ಬಾಲಿವುಡ್ ಬ್ಯೂಟಿ, ನಟಿ ಇಲಿಯಾನಾ ಡಿಕ್ರೂಸ್ ತಾಯಿಯಾಗ್ತಿರೋದು ಗೊತ್ತಿರೋ ವಿಚಾರ. ಆಗಾಗ ಬೇಬಿ ಬಂಪ್ ಪಿಕ್ಚರ್ ಶೇರ್ ಮಾಡ್ತಾ ಮಗುವಿನ ಕ್ರೇಜಿ ಮೂವ್ ಮೆಂಟ್ಸ್ ಬಗ್ಗೆ ಬರೆದುಕೊಳ್ಳುವ ನಟಿ, ತಮ್ಮ ಪ್ರತೀ ಖುಷಿ ಕ್ಷಣವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಾನೇ ಇರ್ತಾರೆ.
ಈ ಭಾರಿ ಇಲಿಯಾನ ಶೇರ್ ಮಾಡಿರೋ ಬೇಬಿ ಬಂಪ್ ಫೋಟೋಗಳನ್ನ ನೋಡಿದ ಅಭಿಮಾನಿಗಳು, ಹೊಟ್ಟೆಯಲ್ಲಿರುವ ಮಗು ಹೆಣ್ಣೋ ? ಗಂಡೋ ಎಂಬ ಚರ್ಚೆ ಮಾಡ್ತಿದ್ದಾರೆ. ಈ ಹಿಂದೆ ಇಲಿಯಾನಾ ಡಿಕ್ರೂಸ್ ತಮ್ಮ ಬೇಬಿ ಬಂಪ್ ಫೋಟೋ ಶೇರ್ ಮಾಡಿಕೊಂಡಾಗ ಮಗುವಿನ ತಂದೆ ಯಾರು ಅನ್ನೋ ಪ್ರಶ್ನೆ ಇತ್ತು. ಅದಕ್ಕೆ ಇನ್ನೂ ಉತ್ತರ ಕೊಡದೇ ಸೀಕ್ರೆಟ್ ಆಗಿಯೇ ಉಳಿಸಿಕೊಂಡಿದ್ದಾರೆ.
ಇಲಿಯಾನಾ ಡಿಕ್ರೂಸ್ ಹಂಚಿಕೊಂಡ ಈಗೀನ ಫೋಟೋವನ್ನ ನೋಡಿದ ಅನೇಕರು ಒಳ್ಳೆ ಮಾತುಗಳನ್ನೆ ಆಡಿದ್ದಾರೆ. ಇಲಿಯಾನಾ ಡಿಕ್ರೂಸ್ ಮಗು ಯಾವುದು ಅನ್ನೊ ಗೆಸ್ಸಿಂಗ್ ಶುರು ಆಗಿದ್ದು, ಬಹಳ ಜೋರಾಗೀನೆ ಕಮೆಂಟ್ ಗಳ ಮೂಲಕ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇಲಿಯಾನಾ ಶೇರ್ ಮಾಡಿರೋ ಆ ಒಂದು ಫೋಟೋ ನೋಡಿರೋರು ಇಲಿಯಾನ ಹೆಣ್ಣು ಮಗುವಿಗೆ ಜನ್ಮ ಕೊಡ್ತಾರೆ ಅಂತಲೇ ಹೇಳ್ತಿದ್ದಾರೆ. ಡೆಲಿವರಿ ಡೇಟ್ ಸಹ ಸಮೀಪಿಸುತ್ತಿದ್ದು ಯಾವ ಗೆಸ್ ಸರಿಯಾಗಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ.
ಸದ್ಯ ಅಮ್ಮನಾಗ್ತಿರೋ ಸಂಭ್ರಮದಲ್ಲಿರೋ ನಟಿ ಇಲಿಯಾನಾ ಡಿಕ್ರೂಸ್, ಒಂದಷ್ಟು ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರಂತೆ. ಈಗಷ್ಟೇ Unfair & Lovely ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. Lovers ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.