ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

effects of global warming: ಜಗತ್ತಿನ ಮುಂದೀಗ ಜಲ ಪ್ರಳಯದ ಕಂಟಕ!

Majja Webdeskby Majja Webdesk
13/03/2025
in Majja Special
Reading Time: 1 min read
effects of global warming: ಜಗತ್ತಿನ ಮುಂದೀಗ ಜಲ ಪ್ರಳಯದ ಕಂಟಕ!

-ಜಾಗತಿಕ ತಾಪಮಾನ ಏರಿಕೆಯ ಭೀಕರ ಪರಿಣಾಮ!

-ಗಿಡ ನೆಡದಿದ್ದರೆ ಗಂಡಾಂತರ ಗ್ಯಾರಂಟಿ!

 

ದೂರದಲ್ಲೆಲ್ಲೋ ಹವಾಮಾನ ವೈಪರೀತ್ಯವಾಗಿ, ಅದರ ಫಲವಾಗಿ ಘೋರ ದುರಂತಗಳಾದರೆ ನಮ್ಮ ಪಾಲಿಗದು ಸಿನಿಮಾ ಕಥನದಂತೆ ಭಾಸವಾಗೋದೇ ಹೆಚ್ಚು. ಕಳೆದ ಮಳೆಗಾಲವನ್ನೇ ತೆಗೆದುಕೊಳ್ಳಿ; ಕೇರಳದ ವಯನಾಡಿನಲ್ಲಿ ಭೀಕರವಾದ ಭೂ ಕುಸಿತದಿಂದಾಗಿ ಹಳ್ಳಿಗಳೆಲ್ಲ ಜಲ ಸಮಾಧಿಯಾದವು. ಸಾವಿರಾರು ಮಂದಿ ಸಣ್ಣದೊಂದು ಚೀತ್ಕಾರ ಹೊರಡಿಸಲೂ ಆಗದಂತೆ ಸತ್ತು ಹೋಗಿದ್ದರು. ಆ ದೃಷ್ಯಗಳನ್ನು ಕಂಡು ವಿದೇಶದ ಮಂದಿಯೂ ಬೆಚ್ಚಿ ಬಿದ್ದಿದ್ದರು. ಪುಣ್ಯಕ್ಕೆ ಅಂಥಾದ್ದೊಂದು ಭಯಾನಕ ಭೂ ಕುಸಿತವಾಗಲು ಅರಣ್ಯ ನಾಶವೇ ಕಾರಣ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ಅಳಿದುಳಿದ ಅರಣ್ಯ ರಕ್ಷಿಸಿಕೊಳ್ಳುವ ಸಲುವಾಗಿ ಸರ್ಕಾರಗಳೂ ಕೂಡಾ ತರಾತುರಿ ತೋರಿಸಿದ್ದವು. ಒಂದಷ್ಟು ಸಮಯ ಪರಿಸರ ಸಂರಕ್ಷಣೆಯ ಬಗ್ಗೆ ಪುಂಖಾನುಪುಂಖವಾಗಿ ಚರ್ಚೆಗಳು ನಡೆದಿದ್ದವು. ಇಂಥಾ ಭಯದ ವಾತಾವರಣದಲ್ಲಿಯೇ ಮಳೆಗಾಲವೊಂದು ಮಗುಚಿಕೊಂಡು ಬೇಸಿಗೆ ಕಣ್ತೆರೆಯುತ್ತಲೇ ಎಲ್ಲ ಕಾಳಜಿಗಳೂ ಕಣ್ಮುಚ್ಚಿವೆ!


ಅಂಥಾದ್ದದೊಂದು ಕಾಳಜಿ, ಪರಿಸರ ಪ್ರೇಮ ಮತ್ತೊಮ್ಮೆ ಜೀವ ಪಡೆಯಬೇಕಂದ್ರೆ ಮತ್ತೊಂದು ಮಳೆಗಾಲ ಬರಬೇಕು. ಅದರ ನಡುವಲ್ಲೊಂದು ದುರಂತ ಸಂಭವಿಸಬೇಕು. ನಮಗೆಲ್ಲ ಆವರಿಸಿಕೊಂಡಿರುವ ಇಂಥಾ ಜಾಢ್ಯವೇ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ ಅನ್ನೋದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಕಠೋರ ಸತ್ಯ. ಈವತ್ತಿಗೆ ಜಾಗತಿಕ ತಾಪ ಮಾನ ಏರಿಕೆಯ ಬಗ್ಗೆ ವಿಶ್ವ ಮಟ್ಟದಲ್ಲಿ ಭಯಾನಕ ಚರ್ಚೆಗಳು ನಡೆರರಯುತ್ತಿವೆ. ಪರಿಸರ ತಜ್ಞರು ಅದರ ಭೀಕರ ಪರಿಣಾಮಗಳ ಬಗ್ಗೆ ಸಾರಿ ಸಾರಿ ಹೇಳುತ್ತಲೇ ಬಂದಿದ್ದಾರೆ. ಅದೇನು ಕಾಗಕ್ಕ ಗುಬ್ಬಕ್ಕನ ಕಥೆಯಲ್ಲ. ಈ ಭೂಮಿ ಜಾಗತಿಕ ತಾಪಮಾನದಿಂದ ಅದೆಷ್ಟು ಬಳಲಿದೆ, ಅದರ ತುಂಬೆಲಲ್ ಎಂತೆಂಥಾ ಆಘಾತಕರ ಪಲ್ಲಟಗಳಾಗಿವೆ, ಒಟ್ಟಾರೆ ವಾತಾವರಣ ಹೇಗೆಲ್ಲ ಪ್ರತಿಕೂಲವಾಗಿ ಪ್ರತಿಕ್ರಿಯಿಸಲಾರಂಭಿಸಿದೆ… ಹೀಗೆ ಎಲ್ಲವನ್ನೂ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ಜಾಹೀರು ಮಾಡಿದ್ದಾರೆ. ಆದರೂ ಕೂಡಾ ಈ ಜಗತ್ತಿನ ಮನುಷ್ಯ ಜೀವಿಗಳಿಗೆ ಆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಇದ್ದರೂ ಕೂಡಾ ಅದು ಋಉತುಮಾನಕ್ಕೆ ತಕ್ಕುದಾಗಿ ಬದಲಾಗುತ್ತದೆ!

ತಾಪಮಾನ ಏರಿಕೆ ಅಂದ್ರೆ…


ಇಡೀ ವಿಶ್ವ ಈವತ್ತಿಗೆ ಅನೇಕ ಪ್ರಾಕೃತಿಕ ವಿಪತ್ತುಗಳನ್ನು ಎದುರಿಸಬೇಕಾಗಿ ಬಂದಿದೆ. ಅದೆಲ್ಲದರ ನಡುವೆ ಅತಿ ದೊಡ್ಡ ಸಮಸ್ಯೆಯಾಗಿ ಜಾಗತಿಕ ತಾಪಮಾನ ಏರಿಕೆ ಗುರುತಿಸಿಕೊಂಡಿದೆ. ಹಸಿರು ಮನೆ ಅನಿಲಗಳಿಂದ ಪ್ರಧಾನವಾಗಿ ಕಾರ್ಬನ್ ಡೈ ಆಕ್ಸೈಡಿನ ಪ್ರಮಾಣ ಹೆಚ್ಚಿದಂತೆಲ್ಲ ಭೂಮಿಯ ವಾತಾವರಣದಲ್ಲಿ ಉಷ್ಣತೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿಕೊಳ್ಳುತ್ತೆ. ಈ ಅನಿಲಕ್ಕೆ ಬೇಕಾದಷ್ಟು ಶಕ್ತಿ ಇದೆ. ಇದರ ಮೇಲೆ ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಕಾಪಿಟ್ಟುಕೊಳ್ಳುವ ಶಕ್ತಿಯೂ ಅದಕ್ಕಿದೆ. ಈ ವಿದ್ಯಮಾನಕ್ಕೆ ತಜ್ಞರು ಹಸಿರುಮನೆ ಪರಿಣಾಮ ಎನ್ನುತ್ತಾರೆ. ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್, ಮಿಥೇನ್, ನೈಟ್ರೋಜನ್ ಮುಂತಾದ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸುತ್ತವೆ. ಭೂಮಿಯ ಶಾಖ ಬೇರೆಲ್ಲೂ ಚದುರದಂತೆ ತಡೆಯುವ ಮೂಲಕ ಭೂಮಿಯ ಮೇಲ್ಮೈ ತಾಪವನ್ನು ಹೆಚ್ಚಿಸಲಾರಂಭಿಸುತ್ತೆ. ಈ ಪ್ರಕ್ರಿಯೆಗೆ ಜಾಗತಿಕ ತಾಪಮಾನ ಏರಿಕೆ ಅಂತ ಹೆಸರಿಸಲಾಗಿದೆ!
ಹಾಗಾದರೆ, ಹೀಗೆ ಜಾಗತಿಕ ತಾಪಮಾನ ಹೆಚ್ಚಳವಾಗೋದಕ್ಕೆ ಕಾರಣವೇನು? ಅಂತೊಂದು ಪ್ರಶ್ನೆ ಮೂಡಿಕೊಳ್ಳೋದು ಸಹಜ. ಹವಾಮಾನ ಬದಲಾವಣೆಯ ಕುರಿತಾದ ಅಧ್ಯಯನಗಳ ಪ್ರಕಾರ ಇಂಧನಗಳ ಅತಿಯಾದ ಬಳಕೆ ಹಾಗೂ ಅರಣ್ಯನಾಶವೇ ಜಾಗತಿಕ ತಾಪಮಾನ ಏರಿಕೆಯ ಮೂಲ ಬಿಂದು. ಮಾನವ ಚಟುವಟಿಕೆಗಳಿಂದಾಗಿಯೇ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳ ಸಂಭವಿಸಿದೆ. ಇಪ್ಪತ್ತನೇ ಶತಮಾನದ ನಡುಗಾಲದ ನಂತರದಲ್ಲಿ ಈ ಭೂಮಿ ಮೇಲೆ ನಡೆಯಬಾರದ್ದೆಲ್ಲ ನಡೆಯುತ್ತಾ ಬಂದಿದೆ. ಭೂಮಿಯ ಸರಾಸರಿ ಉಷ್ಣತೆಯು ಕಳೆದ ಶತಮಾನದಲ್ಲಿ ಗಣನೀಯವಾಗಿ ಹೆಚ್ಚಿದೆ. ಕಳೆದ ಶತಮಾನದಲ್ಲಿಯೇ ಅದರ ಪರಿಣಾಮಗಳೂ ಕಾಣಿಸಿವೆ. ಇಡೀ ವಿಶ್ವದ ಸಮುದ್ರ ಮಟ್ಟ ಗಣನೀಯವಾಗಿಯೇ ಏರಿಕೆ ಕಂಡಿದೆ. ನಮ್ಮೆಲ್ಲರ ದುರಾಸೆಯಿಂದಾಗಿ ಅಗತ್ಯಕ್ಕಿಂತಲೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ವಾತಾವರಣದೊಂದಿಗೆ ಸೇರಿಕೊಂಡಿದೆ.

ಭಯಾನಕ ಬದಲಾವಣೆ


ಕಳೆದ ಶತಮಾನದ ಆರಂಭ ಕಾಲದಲ್ಲಿ ಜಾಗತಿಕ ತಾಪಮಾನ ಏರಿಕೆಯ ಸಣ್ಣ ಸುಳಿವೂ ಇರಲಿಲ್ಲ. ಆ ನಂತರದಲ್ಲಿ ಜಾಗತೀಕರಣ ನಗರೀಕರಣಗಳಿಂದಾಗಿ ವಿಶ್ವಾದ್ಯಂತ ವ್ಯಾಪಕವಾಗಿ ಅರಣ್ಯ ನಾಶವಾಗಿದೆ. ಸೂರ್ಯನ ನೈಸರ್ಗಿಕ ವಾಲುವಿಕೆ ಅನ್ನೋದು ಸಹಜವಾಗಿಯೇ ಸೂರ್ಯನ ಬೆಳಕಿನ ತೀವ್ರತೆಗೆ ಕಾರಣವಾಗುತ್ತದೆ. ಅಂಥಾ ತೀವ್ರಥರವಾದ ಬಿಸಿಲು ಭೂಮಿಗೆ ಹತ್ತಿರವಾಗುತ್ತಾ ಸಾಗುತ್ತದೆ. ಇದರಿಂದಾಗಿ ಭೂಮಿಯ ಉಷ್ಣತೆ ಹೆಚ್ಚುತ್ತದೆಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇನ್ನುಳಿದಂತೆ ಹಸಿರುಮನೆ ಅನಿಲಗಳು ಜಾಗತಿಕ ತಾಪಮಾನ ಏರಿಕೆಗೆ ದೊಡ್ಡ ಮಟ್ಟದಲ್ಲಿಯೇ ಕಾರಣವಾಗಿದೆ. ಸೌರ ಶಾಖ ಕಿರಣಗಳನ್ನು ಭೂಮಿಯ ಮೇಲ್ಮೈಯಿಂದ ತಪ್ಪಿಸಿಕೊಳ್ಳದಂತೆ ತಡೆ ಹಿಡಿಯುತ್ತದೆ. ಭೂಮಿಯ ತಾಪಮಾನ ಹೆಚ್ಚಳಕ್ಕೆ ಪ್ಗರಧಾನ ಕಾರಣವಾಗಿ ಆ ಪಲ್ಲಟವೇ ಗುರುತಿಸಿಕೊಂಡಿದೆ. ಇನ್ನುಳಿದಂತೆ ಜ್ವಾಲಾಮುಖಿ ಸ್ಫೋಟಗಳ ಕೊಡುಗೆಯೂ ಇದರ ಹಿಂದಿರೋದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಇಂಥಾ ಸ್ಫೋಟಗಳು ಜಗತ್ತಿನ ನಾನಾ ಭಾಗಗಳಲ್ಲಿ ಆಗಾಗ ಘಟಿಸುತ್ತಿರುತ್ತದೆ. ಇದರ ಪರಿಣಾಮ ಮಾತ್ರ ನಿಜಕ್ಕೂ ಆಘಾತಕರ ರೀತಿಯಲ್ಲಿರುತ್ತದೆ. ಜ್ವಾಲಾಮುಖಿ ಸ್ಫೋಟ ವಾತಾವರಣಕ್ಕೆ ಇಂಗಾಲ ಮತ್ತು ಯಥೇಚ್ಛವಾಗಿ ಬೂಡಿಯನ್ನು ಪಸರಿಸೋದರಿಂದ ಆ ಮೂಲಕ ಜಾಗತಿಕ ತಾಪಮಾನ ಮತ್ತಷ್ಟು ಏರಿಕೊಳ್ಳುತ್ತದೆ.
ಮಾನವನ ಕಾರಣದಿಂದಲೇ ಒಂದಿಷ್ಟು ಅನಿಲಗಳ ತೀವ್ರತೆ ಇದೀಗ ಹೆಚ್ಚಿಕೊಂಡಿದೆ. ಇಂಗಾಲಕ್ಕಿಂತ ಹತ್ತಾರು ಪಟ್ಟು ಶಾಖವನ್ನು ತಡೆ ಹಿಡಿಯುವ ಶಕ್ತಿ ಹೊಂದಿರುವ ಅನಿಲ ಮಿಥೇನ್. ಮೀಥೇನ್ ಎಂಬುದು ಭೂಕುಸಿತವೂ ಸೇರಿದಂತೆ ಅನೇಕ ವಿಪತ್ತುಗಳಿಂದಲೇ ಸೃಷ್ಟಿಯಾಗುತ್ತೆ. ಇದೆಲ್ಲದರ ಹಿಂದೆ ಮತ್ತದೇ ಮಾನವನ ನೆರಳಿರೋದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈವತ್ತಿಗೆ ಇಡೀ ಜಗತ್ತಿನ ಬಹುತೇಕ ಮಂದಿ ಆಧುನಿಕತೆಯ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ. ಇದರಿಂದಾಗಿ ಭೂಮಿಯ ಮೇಲಿನ ವಾತಾವರಣ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಎಲ್ಲೆಂದರಲ್ಲಿ ಕೈಗಾರಿಕಾ ಸ್ಥಾವರಗಳು, ಕಾರ್ಖಾನೆಗಳು, ಅದಕ್ಕಾಗಿ ನಡೆಯುತ್ತಾ ಬಂದಿರುವಂಥಾ ವ್ಯಾಪಕವಾದ ಅರಣ್ಯ ಹನನಗಳು ಈ ಭೂಮಿಯನ್ನು ಕೊತ ಕೊತನೆ ಕುದಿಯುವಂತೆ ಮಾಡಿ ಬಿಟ್ಟಿದೆ.

ಅರಣ್ಯ ಹನನ


ಈವತ್ತಿಗೆ ವಿಶ್ವದ ಮಟ್ಟಿಗೆ ಜಾಗತಿಕ ತಾಪಮಾನ ಏರಿಕೆ ಎಂಬುದು ಅಕ್ಷರಶಃ ಕಂಟಕವಾಗಿ ಬಿಟ್ಟಿದೆ. ಹಾಗಾದರೆ, ಈ ಜಾಗತಿಕ ತಾಪಮಾನ ಏರಿಕೆಯಾಗಲು ಪ್ರಧಾನವಾದ ಕಾರಣವೇನು? ಈ ಪ್ರಶ್ನೆ ಮುಂದಿಟ್ಟರೆ ತಜ್ಞರು ಯಾವ ಗೊಂದಲಕ್ಕೂ ಎಡೆಯಿಲ್ಲದಂತೆ ಪರಿಸರ ನಾಶ ಎಂಬ ಉತ್ತರ ಕೊಡುತ್ತಾರೆ. ಇಡೀ ವಿಶ್ವದ ಮಂದಿ ಸೂರಿಗಾಗಿ, ಸರಾಗವಾಗಿ ಬದುಕೋದಕ್ಕಾಗಿ, ಕಾಸಿನಾಸೆಗಾಗಿ ತಮ್ಮ ಸುತ್ತಲ ಅರಣ್ಯವನ್ನು ನಿರಂತರವಾಗಿ ಬಲಿ ಕೊಡುತ್ತಿದ್ದಾರೆ. ಹೀಗೆ ನಿರಂತರವಾಗಿ ಅರಣ್ಯನಾಶ ಮಾಡಿದರೆ ಸಹಜವಾಗಿಯೇ ಇಂಗಾಲದ ಡೈಆಕ್ಸೈಡ್ ಪ್ರಮಾಣ ಯಥೇಚ್ಛವಾಗಿ ವಾತಾವರಣಕ್ಕೆ ಸೇರಿಕೊಳ್ಳುತ್ತದೆ. ಮರಗಳು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿ ಆಮ್ಲಜನP ಬಿಡುಗಡೆಗೊಳಿಸುವ ಮೂಲಕ ನಮ್ಮೆಲ್ಲರಿಗೂ ಬದುಕಲು ಅನುವು ಮಾಡಿ ಕೊಟ್ಟಿವೆ. ಆ ಕೃತಜ್ಞತೆ ಇಲ್ಲದ ಮನುಷ್ಯರು ಮರಗಳಿಂದ ತಮಗೇನೂ ಉಪಯೋಗ ಇಲ್ಲ ಎಂಬಂತೆ ವ್ಯಾಪಕವಾಗಿ ಅರಣ್ಯ ನಾಶ ಮಾಡಿದ್ದಾರೆ. ಹಾಗಿದ್ದ ಮೇಲೆ ವಾತಾವರಣದಲ್ಲಿ ತಾಪಮಾನ ಹೆಚ್ಚದಿರಲು ಸಾಧ್ಯವೇ?
ಇಂಥಾ ಜಾಗತಿಕ ತಾಪಮಾನ ತೀವ್ರವಾಗಿ ಏರಿಕೊಂಡರೆ ಈ ಭೂಮಿ ಮೇಲೆ ನಾನಾ ತತೆರನಾದ ಪ್ರತಿಕೂಲ ಪರಿಣಾಮಗಳಾಗುತ್ತವೆ. ಧ್ರುವ ಪ್ರದೆಶದ ಮಂಜುಗಡ್ಡೆ ಕರಗೋದು ಜಾಗತಿಕ ತಾಪಮಾನ ಏರಿಕೆಯ ಪ್ರಥಮ ಪರಿಣಾಮ. ಹೀಗೆ ಮಂಜುಗಡ್ಡೆಗಳು ಕರಗುಕರಗೋದರಿಂದಾಗಿ ಸಮುದ್ರ ಮಟ್ಟದಲ್ಲಿ ನಗಣನೀಯ ಏರಿಕೆ ಉಂಟಾಗುತ್ತದೆ. ಆಯಾ ಪ್ರದೇಶಗಳಲ್ಲಿ ಬೃಹತ್ ಹಿಮ ನದಿಗಳಿರುತ್ತವೆ. ಅಂಥಾ ಹಿಮ ನದಿಗಳೆಲ್ಲ ಮಕರಗಿ ನೀರಾಗಿ ಹರಿಯಲಾರಂಭಿಸಿದಾಗ ಸಹಜವಾಗಿಯೇ ಸಮುದ್ರ ಮಟ್ಟದಲ್ಲಿ ನಏರಿಕೆ ಕಂಡು ಬರುತ್ತದೆ. ಹೀಗೆ ಸಮುದ್ರ ಮಟ್ಟದಲ್ಲಿ ಹೆಚ್ಚಳ ಕಂಡು ಬಂದರೆ ಅರಣ್ಯ ನಾಶ ಮಾಡಿದ ಮನುಷ್ಯನ ಮೇಲೇ ಪ್ರಕೃತಿ ಪ್ರಹಾರ ನಡೆಸುತ್ತೆ. ಈ ಜಗತ್ತಿನಲ್ಲಿರುವ ಅನೇಕ ದ್ವೀಪಗಳು ಹಾಗೂ ಸಮುದ್ರ ತೀರದ ನಗರಗಳು ಮುಳುಗಡೆಯಾಗಿ ಭೂಮಿಯ ರೂಪುರೇಷೆಯೇ ಬದಲಾಗುವ ಸಾಧ್ಯತೆಗಳಿದ್ದಾವೆ.


ಇದರಿಂದಾಗಿ ಕೋಟ್ಯಂತರ ಪ್ರಬೇಧಗಳ ಸಸ್ಯ ಮತ್ತು ಜೀವ ಸಂಪತ್ತು ನಾಶವಾಗುತ್ತದೆ. ಅನೇಕಾನೇಕ ಪ್ರಾಣಿಗಳು ಸರ್ವನಾಶವಾಗುತ್ತವೆ. ಪರಿಣಾಮವೆಂಬುದು ಅಲ್ಲಿಗೆ ಮಾತ್ರವೇ ಸೀಮಿತವಲ್ಲ. ಜಾಗತಿಕ ತಾಪಮಾನದಿಂದ ಅಕಾಲಿಕವಾಗಿ ಭೀಕರ ಚಂಡಮಾರುತಗಳು ಸೃಷ್ಟಿಯಾಗುತ್ತವೆ. ಇಂಥಾ ಸಚಂಡ ಮಾರುತಗಳು ಊರಿಗೂರನ್ನೇ ಬಳಿದು ಕೊಂಡು ಹೋಗುತ್ತವೆ. ಇದರಿಂದಾಗಿ ಆಯಾ ಭಾಗದ ಆರ್ಥಿಕ ವ್ಯವಸ್ಥೆಯ ಬುಡಮೇಲಾಗುತ್ತದೆ. ಇಂಥಾ ಅನಾಹುತಗಳನ್ನು ತಡೆಯ ಬೇಕೆಂದರೆ ಈ ಜಗತ್ತಿನ ನಾನಾ ದೇಶಗಳ ಸರ್ಕಾರಗಳು ಪ್ರಕೃತಿ ಸಂರಕ್ಷಣೆಯನ್ನೂ ಕೂಡಾ ಮೊದಲ ಆಡಳಿತಾತ್ಮಕ ಆಧ್ಯತೆಯಾಗಿಸಿಕೊಳ್ಳಬೇಕಿದೆ. ಕಾನೂನು ಕಟ್ಟಳೆಗಳ್ಲ್ಲಿಯೇ ಅದಕ್ಕೆ ಪೂರಕವಾದ ಕಾನೂನು ಕಟ್ಟಳೆಗಳನ್ನು ಜಾರಿಯಾಗಿಸಬೇಕಿದೆ. ಇಡೀ ವಿಶ್ವದ ಮಂದಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಕೆಲಸಗಳಿಂದ ಒಂದಷ್ಟು ಕಾಲವಾದರೂ ದೂರವಿದ್ದರೆ ಖಂಡಿತವಾಗಿಯೂ ಆಗೋ ಅನಾಹುತಗಳನ್ನು ಒಂದಷ್ಟಾದರೂ ತಡೆಯಬಹುದು. ನಾವು ಬಳಸೋ ವಾಹನಿಗಳಿಂದ ವಿಷಕಾರಿ ಅನಿಲ ಬಿಡುಗಡೆಯಾಗುತ್ತದೆ. ಈವತ್ತಿಗೆ ಇಡೀ ಜಗತ್ತಿನಲ್ಲಿ ವಾತಾವರಣ ಕಲುಷಿತಗೊಂಡಿರೋದರ ಹಿಂದೆ ವಾಹನದಟ್ಟಣೆಯದ್ದೇ ಸಿಂಹ ಪಾಲಿದೆ. ಈಗಂತೂ ಒಂದು ಮನೆಗೆ ಏಳೆಂಟು ವಾಹನಗಳು ಖಾಯಂಬ ಎಂಬಂತಾಗಿದೆ. ಪ್ರತಿಷ್ಠೆ ಬದಿಗೊತ್ತಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ನೆಚ್ಚಿಕೊಳ್ಳುವಂತಾದರೆ ಎಲ್ಲವೂ ಹತೋಟಿಗೆ ಸಿಗುತ್ತದೆ.
ಈಗಿನ ವಾತಾವರಣದಲ್ಲಿ ಹೇಳೋದಾದರೆ ಭೂಮಿಯ ಒಟಾರೆ ಸ್ಥಿತಿಗತಿ ಸಂಪೂರ್ಣವಾಗಿಯೇ ಬದಲಾಗಿದೆ. ನಿಖರವಾಗಿ ಹೇಳಬೇಕೆಂದರೆ ಮನುಷ್ಯ ಸಂಕುಲದ ಹೇಸಿಗೆ ಕೆಲಸಗಳಿಂದಾಗಿ ಭೂಮಿಯ ಆರೋಗ್ಯ ಕೈ ಕೊಟ್ಟಿದೆ. ಈ ಕಾರಣದಿಂದಾಗಿ ನಮ್ಮ ಸುತ್ತಲೂ ಜಾಗತಿಕ ತಾಪಮಾನ ಏರಿಕೆ ಮತ್ತು ಅದರಿಂದಾಗುವ ಅಪಾಯಗಳ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸವ ಕೆಲಸಗಳಾಗಬೇಕಿವೆ. ನಾವು ಮಾಡೋ ಕೆಲಸದಿಂದೇನು ಜಾಗತಿಕ ತಾಪಮಾನ ಇಳಿದು ಹೋಗುತ್ತಾ ಎಂಬರ್ಥದಲ್ಲಿ ದಾಢಸಿ ಸ್ವಭಾವದ ಮಂದಿ ಅಂದುಕೊಳ್ಳಬಹುದು. ಈ ವಿಚಾರದಲ್ಲಿ ಸಣ್ಣ ಸಣ್ಣ ಪ್ರಯತ್ನಗಳೂ ಕೂಡಾ ದೊಡ್ಡ ಮಟ್ಟದಲ್ಲಿಯೇ ಪರಿಣಾಮ ಬೀರುತ್ತವೆ ಅನ್ನೋದನ್ನು ಯಾರೂ ಮರೆಯುವಂತಿಲ್ಲ. ಇದೀಗ ಎಲ್ಲೆಡೆಯೂ ನೀರಿನ ಕೊರತೆ ಎದಿರುಸುತ್ತಿದ್ದೇವೆ. ಒಂದಷ್ಟು ವರ್ಷಗಳಿಂದ ಬಿಸಿಲಿನ ತಾಪದಿಂದ ಅನೇಕ ಜನ ಮತ್ತು ಜಾನುವಾರಗಳು ಸಾವನ್ನಪ್ಪಿವೆ.ದೀಗಂತೂ ಬೇಸಿಗೆ ಆರಂಭದಲ್ಲಿಯೇ ರಣ ರಣಾ ಬಿಸಿಲು ಮೂಡಿಕೊಳ್ಳುತ್ತೆ. ಆರೆಉ ತಿಂಗಳ ಮಳೆಗಾಲ ಮಕಳೆದು ವಾರವಾಗೋ ಮುನ್ನವೇ ಭೂಮಿ ಕಾದ ಕೆಂಡದಂತಾಗುತ್ತೆ. ಮೊದಲಾದರೆ ಮಳೆಗಾಲದ ತೇವ ಜನವರಿ ವರೆಗೂ ಹಾಗೇ ಇರುತ್ತಿತ್ತು. ಈಗ ಅದೆಲ್ಲವೂ ಅದಲು ಬದಲಾಗಿದೆ. ಅದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ನಮ್ಮ ಮೇಲೇ ಆಗುತ್ತಿರೋದರ ಸ್ಪಷ್ಟ ಸೂಚನೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಹುಚ್ಚು ಹಿಡಿದಂತೆ ಸುರಿಯೋ ಮಳೆ, ಹಠಾತ್ತನೆ ತಲೆದೋರುವ ಬೇಸಿಗೆಯ ಧಗೆ, ಥರಗುಟ್ಟಿ ನಡುಗುವಂತೆ ಮಾಡೋ ಅಕಾಲಿಕ ಚಳಿ… ಇವೆಲ್ಲವೂ ಭೂಮಿಯ ಉಷ್ಣತೆ ಹೆಚ್ಚಾದುದರ ಪರಿಣಾಮಗಳೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಇತ್ತೀಚೆಗೆ ಕಾಡುತ್ತಿರುವ ಅತಿವೃಷ್ಟಿ, ಅನಾವೃಷ್ಟಿಗಳೆಲ್ಲವೂ ಜಾಗತಿಕ ತಾಪಮಾನ ಏರಿಕೆಯ ನೇರ ಪ;ರಿಣಾಮಗಳೇ. ಇದರಿಂದಾಗಿ ಮುಂದೊಂದು ದಿನ ಹಿಮ ಶಿಖರಗಳು ಸಂಪೂರ್ಣವಾಗಿ ಕರಗಿ ಸಮುದ್ರ ಸೇರುತ್ತೆ. ಅದರಿಂದಾಗಿ ಸಮುದ್ರದ ಕಿನಾರೆಯಲ್ಲಿರುವ ನಗರಗಳು ಮುಗುತ್ತವೆ. ಇದರಿಂದಾಗಿ ಕೃಷಿ ಚಟುವಟಿಕೆಗಳೂ ಕುಠಿತಗೊಂಡು ಇಡೀ ವಿಶ್ವದಲ್ಲಿ ಆಹಾರಕ್ಕಾಗಿ ತತ್ವಾರ ಕಾಣಿಸಿಕೊಳ್ಳಬಹುದು. ಏಕಾಏಕಿ ಚಂಡ ಮಾರುತಗಳು ಬಂದು ವಿಶ್ವದ ನಾನಾ ಭಾಗಗಳನ್ನು ನಾಮಾವಶೇಷ ಮಾಡುವ ಅಪಾಯಗಳೂ ಇದ್ದಾವೆ. ಒಂದಿಡೀ ಮಳೆಗಾಲದಲ್ಲಿ ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿದರೆ ಸಹಜವಾಗಿಯೇ ಭೂ ಕುಸಿತ ಉಂಟಾಗುತ್ತೆ. ಪ್ರವಾಹದಿಂದ ಹೆಚ್ಚಿನ ಮಣ್ಣ ಸಮುದ್ರ ಸೇರಿ ಪ್ರಾಕೃತಿಕ ಸಮತೋಲನ ಸಂಪೂರ್ಣವಾಗಿ ಏರುಪೇರಾಗುತ್ತೆ.
ಈ ಆಧುನಿಕ ಜಗತ್ತಿನಲ್ಲಿ ಜಾಗತಿಕ ತಾಪಮಾನಕ್ಕೆ ಮತ್ತಷ್ಟು ತೀವ್ರತೆ ಕೊಡುವಂಥಾ ಕೆಲಸ ಕಾರ್ಯಗಳೇ ವ್ಯಾಪಕವಾಗಿ ನಡೆಯಲಾರಂಭಿಸಿವೆ. ಅತಿಯಾದ ಕೈಗಾರಿಕೀಕರಣ, ಜಾಗತೀಕರಣಗಳ ದೆಸೆಯಿಂದ ಹಸಿರುಮನೆ ಅನಿಲಗಳ ಉತ್ಪತ್ತಿ ಅತಿಯಾಗಿದೆ. ಜನಸಂಖ್ಯಾ ಸ್ಫೋಟದಿಂದಾಗಿ ಅರಣ್ಯನಾಶ ಮತ್ತಷ್ಟು ಹೆಚ್ಚಿಕೊಳ್ಳುತ್ತಿದೆ. ಇನ್ನುಳಿದಂತೆ ಜ್ವಾಲಾಮುಖಿ, ಕಾಡ್ಗಿಚ್ಚುಗಳಿಂದಾಗಿಯೂ ವಾತಾವರಣ ಹದಗೆಡುತ್ತಿದೆ. ನಮ್ಮ ಕೃಷಿ ಪದ್ಧತಿಯಲ್ಲಿನ ಕೆಲ ಬೆಳವಣಿಗೆಗಳೂ ಕೂಡಾ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ ಅನ್ನೋದು ಅಚ್ಚರಿಯ ಸಂಗತಿಯೇನಲ್ಲ. ಇಂಥಾ ಪ್ರಕ್ರಿಯೆಗಳಲ್ಲಿ ಅಮೆರಿಕಾದಂಥಾ ಮುಂದುವರೆದ ದೇಶಗಳ ಪಾಲೇ ಬೆಟ್ಟದಷ್ಟಿದೆ. ಜಾಗತಿಕ ತಾಪಮಾನ ಏರಿಕೆ ಎಂಬ ಮಾಯೆ ಈ ಜಗತ್ತಿನ ಪ್ರಕೃತಿಯ ಗಡಿಯಾರವನ್ನೇ ಬದಲಿಸಿ ಬಿಡುತ್ತದೆ. ಪ್ರಧಾನವಾಗಿ ಮಳೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಎಲ್ಲ ಪ್ರದೇಶಗಳಿಗೂ ಕೂಡಾ ಒಂದಷ್ಟು ಪ್ರಮಾಣದಲ್ಲಿ ಹಂಚಿದಂತೆ ಮಳೆಯಾಗೋದು ವಾಡಿಕೆ. ಆದರೆ, ಕಳೆದ ಶತಮಾನದ ಅಂಚಿನ ಹೊತ್ತಿಗೆಲ್ಲ ಅದರಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಈಗಂತೂ ಮಳೆ ಬೀಓಳೋ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿ, ಮಳೆಯಿಲ್ಲದ ಪ್ರದೇಶಗಳಲ್ಲಿ ಭೂಮಿ ಬಾಯ್ಬಿಟ್ಟು ನಿಲ್ಲುವಂಥಾ ಸ್ಥಿತಿ ನಿರ್ಮಾಣಗೊಂಡಿದೆ.


ಈ ಜಾಗತಿಕ ತಾಪಮಾನ ಎಂಬುದು ನಾನಾ ಅಲಗಿನ ಕತ್ತಿಯಿದ್ದಂತೆ. ಅದು ಕೃಷಿ ಸೇರಿದಂತೆ ಎಲ್ಲದರ ಮೇಲೂ ಪ್ರಭಾವಚ ಬೀರುತ್ತದೆ. ಇದರ ಪರಿಣಾಮ ಸಮುದ್ರದ ನೀರಿನ ಮೇಲೂ ಆಗುತ್ತದೆ. ಸಮುದ್ರದ ನೀರಿನ ತಾಪಮಾನ ಹೆಚ್ಚಾಗುವುದರಿಂದ ಮೀನಿನ ವಂಶಾಭಿವೃದ್ಧಿ ನಾಶವಾಗುತ್ತೆ. ಹಾಗೊಂದು ವೈಪರೀತ್ಯ ತಲೆದೋರಿದರೆ ಮೀನಿನ ಸಂತತಿ ಕಡಿಮೆಯಹಾಗಿ ಆಹಾರ ವ್ಯತ್ಯಯ ಉಂಟಾಗುತ್ತೆ. ಮೀನಿನ ಭೂಮಿಕೆಯಲ್ಲಿ ನಡೆಯೋ ಕೋಟಿ ಕೋಟಿ ವ್ಯವಹಾರಕ್ಕೂ ಹೊಡೆತ ಬೀಳುತ್ತೆ. ಕೇವಲ ಮೀನುಗಾರಿಕೆ ಮಾತ್ರವಲ್ಲದೇ ಕೃಷಿಯ ನಾನಾ ಮಗ್ಗುಲುಗಳಿಗೂ ಜಾಗತಿಕ ತಾಪಮಾನ ಏರಿಕೆ ಎಂಬುದು ಅಕ್ಷರಶಃ ಮುಳ್ಳಾಗಿ ಕಾಡುತ್ತದೆ. ಬಿತ್ತಿದ ಬೆಳೆಯೆಲ್ಲ ಅತಿವೃಷ್ಟಿ ಅನಾವೃಷ್ಟಿ ಗೆ ಬಲಿಯಾದರೆ ಖಂಡಿತವಾಗಿಯೂ ಆಹಾರದಲ್ಲಿ ಕೊರತೆ ಉಂಟಾಗುತ್ತದೆ. ಅದೆಷ್ಟೋ ಮಂದಿ ಹಸಿವಿನಿಂದ ಸಾಯುವಂಥಾ ಘೋರ ದುರಂತ ಎದುರಾದರೂ ಅಚ್ಚರಿಯೇನಿಲ್ಲ. ಹಾಗಾಗದಂತೆ ತಡೆಯೋ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದಷ್ಟು ಅರಣ್ಯ ಬೆಳೆಸಲು ಪ್ರಯತ್ನಿಸುತ್ತಾ, ಅಳಿದುಳಿದ ಅರಣ್ಯ ಪ್ರದೇಶವನ್ನು ಕಾಪಾಡಿಕೊಳ್ಳುತ್ತಾ, ಪರಿಸರ ಮಾಲಿನ್ಯ ನಿಯಂತ್ರಣದಲ್ಲಿಟ್ಟುಕೊಂಡರೆ ಅಷ್ಟರ ಮಟ್ಟಿಗೆ ಮುಂದಿನ ಪೀಳಿಗೆಗೆ ಸಹ್ಯವಾದ ವಾತಾವರಣ ಉಳಿಸಲು ಸಾಧ್ಯವಾದೀತೇನೋ…

Tags: #environment#globalwarming

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
wonderful facts: ಈ ಜಗತ್ತಿನಲ್ಲಿ ಎಂತೆಂಥಾ ಅಚ್ಚರಿಗಳಿವೆ ಗೊತ್ತಾ?

wonderful facts: ಈ ಜಗತ್ತಿನಲ್ಲಿ ಎಂತೆಂಥಾ ಅಚ್ಚರಿಗಳಿವೆ ಗೊತ್ತಾ?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.