Jr.NTR: ಟಾಲಿವುಡ್ ಸ್ಟಾರ್ ನಟ, ಮ್ಯಾನ್ ಆಫ್ ಮಾಸಸ್ ಖ್ಯಾತಿಯ ಜೂ.NTR ಅಭಿಮಾನಿ ಬಳಗಕ್ಕೆ ಮೇ ತಿಂಗಳು ಬಂದ್ರೆ ಹಬ್ಬದ ವಾತಾವರಣ. ಇದಕ್ಕೆ ಕಾರಣ ‘ಆರ್‌ಆರ್‌ಆರ್'(RRR) ನಟನ ಹುಟ್ಟುಹಬ್ಬ. ಮೇ 20ರಂದು ಜೂ.NTR ಹುಟ್ಟುಹಬ್ಬವಿದೆ. ಇದೇ ಖುಷಿಯಲ್ಲಿ ಅವ್ರ ಫ್ಯಾನ್ಸ್ ಮಾಡಿರೋ ಕೆಲಸ ಪ್ರಶಂಸೆಗೆ ಪಾತ್ರವಾಗಿದೆ.
ಜೂ.NTR ಹುಟ್ಟುಹಬ್ಬ ಎರಡು ವಾರ ಇರುವಾಗಲೇ ಅಭಿಮಾನಿ ಬಳಗ ಬ್ಲಡ್ ಕ್ಯಾಂಪ್ ಆಯೋಜನೆ ಮಾಡಿದೆ. ಸುಮಾರು 300 ಜನರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ. ಥಲಸ್ಸೇಮಿಯಾ ಅನುವಂಶಿಕ ರೋಗದಿಂದ ಬಳಲುತ್ತಿರುವರಿಗೆ ನಿಯಮಿತವಾಗಿ ರಕ್ತದ ಅವಶ್ಯಕತೆ ಇದ್ದು, ಈ ಮೂಲಕ ಅದನ್ನು ಪೂರೈಸುವ ಕೆಲಸವನ್ನು ಫ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅರ್ಥಪೂರ್ಣ ಉಡುಗೊರೆ ನೀಡಿ ಗೌರವಿಸಿದ್ದಾರೆ. ಮ್ಯಾನ್ ಆಪ್ ಮಾಸಸ್ ಅಭಿಮಾನಿ ಬಳಗದ ಈ ಕೆಲಸ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
‘ಆರ್‌ಆರ್‌ಆರ್'(RRR) ಮೂಲಕ ವರ್ಲ್ಡ್ ವೈಡ್ ಫೇಮಸ್ ಆಗಿರುವ ಜೂ.NTR ಟಾಲಿವುಡ್ ಅಂಗಳದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ. ಅಕ್ಟೋಬರ್‌ನಲ್ಲಿ ‘ದೇವರ’(Devara) ಸಿನಿಮಾ ಮೂಲಕ ರಂಜಿಸಲು ರೆಡಿಯಾಗಿದ್ದಾರೆ. ಫ್ಯಾನ್ಸ್ ಕೂಡ ಸಿನಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಬರ್ತ್‌ಡೇಗೆ ಚಿತ್ರತಂಡದಿಂದ ದೇವರ ಸಿನಿಮಾದಿಂದ ಹೊಸ ಅಪ್ಡೇಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.