Salman Khan: ಬಿಟೌನ್ ಬಾಯ್ ಜಾನ್ ಸಲ್ಮಾನ್ ಖಾನ್(Salman Khan) ಅಪಾರ ಅಭಿಮಾನಿ ಬಳಗ, ಸ್ಟಾರ್ ಡಂ ಹೊಂದಿರುವ ನಟ. ಆದ್ರೆ ಈತನಿಗೆ ನೆಮ್ಮದ್ದಿಯ ನಿದ್ರೆ ಈ ನಡುವೆ ಮಾಯವಾಗಿದೆ. ಕೃಷ್ಣ ಮೃಗ ಕೇಸ್‌ನಲ್ಲಿ ಜೈಲುವಾಸ ಅನುಭವಿಸಿರುವ ಸಲ್ಲುಬಾಯ್‌ಗೆ ಮನೆಯಲ್ಲೂ ಪಾತಕಿಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಈತನ ಪರಿಸ್ಥಿತಿಗೆ ಮಾಜಿ ಪ್ರೇಯಸಿಯೂ ಮರುಗಿದ್ದಾಳೆ.
ಸಲ್ಮಾನ್ ಖಾನ್(Salman Khan) ಮಾಜಿ ಪ್ರೇಯಸಿ ಎಂದೇ ಕರೆಸಿಕೊಳ್ಳೊ ಸೋಮಿ ಅಲಿ(Somy Ali) ಸಲ್ಮಾನ್ ಖಾನ್ ಬಗ್ಗೆ ಮರುಕ ವ್ಯಕ್ತಪಡಿಸಿ ಸುದ್ದಿಯಲ್ಲಿದ್ದಾಳೆ. ಸಲ್ಮಾನ್ ಖಾನ್‌ರನ್ನು ಮುಗಿಸಲು ದೊಡ್ಡ ಗುಂಪೊಂದು ಸತತ ಪ್ರಯತ್ನದಲ್ಲಿದೆ. ಇತ್ತೀಚೆಗೆ ಬಾಂದ್ರಾದ ನಿವಾಸದ ಮೇಲೆ ಗುಂಡಿನ ದಾಳಿಯೂ ನಡೆದಿತ್ತು. ಇದೆಲ್ಲದರಿಂದ ಸೋಮಿ ಅಲಿ ನೊಂದಿದ್ದಾರೆ. ಸಲ್ಲು ಸಾಯಿಸಲು ಹೊರಟವರ ಬಳಿ ಸಲ್ಲು ಪರಿಸ್ಥಿತಿಯನ್ನು ಬಿಚ್ಚಿಟ್ಟು ಆತನನ್ನು ನೆಮ್ಮದಿಯಿಂದ ಇರಲು ಬಿಡಿ ಎಂದಿದ್ದಾಳೆ. ಸಲ್ಲು ಅನುಭವಿಸುತ್ತಿರುವ ಪರಿಸ್ಥಿತಿ ಶತ್ರುವಿಗೂ ಬೇಡ. ಅವರಿಗೆ ಎದುರಾಗಿರುವ ಸಮಸ್ಯೆ ಯಾರಿಗೂ ಎದುರಾಗದೇ ಇರಲಿ. ನನ್ನ ಪ್ರಾರ್ಥನೆ ಎಂದಿಗೂ ಸಲ್ಮಾನ್ ಖಾನ್ ಜೊತೆಗಿರಲಿದೆ ಎಂದಿದ್ದಾರೆ. ಸಲ್ಲು ಮನೆ ಮೇಲೆ ಆದ ದಾಳಿ ನನಗೆ ಮಾತ್ರವಲ್ಲ ನನ್ನ ತಾಯಿಗೂ ಆತಂಕ ತರಿಸಿದೆ. ಯಾರದ್ದಾದರೂ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ನ್ಯಾಯ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದಿದ್ದಾರೆ.
90ರ ದಶಕದಲ್ಲಿ ಸಲ್ಮಾನ್ ಖಾನ್(Salman Khan) ಸೇರಿದಂತೆ ಹಲವು ನಟರೊಂದಿಗೆ ನಟಿಸಿರುವ ನಟಿ ಸೋಮಿ ಅಲಿ(Somy Ali). ಸಲ್ಮಾನ್ ಹಾಗೂ ಈಕೆ ಪ್ರೀತಿಯಲ್ಲಿದ್ದಾಳೆ ಎಂದು ಸುದ್ದಿಯಾಗಿತ್ತು, ಇಬ್ಬರ ನಡುವೆ ಬ್ರೇಕಪ್ ಆಗಿ ನಂತರ ಅಮೇರಿಕಾ ಪ್ರಯಣ ಬೆಳೆಸಿದ್ದರು ಸೋಮಿ ಅಲಿ. ಸದ್ಯ ಮಾಜಿ ಪ್ರಿಯಕರನ ಪರಿಸ್ಥಿತಿಗೆ ಮರುಗಿರುವ ನಟಿ ತನ್ನ ಆತಂಕವನ್ನು ಹೊರ ಹಾಕಿದ್ದಾರೆ.