ್ಯಗಳ ಬೊಕ್ಕಸಕ್ಕೆ ಕೋಟಿ ಕೋಟಿ ಕಾಸು ಹರಿದು ಬರುತ್ತೆ. ಹಾಗಿದ್ದ ಮೇಲೆ ಮಿಲಿಯನ್ನುಗಟ್ಟಲೆ ಜನಸಾಗರ ಹರಿದು ಬಂದಿರುವ ಪ್ರಯಾಗ್ ರಾಜ್ ನ ಕುಂಭ ಮೇಳದ ಹಿಂದೆ ಬಹುಕೋಟಿ ಆರ್ಥಿಕತೆ ಇರೋದರಲ್ಲಿ ಯಾವ ಸಂಶಯವೂ ಇಲ್ಲ!


ಹಾಗಾದರೆ, ಈ ಬಾರಿಯ ಮಹಾ ಕುಂಭ ಮೇಳದ ಭೂಮಿಕೆಯಲ್ಲಿ ಎಷ್ಟು ಮೊತ್ತದ ಆರ್ಥಿಕತೆ ಕುಂಭ ಮೇಳದ ಸುತ್ತಾ ನಡೆದಿದೆ ಅನ್ನೋ ಕುತೂಹಲ ಇದ್ದೇ ಇದೆ. ಈ ಬಗ್ಗೆ ಆರ್ಥಿಕ ತಜ್ಞರು ಒಂದಷ್ಟು ಅಂಕಿ ಅಂಶಗಳನ್ನು ಹರಿಯಬಿಡುತ್ತಿದ್ದಾರೆ. ಈ ವಿಚಾರವಾಗಿ ನಾನಾ ತೆರನಾದ ಕಪೋಲ ಕಲ್ಪಿತ ಅಂಕಿ ಅಂಶಗಳು ಹರಿದಾಡುತ್ತಿವೆ. ಈಗ ನಮ್ಮ ರಾಜ್ಯದಲ್ಲಿಯೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿವೆಯಲ್ಲಾ? ಅದರ ಮೂಲಕವೇ ವರ್ಷಾವರ್ಷ ಕೋಟಿಗಟ್ಟಲೆ ಹಣ ಸರ್ಕಾರದ ಬೊಕ್ಕಸ ಸೇರುತ್ತೆ. ಯಾವುದೇ ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಆಮದನಿ ಅಲ್ಲಿರುವ ದೇವಸ್ಥಾನಗಳ ಮೂಲಕ ಆವೇಗ ಪಡೆದುಕೊಳ್ಳುತ್ತವೆ. ಕುಂಭ ಮೇಳವೆಂಬುದು ಒಂದಷ್ಟು ದಿನಗಳ ಕಾಲ ನಡೆದರೂ ಕೂಡಾ, ಅದರ ಆರ್ಥಿಕ ವ್ಯವಹಾರ ಅಷ್ಟೂ ರಾಜ್ಯಗಳ ವಾರ್ಶಿಕ ವಹಿವಾಟನ್ನೇ ಮೀರಿಸಿ ಬಿಡುವಂತಿದೆ!

ಎರಡು ಲಕ್ಷ ಕೋಟಿ


ಈ ಕುಂಭ ಮೇಳದ ಸುತ್ತಾ ನಡೆದಿರುವ ವಹಿವಾಟಿನ ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತೆ. ಈಗಾಗಲೇ ಆರ್ಥಿಕ ತಜ್ಞರು ಉತ್ತರ ಪ್ರದೇಶ ಸರ್ಕಾರಕ್ಕೆ ಈ ಬಗ್ಗೆ ಅಧಿಕೃತ ಮಾಹಿತಿ ರವಾನಿಸಿದ್ದಾರೆ. ಅದರನ್ವಯ ಹೇಳೋದಾದರೆ, ಈ ಬಾರಿ ಕುಂಭ ಮೇಳದಲ್ಲಿ ಎರಡು ಲಕ್ಷ ಕೋಟಿ ಆದಾಯ ಬಂದಿದೆ. ಇದು ಉತ್ತರ ಪ್ರದೇಶ ರಾಜ್ಯದ ಆಡಳಿತಾತ್ಮಕ ವಲಯಕ್ಕೆ ಆರ್ಥಿಕವಾಗಿ ಆನೆ ಬಲ ತಂದು ಕೊಟ್ಟಿದೆ. ಅದರಿಂದಲೇ ಒಂದಷ್ಟು ಅಭಿವೃದ್ಧಿ ಕಾರ್ಯ ಮಾಡಿ ಜನರಿಗೆ ಉಪಯೋಗವಾಗುವಂತೆ ನೋಡಿಕೊಂಡರೆ ಕುಂಭ ಮೇಳ ನಿಜಕ್ಕೂ ಸಾರ್ಥಕ್ಯ ಕಾಣುತ್ತೆ. ಹಾಗಂತ ಈ ದೇಶದ ಪ್ರಜ್ಞಾವಂತರೆಲ್ಲ ಆಶಿಸುತ್ತಿದ್ದಾರೆ. ಇದೆಲ್ಲದರಾಚೆಗೆ ಪ್ರಯಾಗ್ ರಾಜ್‌ನ ಕುಂಭ ಮೇಳದ ಒಟ್ಟಾರೆ ಆರ್ಥಿಕ ವಹಿವಾಟು ಕಂಡು ಇಒಡೀ ಜಗತ್ತೇ ನಿಬ್ಬೆರಗಾಗಿರೋದಂತೂ ಸತ್ಯ.
ಇದು ಭಾರತದ ಆಧ್ಯಾತ್ಮಿಕ ವಲಯಕ್ಕಿರುವ ಆರ್ಥಿಕ ಸಾಮರ್ಥ್ಯದ ದ್ಯೋತಕವಾಗಿಯೂ ಕಾಣಿಸುತ್ತಿದೆ. ಹಾಗೆ ನೋಡಿದರೆ, ಭಾರತದ ಪಾಲಿನ ಪ್ರವಾಸೋದ್ಯಮದ ನಿಜವಾದ ಶಕ್ತಿಯಾಗಿರೋದೇ ಧಾರ್ಮಿಕ ಕ್ಷೇತ್ರಗಳು ಮತ್ತು ಅವುಗಳ ಸುತ್ತ ಹಬ್ಬಿಕೊಂಡಿರುವ ನಂಬಿಕೆಗಳು. ಒಟ್ಟಾರೆ ಭಾರತದ ನಿವ್ವಳ ಆದಾಯದಲ್ಲಿ ಇಂಥಾ ಧಾರ್ಮಿಕ ಕ್ಷೇತ್ರಗಳ ಪಾಲು ಬಹು ದೊಡ್ಡದಿದೆ. ಪರಿಸರ ಪ್ರವಾಸೋದ್ಯಮವೂ ಸೇರಿದಂತೆ ಈ ವಲಯದಲ್ಲಿ ನಾನಾ ಪ್ರಾಕಾರಗಳಿದ್ದಾವೆ. ಆದರೆ ಆದಾಯದ ವಿಚಾರದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿದರೆ ಖಂಡಿತವಾಗಿಯೂ ಅದೆಲ್ಲದರಲ್ಲಿ ಧಾರ್ಮಿಕ ಕ್ಷೇತ್ರವೇ ಮುಂಚೂಣಿಯಲ್ಲಿರುವ ಅಚ್ಚರಿಯೊಂದು ಎದುರಾಗುತ್ತದೆ. ಅದರ ನಿಜವಾದ ಶಕ್ತಿ ಏನೆಂಬುದು ಖಂಡಿತವಾಗಿಯೂ ಈ ಮಹಾ ಕುಂಭ ಮೇಳದ ಒಟ್ಟಾರೆ ಆರ್ಥಿಕ ವಹಿವಾಟಿನ ನೈಜ ಅಂಕಿ ಅಂಶಗಳ ಮೂಲಕ ಜಾಹೀರಾಗುತ್ತದೆ.

ಕುಂಭ ಮೇಳದ ಶಕ್ತಿ


ನೂರಾ ನಲವತ್ನಾಲಕ್ಕು ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮವಾದ ಗಂಗಾ, ಸರಸ್ವತಿ ಹಾಗೂ ಯಮುನಾ ನದಿಗಳ ಪುಣ್ಯ ಸ್ನಾನದ ಅನುಭವಕ್ಕೆ ಸಾಕ್ಷಿಯಾಗುತ್ತದೆ. ಪ್ರತಿ ಹನ್ನೆರಡು ವರ್ಷಕ್ಕೆ ನಡೆಯುವುದು ಕುಂಭಮೇಳ ಹಾಗೂ ಇನ್ನು ಪ್ರತಿ ನೂರಾ ನಲವತ್ನಾಲಕ್ಕು ವರ್ಷಕ್ಕೆ ನಡೆಯುವುದು ಮಹಾ ಕುಂಭಮೇಳ. ಸದ್ಯ ಮಹಾ ಕುಂಭಮೇಳವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿರೊದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಆನವರಿ ೧೩ರ ಸಂಕ್ರಾಂತಿಯಿಂದ ಶುರುವಾಗಿರುವ ಮಹಾ ಕುಂಭಮೇಳ ಫೆಬ್ರವರಿ ೨೬ರ ಶಿವರಾತ್ರಿಯವರೆಗೆ ಸತತ ನಲವತ್ನಾಲಕ್ಕು ದಿನಗಳವರೆಗೂ ನಡೆಯುತ್ತಿದೆ. ಸುಮಾರು ಇದೇ ಸಮಯದಲ್ಲಿ ದೇಶದ ಬಹುತೇಕ ಸಾಧು, ಸಂತರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ದಂಡೆಯಲ್ಲಿ ಬಂದು ಡುಮುಕಿ ಹಾಕುತ್ತಿದ್ದಾರೆ. ಸತತ ಹದಿನೈದು ಕಿಲೋಮಿಟರ್ ಉದ್ದಕ್ಕೆ ಹರಡಿರುವ ಸಂಗಮದಲ್ಲಿ ದೇಶದ ಕೋಟ್ಯಾಂತರ ಭಕ್ತರುಗಳು ಬಂದು ಪುಣ್ಯ ಸ್ನಾನದ ಹೇಸರಿನಲ್ಲಿ ದಿನನಿತ್ಯ ಮಿಂದೆದ್ದು ಹೊಗುತ್ತಿದ್ದಾರೆ. ದೇಶದಿಂದ ಅಷ್ಟೆಯಲ್ಲ ವೀದೇಶದಿಂದಲೂ ಜನರು ಇಲ್ಲಿಗೆ ಬಂದು ಪುಣ್ಯ ಸ್ನಾನದ ಹೇಸರಿನಲ್ಲಿ ಏಕತೆಯ ದರ್ಶನವು ಆಗುತ್ತಿರುವುದು ಸುಳ್ಳಲ್ಲ. ಈ ಮಹಾ ಕುಂಭಮೇಳದಲ್ಲಿ ಪುಣ್ಯದ ಸ್ನಾನ ಮಾಡಿದರೆ ಜೀವನದ ಪಾಪಗಳೆಲ್ಲ ತೊಳೆದು ಪುಣ್ಯ ಪ್ರಾಪ್ತಿ ಆಗುತ್ತದೆ ಅನ್ನುವ ಪ್ರತೀತಿ ಹಿಂದೂ ಭಕ್ತರಲ್ಲಿ ಮೂಡಿದೆ. ಮಹಾ ಕುಂಭಮೇಳ ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲ; ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಪಂಪರತ್ಮಾಕ ಹಾಗೂ ಐತಿಹಾಸಿಕ ಮಹತ್ವವನ್ನು ಸಾರುವ ಸಮ್ಮೇಳನವನ್ನಾಗಿಸಿದೆ ಎಂಬಂಥಾ ಭಾವ ಅಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರಲಿಯೂ ಮೂಡಿಕೊಳ್ಳುತ್ತೆ.
ವಿದ್ವಾಂಸರ ಪ್ರಕಾರ ಕುಂಭಮೇಳ ಎಂಬ ಸಂಪ್ರದಾಯವನ್ನು ಅತ್ಯಂತ ವ್ಯವಸ್ಥಿತವಾಗಿ ಹುಟ್ಟು ಹಾಕಿದ ಕೀರ್ತಿ ಸಲ್ಲುವುದು ಆದಿ ಶಂಕರಾಚಾರ್ಯರಿಗೆ. ಅವರು ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದಂತೆಯೆ ನಾಲ್ಕು ಯಾತ್ರಾ ಸ್ಥಳಗಳಾದ ಪ್ರಯಾಗ್‌ರಾಜ್, ಉಜ್ಜಯಿನಿ, ನಾಸಿಕ್ ಮತ್ತು ಹರಿದ್ವಾರ್‌ಗಳಲ್ಲಿ ಕುಂಭಮೇಳದಲ್ಲಿ ಸಾಧುಗಳು ಭಾಗವಹಿಸುವಿಕೆಯನ್ನು ಖಚಿತ ಪಡಿಸಿದರು. ಇವತ್ತಿಗೂ ಶಂಕರಾಚಾರ್ಯರ ಮಠಕ್ಕೆ ಸಂಬಂಧಿಸಿದ ಋಷಿಮುನಿಗಳು ಹಾಗೂ ಸಂತರು ತಮ್ಮ ಶಿಷ್ಯರೊಂದಿಗೆ ಬಂದು ತಪ್ಪದೆ ಈ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಪ್ರತಿ ಹನ್ನೆರಡು ವರ್ಷಕ್ಕೆ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ. ಇಂತಹ ಹನ್ನೊಂದು ಕುಂಭಮೇಳದ ನಂತರದ ಹನ್ನೆರಡನೆಯ ಅಂದರೆ, ನೂರಾ ನಲವತ್ನಾಲಕ್ಕು ವರ್ಷದ ನಂತರ ಬರುವುದಕ್ಕೆ ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ. ಸದ್ಯ ಮಹಾ ಕುಂಭಮೇಳ ಆಯೋಜನೆವಾಗಿರುವುದು ಪ್ರಯಾಗ್‌ರಾಜ್‌ನಲ್ಲಿ.

ಧಾರ್ಮಿಕ ಶ್ರೇಷ್ಠತೆ


ಕುಂಭಮೇಳಕ್ಕೆ ಸಂಬಂಧಿಸಿದ ಕಥೆಗಳು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅದೊಮ್ಮೆ ದೇವತೆಗಳು ಹಾಗೂ ರಾಕ್ಷಸರುಗಳು ಒಟ್ಟಿಗೆ ಸೇರಿ ಅಮೃತವನ್ನು ಪಡೆಯಲು ಸಾಗರ ಮಂಥ ಮಾಡಿದರು. ಆ ಸಾಗರ ಮಂಥನಗಳಲ್ಲಿ ಹದಿನಾಲಕ್ಕು ರತ್ನಗಳು ಹೊರ ಹೊಮ್ಮಿದವು. ಅವುಗಳಲ್ಲಿ ಲಕ್ಷ್ಮಿದೇವಿ, ಐರಾವತ ಆನೆ, ಅಪ್ಸರಸ್ಸ, ಕಲ್ಪವೃಕ್ಷ ಹಾಗೂ ಕಾಮಧೇನು ಹಸು ಪ್ರಮುಖವಾದವುಗಳು. ಕೊನೆಗೆ ಧನ್ವಂತರಿ ಅಮೃತದ ಕುಂಡದೊಂದಿಗೆ ಪ್ರತ್ಯಕ್ಷನಾದ. ಅಮೃತಕುಂಡ ಹೊರಬಂದ ಕೋಡಲೆ ಅದನ್ನು ಪಡೆಯಲು ದೇವತೆಗಳು ಹಾಗೂ ರಾಕ್ಷಸರ ಮಧ್ಯ ಹನ್ನೆರಡು ದಿನ ನಡೆದದ್ದು ಯುದ್ಧ. ಅವತ್ತು ಕಲಶದಿಂದ ಹೊರ ಬಿದ್ದ ಅಮೃತದ ಹನಿಗಳು ಬಿದ್ದದ್ದು ಭೂಮಿಯ ಮೇಲಿನ ಇವತ್ತಿನ ಉತ್ತರಪ್ರದೇಶದ ಹರಿದ್ವಾರ, ಪ್ರಯಾಗ್‌ರಾಜ್, ಮಹಾರಾಷ್ಟ್ರಾದ ನಾಸಿಕ್ ಮತ್ತು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ. ಅನಂತರ ಭಗವಾನ್ ವಿಷ್ಣುವು ಮೋಹಿನಿಯ ರೂಪವನ್ನು ತೆಗೆದುಕೊಂಡು ದೇವತೆಗಳನ್ನು ಅಮೃತ ಕುಡಿಯಲು ಮೋಸಗೊಳಿಸಿದನು. ಅವತ್ತು ಭೂಮಿಯ ಮೇಲೆ ಬಿದ್ದ ಅಮೃತದ ಹನಿಗಳಾದ ನಾಲ್ಕು ಸ್ಥಳಗಳಲ್ಲಿ ಕುಂಭಮೇಳಗಳನ್ನು ಜರಗುಸಲಾಗುತ್ತದೆ ಅನ್ನುವ ಪ್ರತೀತಿ ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಕುಂಭಮೇಳದಲ್ಲಿ ನಾಲ್ಕು ವಿಧಗಳು. ಅದರಲ್ಲಿ ನಾಲ್ಕು ವರ್ಷಕ್ಕೆ ನಡೆಯುವುದು ಕುಂಭಮೇಳ, ಆರು ವರ್ಷಕ್ಕೆ ನಡೆಯುವುದು ಅರ್ಧ ಕುಂಭಮೇಳ, ಹನ್ನೆರಡು ವರ್ಷಕ್ಕೆ ನಡೆಯುವುದು ಪೂರ್ಣ ಕುಂಭಮೇಳ ಮತ್ತು ನೂರಾನಲವತ್ತ ನಾಲ್ಕು ವರ್ಷಕ್ಕೆ ನಡೆಯುವುದು ಪೂರ್ಣ ಕುಂಭಮೇಳ. ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಪುಣ್ಯ ಸ್ನಾನದ ಹೇಸರಿನಲ್ಲಿ ನಡೆದ ಕಾಲ್ತುಳಿತದ ಪ್ರಕರಣದಲ್ಲಿ ಮೂವತ್ತು ಭಕ್ತರು ಮೃತ ಪಟ್ಟು, ಅರವತ್ತು ಜನರು ತೀವೃ ಗಾಯಗೊಂಡ ಘಟನೆಯ ನಂತರ ಮಹಾ ಕುಂಭಮೇಳದ ನಿರ್ವೈಹಣೆಯಲ್ಲಿ ಅಲ್ಲಿನ ಸರಕಾರ ಸಾಕಷ್ಟು ಬಿಗಿ ಕೃಮಗಳನ್ನು ಜರುಗಿಸಿದ್ದಾರೆ. ಕುಂಭಮೇಳದ ಪ್ರದೇಶವನ್ನು ವಾಹನ ರಹಿತ ವಲಯವನ್ನಾಗಿ ಘೋಷಿಸಿದೆ. ವಿಐಪಿ ಪಾಸ್‌ಗಳನ್ನು ರದ್ದು ಗೊಳಿಸಲಾಗಿದೆ. ಪ್ರಯಾಗ್‌ರಾಜ್ ಉದ್ದಕ್ಕು ಏಕ ಮುಖ ಸಂಚಾರಿ ಮಾರ್ಗವನ್ನಾಗಿಸಲಾಗಿದೆ. ಜನದಟ್ಟನೆಯನ್ನು ಕಡಿಮೆ ಮಾಡಲು ಪ್ರಯಾಗ್‌ರಾಜ್‌ನ ಜಿಲ್ಲೆಯ ಗಡಿಗಳಲ್ಲಿ ಗಂಟೆ ಗಟ್ಟಲೆ ಪ್ರವಾಸಿಗರ ವಾಹನಗಳನ್ನು ಅರ್ಧರ್ಧ ದಿನದ ಗಟ್ಟಲೆ ತಡೆದು ನಿಲ್ಲಿಸಲಾಗುತ್ತಿದೆ. ಹಿಂದೆ ೨೦೧೯ರ ಅರ್ಧ ಕುಂಭಮೇಳವನ್ನು ಅತ್ಯಂತ ಏಶಸ್ವಿಯಾಗಿ ನಿರ್ವೈಹಿಸಿದ್ದ ಐಎಎಸ್ ಅಧಿಕಾರಿಗಳಾದ ಆಶಿಶ್ ಗೋಯಲ್ ಮತ್ತು ಭಾನು ಗೋಸ್ವಾಮಿಯರನ್ನು ಕೂಡಲೆ ಕಾಲ್ತುಳಿತದ ಪ್ರಕರಣದ ನಂತರ ಆಯೋಜಿಸಲಾಗಿದೆ.

ಅಘೋರ ಜಗತ್ತು


ದೇಶದ ಬಹುತೇಕ ಹಿಂದೂ ಸಾಧುಗಳು ಇಲ್ಲಿಗೆ ತಮ್ಮ ಶಿಷ್ಯತ್ತೋಮರೊಂದಿಗೆ ಬಂದು ತಮಗೆ ಮೀಸಲಾದ ಸೆಕ್ಟರ್‌ಗಳಲ್ಲಿಯ ಡೇರಿಗಳಲ್ಲಿ ಸ್ಥಾಪಿತರಾಗಿದ್ದಾರೆ. ಅದರಲ್ಲಿ ನಾಗಾ ಸಾಧುಗಳು ಬೇರು ಬಿಟ್ಟವರಲ್ಲಿ ಅಟಲ್, ಮಹಾನಿರ್ವಾಣಿ, ನಿರಂಜನಿ, ಅಶ್ವನ್, ಜುನಾ ಅಖಾಡದವರು ಪ್ರಮುಖರು. ಇವರಿಗೆಲ್ಲ ಸೆಕ್ಟರ್ ನಂಬರ ಇಪ್ಪತ್ತು ಹಾಗೂ ಇಪ್ಪತ್ತೆರಡರಲ್ಲಿ ಡೇರಿಗಳನ್ನು ವದಗಿಸಲಾಗಿದೆ. ಸಂಗಂನ ಹತ್ತಿರದಿಂದ ಇವರ ಸೆಕ್ಟರ್ ಸುಮಾರು ಎರಡು ಕಿಲೋ ಮಿಟರ್ ದೂರದಲ್ಲಿದೆ. ಬಹುತೇಕ ನಾಗಾ ಸಾಧುಗಳು ಶಾಖಹಾರಿಗಳು. ಅದೆಲ್ಲರೂ ಗಾಂಜಾವನ್ನು ಏಕಾಗ್ರತೆಗಾಗಿ ಸೇವಿಸುತ್ತಾರೆ. ಅದ್ಯಾವ ಕಾರಣಕ್ಕು ಅಪ್ಪಿ ತಪ್ಪಿಯು ನಶೆಯು ಒಬ್ಬರಲ್ಲಿಯು ಕಾಣ ಬರುವುದಿಲ್ಲ. ಎಲ್ಲರೂ ಮೋಬೈಲ್ ವಾಪರಿಸುತ್ತಾರೆ, ಅತ್ಯಂತ ಮೀತ ಭಾಷಿಗಳು. ಅದೆಲ್ಲರಿಗೂ ಮಹಾ ಕುಂಭಮೇಳದ ವಸತಿಯ ವಿಷಯವಾಗಿ ಸಮಾಧಾನ ಇದ್ದಂತಿಲ್ಲ.
ಪ್ರಯಾಗ್‌ರಾಜ್‌ಗೆ ಬರುವ ಬಹುತೇಕರು ತೀವ್ರವಾಗಿ ಹುಡುಕುವುದು ಹಾಗೂ ತಡಕಾಡುವುದು ಈ ನಾಗಾ ಸಾಧುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು. ತೀರಾ ಹಣದ ವ್ಯಾಮೋಹ ಇಲ್ಲದ ನಾಗಾ ಸಾಧುಗಳ ಏದಿರು ಬರುವ ಭಕ್ತರು ನೀಡುವುದು ಹತ್ತು, ಇಪ್ಪತ್ತು ರೂಪಾಯಿಗಳನ್ನು ಮಾತ್ರ. ಆದರೆ ಎದುರಿಗಿದ್ದ ಭಕ್ತರಿಗೆ ಹಣೆಗೆ ಬೂದಿಯನ್ನು ಬಳಿಯುತ್ತಾರೆ. ಕೆಲವೇ ಕೆಲವರಿಗೆ ಮಾತ್ರ ಬೆನ್ನಿಗೆ ಗುದ್ದಿನ ರೀತಿ ಹೊಡೆದು ಭರ್ತಿ ಆಶಿರ್ವಾದವನ್ನು ಮಾಡಿ ಕಳಿಸುತ್ತಾರೆ. ಅದೆಲ್ಲ ನಾಗಾ ಸಾಧುಗಳಿಗೂ ಬರುವ ಭಕ್ತರ ಮೋಬೈಲ್‌ನಿಂದ ತೆಗೆಯುವ ಫೊಟೋ, ವಿಡಿಯೋಗಳ ಕಿರಿಕಿರಿಯು ಇನ್ನಿಲ್ಲದಂತೆ ಆಗುತ್ತಿದೆ. ಈ ವರದಿಗಾರ ಸೇರಿದಂತೆ ನಾಗಾ ಸಾಧುಗಳನ್ನು ಮಾತಾಡಲು ಮನ ಒಲಿಸಲು ಹೋಗಿ ಬೆನ್ನಿಗೆ ನಾಲ್ಕು ಬಾರಿಸಿಸಿ ಕೊಂಡು ಬಂದವರಲ್ಲಿ ಒಬ್ಬೊರು. ತಮಾಷೆ ಅಂದರೆ ಜೊತೆಗಿದ್ದವರು ಹೇಳುವುದು ನಾಗಾ ಸಾಧುಗಳಿಂದ ಹೊಡೆಸಿಗೊಳ್ಳುವುದು ಸಹ ಸಾರ್ಥಕತೆ ಅನ್ನುವುದನ್ನು.

ವ್ಯವಸ್ಥಿತ ರೂಪುರೇಷೆ


ಇಲ್ಲಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಹುತೇಕರು ಬರುವ ಪ್ರವಾಸಿಗರಿಗೆ ಸಾಕಷ್ಟು ಕಾಳಜಿಯನ್ನು ವಹಿಸಿ ವಾಹನ ಪಾರ್ಕಿಂಗ್‌ನಿಂದ ಹಿಡಿದು, ಸೂಕ್ತ ವಸತಿ, ಕುಡಿಯುವ ನೀರು, ಭರ್ತಿ ಊಟದ ವ್ಯವಸ್ಥೆ ಮಾಡಿದ್ದಾರೆ. ವೆಬ್‌ಸೈಟ್‌ಗಳ ಮುಖಾಂತರ ವಸತಿಗಾಗಿ ಸಾಕಷ್ಟು ಅಧಿಕಾರಿಗಳು ವ್ಯವಸ್ಥೆಯನ್ನು ಮಾಡಲು ನಿಮಗಾಗಿ ಅಣಿಯಾಗುತ್ತಿದ್ದಾರೆ. ಅದೆಷ್ಟೆ ಕೋಟಿಗಟ್ಟಲೆ ಜನರು ಬಂದು ಪ್ರಯಾಗ್‌ರಾಜ್‌ನಲ್ಲಿ ನೆರೆದರು ಸಣ್ಣ ತೊಂದರೆಯನ್ನು ಅನುಭವಿಸದೆ ಪುಣ್ಯ ಸ್ನಾನವನ್ನು ಮಾಡಿ ಆದಷ್ಟು ಬೇಗ ಜಾಗೆಯನ್ನು ಖಾಲಿ ಮಾಡಬೇಕು. ಆದಷ್ಟು ಅಲ್ಲಿ ರಾತ್ರಿ ಕಳೆಯುವುದು ಬೇಡ. ಇದರಿಂದ ದಂಡಿ ದಂಡಿಯಾಗಿ ದಿನಂಪ್ರತಿ ಕೋಟಿಗಟ್ಟಲೆ ಬರುತ್ತಿರುವ ಇನ್ನುಳಿದ ಪ್ರವಾಸಿಗರಿಗೂ ಅನಕೂಲ ಮಾಡಿದಂಗೆ ಅನ್ನುವ ಅರಿವು ಇದ್ದರಷ್ಟೆ ಸಾಕು.
ನಿರ್ಮಿಸಿದ ತಾತ್ಕಾಲಿಕ ಎರಡು ಕಿಲೋ ಮಿಟರ್‌ನ ಸೇತುವೆಯನ್ನು ದಾಟಿ ತ್ರಿವೇಣಿ ಸಂಗಮ್‌ಗೆ ಸ್ನಾನ ಮಾಡಲು ಹೊರಟವರು ಎಂಟು, ಹತ್ತು ಕಿಲೋ ಮಿಟರ್ ನಡೆಯ ಬೇಕಾಗುತ್ತದೆ. ಇನ್ನು ಒಳಗಡೆ ಅದೃಷ್ಟ ಇದ್ದರೆ ಬ್ಯಾಟರಿ ಚಾಲಿತ ಆಟೋಗಳು, ಬೈಕ್ ಅಲ್ಲಿ ಥ್ರಿಬಲ್ ರೈಡಿಂಗ್ ಕರೆದುಕೊಂಡು ಹೊಗಲು ಸಾರಿಗೆಯ ಅವಕಾಶವು ಇದೆ. ಅಲ್ಲಿ ನೆರೆದವರೆಲ್ಲ ಅಕ್ಷರಶಃ ಪ್ರವಾಸಿಗರು ಅನ್ನುವ ಕಾರಣಕ್ಕೆ ಎದುರಿಗೆ ಇರುವ ಪೊಲೀಸರಿಗೆ ತಮಗೆ ಬೇಕಾದ ಮಾಹಿತಿಯನ್ನು ಹೆಕ್ಕ ಬಹುದು. ಅದೆಲ್ಲರೂ ಅತ್ಯಂತ ವಿನಮೃತೆಯಿಂದಲೆ ಸೂಕ್ತ ಮಾಹಿತಿಯನ್ನು ನೀಡುತ್ತಾರೆ.
ಪುಣ್ಯಭೂಮಿಯಲ್ಲೋರ್ವ ಕನ್ನಡಿಗ


ಉತ್ತರಪ್ರದೇಶದ ಸರಕಾರ ಬೆಂಗಳೂರು ಮೂಲದ ಹಾಗೂ ಉತ್ತರಪ್ರದೇಶ ಕೇಡರ್‌ನ ೨೦೦೯ರ ಬ್ಯಾಚ್‌ನ ಐಎಎಸ್ ಅಧಿಕಾರಿ ವಿಜಯ ಕಿರಣ ಆನಂದರನ್ನು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದ ಮುಖ್ಯಸ್ಥರನ್ನಾಗಿ ಮಾಡಿದೆ. ಮೂಲತಃ ಚಾರ್ಟರ್‍ಡ್ ಅಕೌಂಟೆಂಟ್ ಆಗಿದ್ದ ವಿಜಯ ಕಿರಣ ಆನಂದ ಐಎಎಸ್ ತೇರ್ಗಡೆಯ ನಂತರ ಉತ್ತರ ಪ್ರದೇಶದ ಬಾಗಪಥದ ಎಸಿಯಾಗಿ ನಂತರದ ದಿನಗಳಲ್ಲಿ ಸಾಕಷ್ಟು ಜಿಲ್ಲೆಗಳಲ್ಲಿ ಯಶಸ್ವಿ ಜಿಲ್ಲಾಧಿಕಾರಿಯಾಗಿ ಒಳ್ಳೆಯ ಹೆಸರು ಗಳಿಸಿದ್ದರು. ೨೦೧೯ರ ಅರ್ಧ ಕುಂಭಮೇಳದಲ್ಲಿ ಅತ್ಯತ್ತಮ ಕೇಲಸಗಳನ್ನು ಮಾಡಿದ್ದರ ಫಲವಾಗಿ ಅಲ್ಲಿಯ ಮುಖ್ಯಮಂತ್ರಿ ಯೋಗಿ ಅವರು ಅತ್ಯಂತ ಪ್ರೀತಿಯಿಂದ ಹಾಲಿ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದ ಸಂಪೂರ್ಣ ಜವಾಬ್ದಾರಿಯನ್ನು ವಿಜಯ ಕಿರಣ್ ಆನಂದರ ಹೆಗಲಿಗೆ ವಹಿಸಿದ್ದಾರೆ.
ಪ್ರಯಾಗರಾಜ್‌ನ ಮೆನೀಯಾ ಶುರು ಆದಾಗಿನಿಂದ ಅಲ್ಲಿ ಪುಣ್ಯ ಸ್ನಾನವನ್ನು ಮಾಡಿ ಬರುವವರೆಲ್ಲ ವಾರಣಾಸಿಯ ಕಾಶಿ ವಿಶ್ವನಾಥನ ದೇವಸ್ಥಾನ ಹಾಗೂ ಅಯೋಧ್ಯಾನ ಬಾಲರಾಮನ ಭವ್ಯ ಮಂದಿರಕ್ಕೆ ಭೇಟಿ ಕೊಟ್ಟು ಬರುತ್ತಾರೆ. ಅಸಲಿಗೆ ಪ್ರಯಾಗ್‌ರಾಜ್‌ಗಿಂತಲೂ ಹೆಚ್ಚಿಗೆ ಕೋಟಿಗಟ್ಟಲೆ ಜನಸಂದಣಿ ದಿನನಿತ್ಯ ನೆರೆಯುತ್ತಿದ್ದಾರೆ. ಕನಿಷ್ಠ ಅಂದರೂ ಕೋಟಿಗಟ್ಟಲೆ ಜನರು ಪ್ರವಾಸಿಗರು ಹರಿದು ಬರುತ್ತಿದ್ದಾರೆ. ವಾರಣಾಸಿಯಲ್ಲಿ ಜಮಖಂಡಿ ತಾಲೂಕಿನ ಮೂಲದ ಉತ್ತರಪ್ರದೇಶ ರಾಜ್ಯದ ಐಪಿಎಸ್ ಅಧಿಕಾರಿ ಚನ್ನಪ್ಪ ಶಿವಶಿಂಪಿ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿದ್ದಾರೆ. ಹೀಗೆ ಅತ್ಯಂತ ವ್ಯವಸ್ಥಿತವಾಗಿ ಎಲ್ಲವನ್ನೂ ನಿಭಾಯಿಸುವ ಮೂಲಕ ಕುಂಭ ಮೇಳ ಯಶ ಕಂಡಿದೆ.

Tags: #aghora#economy#economyofkumbhmela2025#kumbh2025#kumbhmel#prayagraj#travelling

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
mahashivrathri special: ಭಾರತದ ಪ್ರಸಿದ್ಧ ಶಿವನ ಸನ್ನಿಧಾನಗಳು!

mahashivrathri special: ಭಾರತದ ಪ್ರಸಿದ್ಧ ಶಿವನ ಸನ್ನಿಧಾನಗಳು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.