Fahadh Faasil ಮಲಯಾಳ ಖ್ಯಾತ ನಟ ಫಾಹದ ಫಾಸಿಲ್(Fahadh Faasil). ಪುಷ್ಪಾ2(Pushpa2) ನಲ್ಲಿ ವಿಲ್ನ ಆಗಿ ನಟಿಸಿ ಇವರ ಖ್ಯಾತಿಯೂ ಹೆಚ್ಚಾಗಿದೆ. ತಮ್ಮ ಅದ್ಭುತ ನಟನೆ ಮೂಲಕ ಗಮನ ಸೆಳೆಯೋ ಫಾಫಾ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಸದ್ಯ ಕಳೆದ ತಿಂಗಳು ತೆರೆಕಂಡ ಆವೇಶಂ ಸಿನಿಮಾ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಆವೇಶಂ ಅಭೂತ ಪೂರ್ವ ಗೆಲುವು ಕಂಡಿದ್ದು, ಫಹಾದ ನಟನೆಗೆ ಶಬ್ಬಾಶ್‌ಗಿರಿ ಸಿಕ್ಕಿದೆ.
‘ಆವೇಶಂ’(Aavesham) ಗೆಲವುವಿನ ಅಲೆಯಲ್ಲಿ ತೇಲುತ್ತಿರುವ ನಟ ಇದೇ ಸಂದರ್ಭದಲ್ಲಿ ತಮಗಿರುವ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕಾಯಿಲೆ ಹೆಸರು ADHD(ಅಟೆಂನ್ಷನ್ ಡಿಫಿಸಿಟ್ ಹೈಪರ್ ಆಕ್ಟೀವ್ ಡಿಸಾರ್ಡರ್) ಎಂಬ ವಿರಳ ಕಾಯಿಲೆ ಫಾಫಾನನ್ನು ಭಾದಿಸುತ್ತಿದೆಯಂತೆ. ನರಗಳಿಗೆ ಸಂಬಂಧಿಸಿದ ಈ ಕಾಯಿಲೆ ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಉದ್ವೇಗ, ನಡವಳಿಕೆ, ನಿಯಂತ್ರಣ ಸಾಮರ್ಥ್ಯವನ್ನು ಇದು ಕಡಿಮೆ ಮಾಡುತ್ತದೆಯಂತೆ. ಚಿಕ್ಕ ವಯಸ್ಸಿನಲ್ಲೇ ಆದರೆ ಇದಕ್ಕೆ ಪರಿಹಾರವಿದೆ ಆದರೆ ವಯಸ್ಸಾದ ಮೇಲೆ ಗುಣ ಪಡಿಸುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆಂದು 41 ವರ್ಷದ ಫಾಫಾ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ತೆರೆಕಂಡ ‘ಆವೇಶಂ’(Aavesham)ಸಿನಿಮಾವನ್ನು ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ ಫಹಾದ್ ರೌಡಿ ರಂಗನಾಗಿ ನಟಿಸಿದ್ರು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಕೆ ಕಂಡಿದೆ. ಸದ್ಯ ಪುಷ್ಪಾ 2 ಸಿನಿಮಾದಲ್ಲಿ ಬ್ಯುಸಿಯಿರುವ ಫಾಪಾ, ಕಮಲ್ ಹಾಸನ್ ವಿಕ್ರಮ್ ಸಿನಿಮಾದಲ್ಲೂ ಕಮಾಲ್ ಮಾಡಿದ್ದಾರೆ.