Vijay Deverakonda: ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್(Mrunal Takoor) ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಫ್ಯಾಮಿಲಿ ಸ್ಟಾರ್’(Family Star). ಏಪ್ರಿಲ್ 5ರಂದು ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಮಾಯಿ ಮಾಡುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ನಿರ್ಮಾಪಕ ದಿಲ್ ರಾಜು, ವಿಜಯ್ ದೇವರಕೊಂಡ ಪ್ರಮೋಷನ್ ಮಾಡಿದ ರೀತಿ ಕಂಡು ಗೀತಾ ಗೋವಿಂದಂ ರೀತಿ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತೆ ಎಂದು ಟಿಟೌನ್ ವಿತರಕರು ಸಿನಿಮಾಗಾಗಿ ಮುಗಿ ಬಿದ್ದಿದ್ರು. ಆದ್ರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ.
ವಿಜಯ್ ದೇವರಕೊಂಡ(Vijay Deverakonda) ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡೋದ್ರಲ್ಲಿ ವಿಫಲವಾಗಿದೆ. ಮತ್ತೆ ಸೋಲಿನ ಕಹಿ ಉಂಡಿರುವ ವಿಜಯ್ ಸಂಭಾವನೆ ಹಿಂತಿರುಗಿಸುವ ಹಂತಕ್ಕೆ ತಲುಪಿದ್ದಾರೆ. ಹೌದು, ಟಾಲಿವುಡ್ ಮೂಲಗಳ ಪ್ರಕಾರ ಸಿನಿಮಾ ವಿತರಕರು ನಿರ್ಮಾಪಕ ದಿಲ್ ರಾಜು ಹಾಗೂ ವಿಜಯ ದೇವರಕೊಂಡ ಭೇಟಿ ಮಾಡಿ ಸಿನಿಮಾದಿಂದ ಆದ ನಷ್ಟ ಭರಿಸುವಂತೆ ಅವಲತ್ತುಕೊಂಡಿದ್ದಾರಂತೆ. ಇದ್ರಿಂದ ವಿಜಯ್ ತಮ್ಮ ಸಂಭಾವನೆಯ ಸ್ವಲ್ಪ ಮೊತ್ತವನ್ನು ಹಿಂತಿರುಗಿಸಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
‘ಫ್ಯಾಮಿಲಿ ಸ್ಟಾರ್’(Family Star) ಬಝ್ ಕಂಡು ಟಾಲಿವುಡ್ ಸಿನಿಮಂದಿ ಕೂಡ ವಿಜಯ ದೇವರಕೊಂಡ(Vijay Deverakonda) ಕಂಬ್ಯಾಕ್ ಮಾಡ್ತಾರೆ ಅಂದುಕೊಂಡಿದ್ರು. ಆದ್ರೆ ಆ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ಸೆನ್ಸೇಶನಲ್ ಸ್ಟಾರ್ ಸಿನಿಮಾ ಹಾಕಿದ ಬಂಡವಾಳವನ್ನೂ ತೆಗೆಯೋದ್ರಲ್ಲಿ ಸೋತಿದೆ. ಪರಿಣಾಮ ಮತ್ತೊಂದು ಸಿನಿಮಾ ಸೋಲು ವಿಜಯ್ ಖಾತೆಗೆ ಜಮೆಯಾಗಿದೆ. ಡಿಯರ್ ಕಾಮ್ರೇಡ್, ಟ್ಯಾಕ್ಸಿವಾಲ, ಲೈಗರ್, ವರ್ಲ್ಡ್ ಫೇಮಸ್ ಲವರ್ ನಂತರ ಫ್ಯಾಮಿಲಿ ಸ್ಟಾರ್ ಸಿನಿಮಾ ಕೂಡ ನೆಲಕಚ್ಚಿದೆ.