Allu Arjun: ಸ್ಟಾರ್ ಪಟ್ಟ ಸಿಗುತ್ತಿದ್ದಂತೆ ನಟ-ನಟಿಯರು ಆಚೆ ಬರೋದು ಸಿಕ್ಕಾಪಟ್ಟೆ ಕಷ್ಟ. ಫ್ಯಾನ್ಸ್ ದುಂಬಾಲು ಬಿದ್ದು ಫೋಟೋಗೆ ಮುಗಿ ಬೀಳುತ್ತಾರೆ. ರಸ್ತೆ ಅಟಗಟ್ಟಿಯೋ, ಗುಂಪಾಗಿ ಬಂದೋ ನೋಡಲು ಮುಗಿ ಬೀಳುತ್ತಾರೆ. ಇದ್ರಿಂದ ಬೇರೆ ಜನರಿಗೂ ಸಮಸ್ಯೆ ಆಗುತ್ತೆ. ರಕ್ಷಣೆ ಬೇಕಾಗುತ್ತೆ. ಇದೆಲ್ಲದರಿಂದ ನಾರ್ಮಲ್ ಆಗಿ ಸುತ್ತಾಡೋದು ಕನಸಿನ ಮಾತಾಗಿರುತ್ತೆ. ಅಂತದ್ದರಲ್ಲಿ ಎಲ್ಲರ ಕಣ್ತಪ್ಪಿಸಿ ತಮಗಿಷ್ಟ ಬಂದ ಜಾಗದಲ್ಲಿ, ತಮಗಿಷ್ಟವಾದ ಊಟವನ್ನು ಸವಿಯೋದರ ಮಜವೇ ಬೇರೆ. ಆ ಮಜವಾದ ಅನುಭವವನ್ನು ನಟ ಅಲ್ಲು ಅರ್ಜುನ್(Allu Arjun) ದಂಪತಿಗಳು ಅನುಭವಿಸಿದ್ದಾರೆ.
ಪುಷ್ಪಾ(Pushpa) ಸಿನಿಮಾ ಮೂಲಕ ಟಾಲಿವುಡ್ ನಟ ಅಲ್ಲು ಅರ್ಜುನ್(Allu Arjun) ಖ್ಯಾತಿ ಎಲ್ಲೆಡೆ ಹಬ್ಬಿದೆ. ಪುಷ್ಪ ಸೀಕ್ವೆಲ್ ಮೂಲಕ ದೊಡ್ಡ ಮಟ್ಟದಲ್ಲಿ ವರ್ಲ್ಡ್ ಸಿನಿಪ್ರಿಯರ ಮನಸೂರೆಗೊಳ್ಳಲು ಅಲ್ಲು ಅರ್ಜುನ್ ರೆಡಿಯಾಗಿದ್ದಾರೆ. ಖ್ಯಾತಿ ಹೆಚ್ಚುತ್ತಿದ್ದಂತೆ, ಅಲ್ಲು ಅರ್ಜುನ್ ಫ್ಯಾನ್ಸ್ ಬಳಗ ಕೂಡ ದೊಡ್ಡದಾಗಿದ್ದು, ಹೋದಲ್ಲಿ ಬಂದಲ್ಲೀ ಫಾಲೋ ಮಾಡೋಕೆ ಶುರುವಿಟ್ಟಿದ್ದಾರೆ. ಇದೀಗ ಅಲ್ಲು ದಂಪತಿಗಳಿಬ್ಬರು ಫ್ಯಾನ್ಸ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.
ಅಲ್ಲು ಅರ್ಜುನ್(Allu Arjun) ಹಾಗೂ ಸ್ನೇಹ ರೆಡ್ಡಿ ದಂಪತಿಗಳಿಬ್ಬರು ಬ್ಯುಸಿ ಶೆಡ್ಯೂಲ್ ನಡುವೆಯೂ ಒಟ್ಟಿಗೆ ಸಮಯ ಕಳೆಯಲು ಹೊರಟಿದ್ದಾರೆ. ಹಾಗಂತ ಈ ಜೋಡಿ ರೆಸ್ಟೋರೆಂಟ್ಗೋ, ಫೈವ್ ಸ್ಟಾರ್ ಹೋಟೆಲ್ಗೋ, ಫ್ಲೈಟ್ ಹತ್ತಿ ದೂರದ ದೇಶಕ್ಕೋ ಹೋಗಿಲ್ಲ. ಇಲ್ಲೆ ತಮ್ಮೂರಲ್ಲೇ ಇರುವ ಹೈದ್ರಬಾದ್ನ ಡಾಬಾವೊಂದಕ್ಕೆ ಹೋಗಿದ್ದಾರೆ ಅಲ್ಲಿರುವ ಊಟವನ್ನೇ ಸವಿದು ಇಬ್ಬರು ಎಂಜಾಯ್ ಮಾಡಿದ್ದಾರೆ. ದಂಪತಿಗಳಿಬ್ಬರು ಡಾಬದಲ್ಲಿ ಊಟ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ಟಾರ್ ದಂಪತಿಗಳ ಸಿಂಪ್ಲಿಸಿಟಿಗೆ ಫಿದಾ ಆಗಿದ್ದಾರೆ. ಹೈಫೈ ಲೈಫ್ ಸ್ಟೈಲ್ ಬಿಟ್ಟು ಯಾವುದೇ ಆಡಂಬರವಿಲ್ಲದೆ ಸಿಂಪಲ್ ಆಗಿ ಕಾಣಿಸಿಕೊಂಡ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಟಾಕ್ಗೆ ವಸ್ತುವಾಗಿದ್ದಾರೆ. ಇಬ್ಬರ ಸಿಂಪ್ಲಿಸಿಟಿಗೆ ಫಿದಾ ಆಗಿ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.