ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳ ವಂಚನಾ ಜಾಲ ಈವತ್ತಿಗೆ ಇಡೀ ದೇಶವನ್ನೇ ಆವರಿಸಿಕೊಂಡಿದೆ. ದೇಶದ ಕೋಟ್ಯಾಂತರ ಬ್ಯಾಂಕ್ ಖಾತೆಗಳಲ್ಲಿನ ಅಷ್ಟೂ ಹಣ ಏಕಾಏಕಿ ಕರಗಿ ಹೋಗಿದ್ದೇ ಗ್ರಾಹಕರೆಲ್ಲ ಕಂಗಾಲೆದ್ದು ಹೋಗಿದ್ದಾರೆ. ರಿಸರ್ವ್ ಬ್ಯಾಂಕ್ ನಿಯಮಾವಳಿಯ ಪ್ರಕಾರ ಯಾವುದೇ ಬ್ಯಾಂಕ್ ಖಾತೆಯಿಂದ ಗ್ರಾಹಕರಿಗೆ ಗೊತ್ತಿಲ್ಲದಂತೆಬ ಹಣ ಖಾಲಿಯಾದರೆ ಆಯಾ ಬ್ಯಾಂಕುಗಾಳೇ ಆ ಮ,ಒತ್ತ ಭರಿಸಬೇಕೆಂದಿದೆ. ಆ ನಿಯಮದ ಪ್ರಕಾರವೇ ಹೋದರೆ ಬ್ಯಾಂಕುಗಳೇ ಬರಿದಾಗುವ ರೇಂಜಿಗೆ ಇಂಥಾ ಖಾಸಗಿ ಖಾತೆಗಳ ಹಣ ಹೀರಿಕೊಂಡಿದ್ದು ಚಾಲಾಕಿ ಹ್ಯಾಕರ್ಸ್. ಹೈಟೆಕ್ ತಂತ್ರಜ್ಞಾನಗಳನ್ನೆಲ್ಲ ಒಂದು ಹೆಜ್ಜೆ ಮುಂದೆ ನಿಂತು ವಂಚನೆಗೆ ಬಳಸಿಕೊಳ್ಳುವ ಹೈಟೆಕ್ ವಂಚಕರು ತಿಂಗಳೀಚೆಗೆ ದೇಶಾದ್ಯಂತ ನಡೆಸಿರುವ ಕೈಚಳಕ ಕಂಡು ದೇಶಕ್ಕೆ ದೇಶವೇ ಥಂಡಾ ಹೊಡೆದು ಹೋಗಿದೆ. ಅಂದಹಾಗೆ ಈ ವಂಚನಾ ಜಾಲದ ಕಿಂಗ್ಪಿನ್ ಭಾರತದವನೇ ಎಂಬುದು ಯಾವತ್ತೋ ಜಾಹೀರಾಗಿದೆ!
ಮೊಬೈಲೇ ಮೊದಲ ಶತ್ರು
ಈಗಂತೂ ಎಲ್ಲವೂ ಮೊಬೈಲಿನ ಮೂಲಕವೇ ಆಪರೇಟ್ ಆಗೋ ಕಾಲಮಾನ. ತೀರಾ ಹಳ್ಳಿಗಾಡಿನ ಜನರೂ ಕೂಡಾ ನೆಟ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ಅನಕ್ಷರಸ್ಥ ಮಂದಿಗೂ ಈಗ ಅದನ್ನು ಬಿಟ್ಟರೆ ಬೇರೆ ದಾರಿ ಉಳಿದುಕೊಂಡಿಲ್ಲ. ಕಾಸನ್ನು ಅಕೌಂಟಿಗೆ ಹಾಕೋದಕ್ಕೆ, ಇರೋ ಕಾಸನ್ನು ತೆಗೆಯೋದಕ್ಕೆಲ್ಲ ಕ್ಯೂ ನಿಂತು ಸುಸ್ತಾದ ಮಂದಿಗೀಗ ಆನ್ ಲೈನ್ ಟ್ರಾನ್ಜಾಕ್ಷನ್ ವರದಂತೆ ಕಾಣಿಸುತ್ತಿದೆ. ಇನ್ನುಳಿದಂತೆ ಎಟಿಎಂ ಕಾರ್ಡು ಹೊಂದಿರದವರೇ ಇಲ್ಲ. ಇಂಥಾ ಎಟಿಎಂ ಕಾರ್ಡುಗಳು ನಿಮ್ಮ ಕಿಸೆಯಲ್ಲಿ ಸೇಫ್ ಆಗಿರುವಾಗಲೇ ದೂರದ ದೇಶದಲ್ಲಿ ಕೂತೇ ಕಾಸು ಕಬಳಿಸೋಳ ದಂಧೆಕೋರರೀಗ ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಥಾ ಪಟಾಲಮ್ಮು ಆಗಾಗ ತಗುಲಿಕೊಂಡಾಗ ಒಂದಷ್ಟು ಸುದ್ದಿಯಾಗುತ್ತೆ. ಆ ನಂತರ ಮಂದಿ ಅದನ್ನು ಮರೆತೇ ಬಿಡುತ್ತಾರೆ. ಆದರೆ, ಈ ದಂಧೆಕೋರರ ಕಾರ್ಯಾಚರಣೆ ಮಾತ್ರ ನಿರ್ವಿಘ್ನ!
ಈಗ ಜೇಬಲ್ಲಿ ಹಣ ಇಟ್ಟುಕೊಂಡು ಹೋಗಿ ವ್ಯವಹಾರ ಮಾಡುವವರೇ ಅನಾಗರಿಕರು ಎಂಬಂಥಾ ವಾತಾವರಣವಿದೆ. ದೊಡ್ಡ ದೊಡ್ಡ ಶಾಪಿಂಗ್ ಮಾಲ್ಗಳಿಂದ ಮೊದಲ್ಗೊಂಡು ದಿನಸಿ ಅಂಗಡಿ, ಪೆಟ್ರೋಲ್ ಬಂಕ್ಗಳವರೆಗೂ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳ ಮೂಲಕವೇ ಎಲ್ಲ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಆದರೆ ಈ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳ ಬಳಕೆ ಅದೆಷ್ಟು ಅಪಾಯಕಾರಿ ಎಂಬುದನ್ನು ಜನ ಯೋಚಿಸುವುದೇ ಇಲ್ಲ. ಯಾಕೆಂದರೆ ಇಂಥಾ ಶಾಪಿಂಗ್ ಮಾಲ್, ಪೆಟ್ರೋಲ್ ಬಂಕ್ ಮುಂತಾದೆಡೆಗಳಲ್ಲಿ ಕೊಂಚವೂ ಅನುಮಾನ ಬಾರದಂತೆ ಈ ಇಂಟರ್ನ್ಯಾಷನಲ್ ಹ್ಯಾಕರ್ಸ್ ಜಾಲದ ಏಜೆಂಟುಗಳು ತಣ್ಣಗೆ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇಂಥವರ ಕೈಚಳಕ ಎಂಥಾದ್ದೆಂಬುದು ಗೊತ್ತಾಗುವುದು ಬೇಕೆಂದಾಗ ಕಾರ್ಡು ಉಜ್ಜಲು ಹೋದಾಗ ಬ್ಯಾಲೆನ್ಸ್ ಖಾಲಿ ಅಂತ ಗೊತ್ತಾದಾಗಲೇ!
ಎಚ್ಚರ ತಪ್ಪಿದರೆ…
ಯಾವುದಾದರೂ ಶಾಪಿಂಗ್ ಮಾಲ್ಗೆ ಹೋದಾಗ ಕಾರ್ಡು ಸ್ವೈಪ್ ಮಾಡೋ ಮಿಷಿನ್ನು ಕೆಟ್ಟಿದೆ ಅಂತ ಬೇರೆ ಮಿಷಿನ್ನು ತೆಗೆದರೆ ಸಣ್ಣಗೊಂದು ಎನ್ಕ್ವೈರಿ ಮಾಡೋದೊಳಿತು. ಯಾಕೆಂದರೆ ಆ ಇನ್ನೊಂದು ಸ್ವೈಪಿಂಗ್ ಯಂತ್ರ ಇಂಟರ್ನ್ಯಾಷನಲ್ ಹ್ಯಾಕರ್ಸ್ ಜಾಲದ್ದಾಗಿದ್ದರೂ ಅಚ್ಚರಿಯೇನಿಲ್ಲ. ಹೀಗೆ ಒಂದು ಸಲ ಇಂಥಾ ಸ್ವೈಪ್ ಯಂತ್ರಕ್ಕೆ ಒಂದು ಕಾರ್ಡು ಸೋಕಿದರೆ ಕಥೆ ಮುಗಿದಂತೆಯೇ. ಯಾಕೆಂದರೆ ಕ್ಷಣಾರ್ಧದಲ್ಲಿಯೇ ಅಂಥಾ ಕಾರ್ಡಿನ ಸೀಕ್ರೆಟ್ ಕೋಡ್ ಸೇರಿದಂತೆ ಸಂಪೂರ್ಣ ಡೇಟಾ ಹ್ಯಾಕರ್ಸ್ ಜಾಲದ ಕೈವಶವಾಗುತ್ತದೆ. ಆ ಬಳಿಕ ತಡ ಮಾಡದೇ ಥೇಟು ಅದೇ ನಮೂನೆಯ ಕ್ರೆಡಿಟ್, ಡೆಬಿಟ್ ಕಾರ್ಡು ರೆಡಿಯಾಗಿ ಆ ಖಾತೆ ಬರಿದಾಗಿ ಹೋಗುತ್ತದೆ. ಇದು ಈ ದಂಧೆಕೋರರ ಅಸಲೀ ಮ್ಯಾಜಿಕ್. ಭಾರತದ ಮಟ್ಟಿಗೆ ಇಂಥಾ ದಂಧೆಯನ್ನು ಒಂದೂವರೆ ದಶಕಗಳಿಂದೀಚೆಗೆ ಯಾರ ಅಂಕೆಯೂ ಇಲ್ಲದೆ ಮುಂದುವರೆಸಿಕೊಂಡು ಬಂದಿರುವಾತ ಅಕ್ಷಯ್ ಅಲಿಯಾಸ್ ಮನೋಜ್ ಕುಮಾರ್!
ರಾಜಸ್ಥಾನದವನಾದ ಮನೋಜ್ ಕುಮಾರ್ ಇಂಟರ್ನ್ಯಾಷನಲ್ ಹ್ಯಾಕರ್ಸ್ ಜೊತೆ ನೇರಾ ನೇರ ಸಂಪರ್ಕ ಹೊಂದಿರುವ ಭಾರತದ ಕಿಂಗ್ಪಿನ್. ನಲವತೈದು ವರ್ಷ ವಯಸ್ಸಿನ ಈ ಮನೋಜ್ಕುಮಾರ್ ವಿದ್ಯಾವಂತ. ನಿಯತ್ತಾಗಿ ದುಡಿಯುವ ಮನಸಿದ್ದಿದ್ದರೆ ಯಾವುದಾದರೂ ಕಂಪೆನಿಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದು ಕೈ ತುಂಬಾ ಕಾಸೆಣಿಸುತ್ತಿದ್ದನೇನೋ. ಆದರೆ ಆರಂಭದಿಂದಲೇ ಅಡ್ಡ ಹಾದಿಯಲಿ ಕಾಸು ಮಾಡುವ ವಕ್ರ ಬುದ್ಧಿ ಅಚಿಟಿಸಿಕೊಂಡಿದ್ದ ಈತ ರಾಜಸ್ಥಾನದ ಹಳ್ಳಿಯಲ್ಲಿಯೇ ಸಣ್ಣಗೆ ಬೇರೆ ಬೇರೆ ವಂಚನೆ ಶುರುವವಿಟ್ಟುಕೊಂಡಿದ್ದ. ತಾಂತ್ರಿಕವಾಗಿಯೂ ಭಾರೀ ತಿಳುವಳಿಕೆ ಹಾಗೂ ಬುದ್ಧಿವಂತಿಕೆ ಹೊಂದಿದ್ದ ಈತ ಈಚೆಗೆ ಇಳಿದದ್ದು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುಗಳನ್ನು ನಕಲು ಮಾಡುವ ದಂಧೆಗೆ. ಈತನಿಗೆ ಹೆಂಡತಿಯಾಗಿ ಬಂದ ನೀತಾ ಕೂಡಾ ಗಂಡನಿಗೆ ತಕ್ಕ ಹೆಂಡತಿಯೇ. ಮನೋಜ್ ಕುಮಾರನ ಖಾಸಾ ತಮ್ಮ ಕಿರಣ್ ಸಹ ಅಣ್ಣನ ಹಡಬೇ ಕಸುಬಿಗೆ ಕೈ ಜೋಡಿಸಿದ್ದ. ಇವನು ಕಳ್ಳ ಕಾಸಿಗೆ ಆಸೆ ಬಿದ್ದು ಹೆಂಡತಿ ಹಾಗೂ ಮಗುವನ್ನೂ ಬಿಟ್ಟು ಅಣ್ಣನೊಂದಿಗೆ ತಿರುಪೆ ಯಾತ್ರೆ ಮುಂದುವರೆಸಿದ್ದ. ಇಂಥಾ ಮನೋಜ್ ಕುಮಾರ ತನ್ನ ತಮ್ಮ ಕಿರಣ್ ಹಾಗೂ ಹೆಂಡತಿ ನೀತಾಳೊಂದಿಗೆ ಮೊದಲ ಸಲ ಸೀದಾ ಬಂದಿಳಿದದ್ದು ಚೆನೈನ ಸ್ಲಂ ಒಂದಕ್ಕೆ.
ಸ್ಲಂ ಅವರ ಕರ್ಮಭೂಮಿ
ಮನೋಜ್ ಹೀಗೆ ಸಂಸಾರ ಸಮೇತನಾಗಿ ಈ ಸ್ಲಂಗೆ ಬಂದಿಳಿಯಲೂ ಬಲವಾದ ಕಾರಣವಿತ್ತು. ಅಲ್ಲಿನ ಒಂದು ಏರಿಯಾದಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳನ್ನು ನಕಲಿ ಮಾಡಿ ತಯಾರು ಮಾಡುವ ದಂಧೆಯೊಂದು ಅವ್ಯಾಹತವಾಗಿ ನಡೆಯುತ್ತಿತ್ತು. ಆ ದಂಧೆಗೆ ಇಂಟರ್ನ್ಯಾಷನಲ್ ಲೆವೆಲ್ಲಿನ ಲಿಂಕುಗಳಿದ್ದವು. ದೇಶ ಹಾಗೂ ವಿದೇಶದ ನಾನಾ ಕಡೆಗಳಿಂದ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳ ಡೇಟಾ ಕದಿಯುತ್ತಿದ್ದ ಹ್ಯಾಕರ್ಸ್ ಅದೇ ತೆರನಾದ ಕಾರ್ಡುಗಳ ತಯಾರಿಗೆ ಆಶ್ರಯಿಸುತ್ತಿದ್ದದ್ದು ಚೆನೈನ ಆ ಸ್ಲಂ ಅನ್ನು. ಅಲ್ಲಿಗೆ ಬಂದಿಳಿದ ಮನೋಜ್ಗೆ ಕಾರ್ಡು ತಯಾರಿಸುವುದನ್ನು ಕಲಿಯಬೇಕಿತ್ತು. ಆದರೆ ಈ ಅವಧಿಯಲ್ಲಿಯೇ ಆತನಿಗೆ ವಿಫುಲವಾಗಿ ಅಂತಾರಾಷ್ಟ್ರೀಯ ಹ್ಯಾಕರ್ಸ್ಗಳ ಸಂಪರ್ಕವೂ ಸಿಕ್ಕಿತ್ತು. ಆರಂಭದಲ್ಲಿ ಇಂಥಾ ಹ್ಯಾಕರ್ಸ್ಗಳ ಏಜೆಂಣನಾಗಿದ್ದ ಈತ ನೋಡ ನೋಡುತ್ತಲೇ ಇಡೀ ಭಾರತದಲ್ಲಿ ಈ ದಂಧೆಯ ಕಿಂಗ್ಪಿನ್ ಆಗಿರೋದರಲ್ಲಿ ಬೆಂಗಳೂರು ಪೊಲೀಸರ ಕೊಡುಗೆಯೂ ಇದೆ ಎಂದರೆ ನಂಬಲೇಬೇಕು!
ಚೆನೈನಲ್ಲಿ ನಕಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡು ತಯಾರಿಸೋದನ್ನು ಕಲಿತು ನಂತರ ಸ್ವತಂತ್ರ ದಂಧೆಗಿಳಿದ ಮನೋಜ್, ಸಬ್ ಏಜೆಂಟುಗಳನ್ನು ಸೆಟ್ ಮಾಡಲು ನಾನಾ ನಗರಗಳಲ್ಲಿ ಅಲೆದಾಡಿ ಕಡೆಗೂ ಬಂದು ಲ್ಯಾಂಡ್ ಆಗಿದ್ದು ಬೆಂಗಳೂರಿನಲ್ಲಿ. ಈ ಸಂದರ್ಭದಲ್ಲಿಯೂ ಹೆರಂಡತಿ ನೀತಾ ಹಾಗೂ ಸಹೋದರ ಕಿರಣ್ ಜೊತೆಗೇ ಇದ್ದರು. ಇಲ್ಲಿ ಯಾರ್ಯಾರದ್ದೋ ಕ್ರೆಡಿಟ್ ಡೆಬಿಟ್ ಕಾರ್ಡುಗಳನ್ನು ಹ್ಯಾಕ್ ಮಾಡಿ ಕಾಸು ಗುಂಜಿಕೊಂಡಿದ್ದ ಈತನನ್ನು ಬೆಂಗಳೂರಿನ ನಾನಾ ಠಾಣೆಗಳ ಪೊಲೀಸರು ಬಂಧಿಸಿದ್ದರು. ಆದರೆ ಅದ್ಯಾಕೋ ಸರಿಯಾದ ವಿಚಾರಣೆಯನ್ನೂ ನಡೆಸದೆ ಹಾಗೆಯೇ ಬಿಟ್ಟು ಕಳಿಸಿದ್ದರು. ಕಡೇಯ ಸಲ ಈತ ಅರೆಸ್ಟಾಗಿದ್ದು ಇಸ್ವಿ ೨೦೧೩ರಲ್ಲಿ. ಆಗಲೂ ಸಲೀಸಾಗಿ ಬಿಡುಗಡೆಯಾಗಿ ಹೋಗಿದ್ದ ಮನೋಜ್ ಈವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಡಾನ್ ಆಗಿದ್ದಾನೆ. ಮೊನ್ನೆ ಮೊನ್ನೆ ಆತನ ಹೆಂಡತಿ ನೀತಾ ಹಾಗೂ ಸಹೋದರ ಕಿರಣ್ನನ್ನು ಬಂಧಿಸಿದರೂ ಕೂಡಾ ಮನೋಜನನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಆತನ ಖದರೇನೆಂಬುದು ಅರ್ಥವಾಗುತ್ತದೆ.
ನಕಲಿ ಕಮಾಲ್
ಈ ಮನೋಜ್ ಚೆನೈನಲ್ಲಿ ನಕಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡು ತಯಾರಿಸುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದನಲ್ಲಾ? ಆವಾಗಲೇ ಶ್ರೀಲಂಕಾದ ಕೆಲ ದಂಧೆಕೋರ ತಮಿಳರ ಪರಿಚಯ ಮಾಡಿಕೊಂಡಿದ್ದ. ಯಾವಾಗ ಭಾರತದ ಬೇರೆ ಬೇರೆ ರಾಜ್ಯಿಗಳಲ್ಲಿ ಮಾಡಿದ ವಂಚನೆಯ ವಿಚಾರವಾಗಿ ಪೊಲೀಸರು ಹುಡುಕಲಾರಂಭಿಸಿದೋ ಆಗ ಹೆಂಡತಿಯನ್ನು ಇಲ್ಲೇ ಬಿಟ್ಟು ಶ್ರೀಲಂಕಾ ಸೇರಿ ಬಚಾವಾಗಲಾರಂಭಿಸಿದ್ದ. ಈಗಂತೂ ಮನೋಜ್ಕುಮಾರ್ ಇಂಟರ್ನ್ಯಾಷನಲ್ ಹ್ಯಾಕರ್ಸ್ ಪಡೆಯ ಮುಖ್ಯ ಆಸಾಮಿಯಾಗಿ ಬದಲಾಗಿದ್ದಾನೆ. ಶ್ರೀಲಂಕಾದಲ್ಲಿ ಕೂತೇ ಎಲ್ಲವನ್ನೂ ಆಪರೇಟ್ ಮಾಡುತ್ತಿದ್ದಾನೆಂಬ ವಿಚಾರ ಪೊಲೀಸರಿಗೂ ಪಕ್ಕಾ ಆಗಿದೆ. ಈವತ್ತು ಬೆಂಗಳೂರಿನ ಯಾವುದೇ ಏರಿಯಾದ ಸ್ವೈಪ್ ಮೆಷಿನ್ನಿನಿಂದ ಸಿಕ್ಕ ಡೇಟಾ ವಿವರ ಕ್ಷಣಾರ್ಧದಲ್ಲಿಯೇ ಶ್ರೀಲಂಕಾದಲ್ಲಿ ಕೂತಿರೋ ಮನೋಜನಿಗೆ ಸಿಗತ್ತದೆ. ಅಷ್ಟೇ ವೇಗವಾಗಿ ಆ ಡೇಟಾದ ನಕಲಿ ಕಾರ್ಡು ಸಹ ರೆಡಿಯಾಗಿ ಹಣ ದೋಚಿಕೊಳ್ಳಲಾಗುತ್ತದೆ.
ಅಂದಾಜಿನ ಪ್ರಕಾರ ದೇಶದಲ್ಲೀಗ ತೊಂಭತ್ತು ಕೋಟಿಯಷ್ಟು ಡೆಬಿಟ್ ಕಾರ್ಡುಗಳಿದ್ದಾವೆ. ಇದರಲ್ಲಿ ಕಾಲು ಭಾಗದಷ್ಟು ಕಾರ್ಡುಗಳು ಹ್ಯಾಕ್ ಆಗಿವೆ. ಅದರ ಹಿಂದಿರೋದು ಇದೇ ಮನೋಜ್ ಕುಮಾರ್. ಇಂಥಾ ಕಾರ್ಡುಗಳಲ್ಲಿ ಒಂದಷ್ಟು ಇದೀಗಲೇ ಬರಿದಾಗಿವೆ. ಈಗಹಾಲಲೇ ಹ್ಯಾಕಿಂಗ್ ಮೂಲಕ ಮನೋಜನ ಕೈಸೇರಿರುವ ಡೇಟಾಗಳು ಯಾವ ಕ್ಷಣದಲ್ಲಾದರೂ ಬರಿದಾಗಬಹುದು. ಹೀಗೆ ಚಾಣಾಕ್ಷತನದಿಂದ ಕೋಟಿ ಕೋಟಿ ಲಪಟಾಯಿಸಿ ಭಾರೀ ಕುಳವಾಗಿರುವ ಮನೋಜ್ಗೆ ದೇಶ ವಿದೇಶಗಳಲ್ಲಿ ಲೆಕ್ಕವಿಲ್ಲದಷ್ಟು ಕಾಂಟ್ಯಾಕ್ಟುಗಳಿವೆ. ಆದರೆ ಅವರ್ಯಾರೊಂದಿಗೂ ಈತ ತನ್ನ ವ್ಯವಹಾರದ ಗುಟ್ಟು ಬಿಟ್ಟು ಕೊಡುವುದಿಲ್ಲ. ಈತ ನಂಬುವುದು ತನ್ನ ಹೆಂಡತಿ ನೀತಾ ಹಾಗೂ ಸಹೋದರ ಕಿರಣ್ನನ್ನು ಮಾತ್ರ. ಅದರಲ್ಲಿಯೂ ಎಲ್ಲ ಹಣಕಾಸು ವ್ಯವಹಾರವನ್ನೂ ನಿಭಾಯಿಸುವವಳು ಹೆಂಡತಿ ನೀತಾ ಮಾತ್ರ.
ವಂಚನೆಗೆ ತರಬೇತಿ
ಇಂಥಾ ಮನೋಜ್ ನಕಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮಾಡುವ ಕುರಿತಾಗಿ ಭಾರೀ ತರಬೇತಿಗಳನ್ನೂ ಪಡೆದಿದ್ದಾನೆ. ಬಹುಶಃ ಇದರಲ್ಲಿ ಇವನನ್ನು ಮೀರಿಸುವ ಮತ್ತೊಬ್ಬರು ಸಿಗೋದು ಕಷ್ಟ. ಯಾಕೆಂದರೆ ಈರ ಇಸ್ವಿ ೨೦೧೨ರಲ್ಲಿ ದೇಶಾದ್ಯಂತ ಮಾಡಬಾರದ್ದು ಮಾಡಿ ಬಂಧನದ ಭಯಕ್ಕೆ ಬಿದ್ದಿದ್ದ. ಸಿಕ್ಕಿ ಬಿದ್ದರೆ ತಿಂದಿದ್ದನ್ನೆಲ್ಲ ಕಾರಿಕೊಂಡು ಪರ್ಮನೆಂಟಾಗಿ ಜೈಲಲ್ಲಿ ಕೊಳೆಯಬೇಕಾಗುತ್ತದೆ ಎಂಬುಯದನ್ನು ಖಾತರಿ ಮಾಡಿಕೊಂಡ ಮನೋಜ್ ಸೀದಾ ಮಲೇಶ್ಯಾಕ್ಕೆ ಹಾರಿ ಬಚಾವಾಗಿದ್ದ. ಹಾಗೆ ಆ ದೇಶಕ್ಕೆ ಹೋಗಿದ್ದ ಕಾಲವನ್ನೂ ಈ ಆಸಾಮಿ ವ್ಯರ್ಥವಾಗಿಸಿಕೊಂಡಿರಲಿಲ್ಲ. ಯಾಕೆಂದರೆ, ಅಲ್ಲಿಯೂ ದಂಧೆಕೋರರ ಸಂಪರ್ಕ ಸಾಧಿಸಿ ನಕಲಿ ಡೆಬಿಟ್ ಕ್ರೆಡಿಟ್ ಕಾರ್ಡುಗಳನ್ನು ತಯಾರಿಸುವ ಹೈಟೆಕ್ ವಿದ್ಯೆಯನ್ನು ಕಲಿತುಕೊಂಡಿದ್ದ. ಅದಾಗಿ ತಿಂಗಳ ನಂತರ ಮತ್ತೆ ಭಾರತಕ್ಕೆ ಮರಳಿದ ಮನೋಜ್ ಆರೇಳು ತಿಂಗಳಲ್ಲಿಯೇ ಮುಂಡಾಯಿಸಿದ್ದು ಏಳು ಕೋಟಿಗೂ ಹೆಚ್ಚು ಹಣ!
ಬಹುಶಃ ಬೆಂಗಳೂರಿನಲ್ಲಿ ಇವನನ್ನು ಬಂಧಿಸಿದ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ ಜೈಲಿಗಟ್ಟಿದ್ದರೆ ಈತ ಈ ಪರಿ ಕಿರಾತಕನಾಗಲು ಸಾಧ್ಯವಿರುತ್ತಿರಲಿಲ್ಲ. ಈವತ್ತು ಪರಿಸ್ಥಿತಿ ಹೇಗಿದೆಯೆಂದರೆ, ಇವನಿಂದಲೇ ಇಡೀ ದೇಶದ ಬ್ಯಾಂಕಿಗ್ ವ್ಯವಸ್ಥೆ ಅದುರಿ ಹೋಗಿದೆ. ಇವನ ಹೆಂಡತಿಯನ್ನು ಎಳೆ ತಂದು ವಿಚಾರಣೆ ನಡೆಸಿದರೂ ಕೂಡಾ ಮನೋಜ್ನನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಈತ ಶ್ರೀಲಂಕಾದ ದಂಧೆಕೋರ ತಮಿಳರ ಸಾಮ್ರಾಜ್ಯದಲ್ಲಿ ಹಾಯಾಗಿದ್ದಾನೆ. ಅಲ್ಲಿಂದಲೇ ವಂಚನೆಯನ್ನೂ ನಡೆಸುತ್ತಿದ್ದಾನೆ. ಒಂದು ವೇಳೆ ಭಾರತೀಯ ಪೊಲೀಸರು ಆ ದೇಶಕ್ಕೆ ನುಗ್ಗಿ ಬಂಧಿಸಲು ನೋಡಿದರೂ ಅವರಲ್ಲಿ ಕಾಲೂರುವ ಮುನ್ನವೇ ಮನೋಜ್ ಬೇರೆ ದೇಶಕ್ಕೆ ಕಾಲ್ಕಿತ್ತಿರುತ್ತಾನೆ. ಕ್ರಿಮಿನಲ್ಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕದಿದ್ದರೆ ಅವರೆಂಥಾ ಅನಾಹುತಕಾರಿಗಳಾಗಿ ಬದಲಾಗುತ್ತಾರೆಂಬುದಕ್ಕೆ ಮನೋಜ್ಗಿಂತ ಬೇರೆ ಉದಾಹರಣೆ ಬೇಕಿಲ್ಲ!