ಪಟಪಟಾಂತ ಅರಳು ಹುರಿದಂತೆ ಮಾತನಾಡುವ ಅನುಶ್ರೀ ಕನ್ನಡದ ಟಾಪ್ ನಿರೂಪಕಿಯರಲ್ಲಿ ಒಬ್ಬರು. ರಿಯಾಲಿಟಿ ಶೋ, ಈವೆಂಟ್ಗಳು, ಸಿನಿಮಾ ಪ್ರೀ ರಿಲೀಸ್ ಹೀಗೆ ಒಂದಿಲ್ಲೊಂದು ಕಡೆ ಸದಾ ಬ್ಯುಸಿ ಆಗಿದ್ದಾರೆ. ಕನ್ನಡದ ಜನಪ್ರಿಯ ಖಾಸಗಿ ವಾಹಿನಿ ಒಂದರಲ್ಲಿ ಸರಿಗಮಪ ಸೀಸನ್ ಸಿರೀಸ್ಗಳನ್ನು ನಡೆಸಿಕೊಟ್ಟು ಮನೆ ಮಾತಾದವರು. ಹೋದಲ್ಲಿ ಬಂದಲ್ಲಿ ಇವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ.
ಅನುಶ್ರೀ ಹೋದಲ್ಲೆಲ್ಲಾ ಅಭಿಮಾನಿಗಳಿಂದ ಹೆಚ್ಚಾಗಿ ಕೇಳಿ ಬರುವ ಪ್ರಶ್ನೆ ಮದುವೆ ಯಾವಾಗ? ಪ್ರಶ್ನೆ ಎಷ್ಟು ಸಹಜವೋ ಉತ್ತರವೂ ಅಷ್ಟೇ ಸಹಜವಾಗಿ ಕೊಡುತ್ತಿದ್ದರು. ಇದೀಗ ಅಭಿಮಾನಿಗಳಿಂದ ಮದುವೆ ಹೊರತುಪಡಿಸಿ ಬೇರೆ ಪ್ರಶ್ನೆ ಬಂದಿದೆ. ಅದೇನಪ್ಪಾ ಅಂತೀರಾ? ಪ್ರಶ್ನೆ ಹಿನ್ನಲ ಸ್ವಲ್ಪ ನೋಡಿ ಬಿಡೋಣ.
ಅನುಶ್ರೀ ಆಗಾಗ ಇನ್ಸ್ಟಾಗ್ರಾಂ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡುತ್ತಿರುತ್ತಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡದ ಜೊತೆ ಇನ್ಸ್ಟಾಗ್ರಾಂ ಲೈವ್ ಬಂದಿದ್ದಾರೆ. ಚಿತ್ರದ ಯಶಸ್ಸಿನ ಬಗ್ಗೆ ಹೊಗಳುತ್ತಾ, ಭಾಗವಹಿಸಿದ ಎಲ್ಲಾ ಕಲಾವಿದರನ್ನು ಮಾತನಾಡಿಸಿದ್ದಾರೆ. ಎಲ್ಲರೂ ಅವರವರ ಅನುಭವ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಕೆಲವರು ಸಿನಿಮಾ ಬಗ್ಗೆ ಮಾತನಾಡಿದರೆ, ಪ್ರಶ್ನೆ ಕೇಳಿದರೆ, ಇನ್ನು ಕೆಲವರು ಅನುಶ್ರೀ ಬಗ್ಗೆ ಕೇಳಿದ್ದಾರೆ.
ಇದೇ ವೇಳೆ ಅನುಶ್ರೀ ಅವರು ಸಿನಿಮಾದಲ್ಲಿ ನಟಿಸುವ ಬಗ್ಗೆ ಫ್ಯಾನ್ ಒಬ್ಬರು ಪ್ರಶ್ನಿಸಿದ್ದಾರೆ. ಅನುಶ್ರೀ ಮೇಡಂ ನೀವು ಮತ್ತೆ ಯಾವಾಗ ಸಿನಿಮಾ ಮಾಡುತ್ತೀರಿ? ನಿಮ್ಮ ನಟನೆ ಡಾನ್ಸ್, ನೀವು ಮಾತಾಡುವ ಶೈಲಿ ನಂಗೆ ತುಂಬಾ ಇಷ್ಟ. ನಿಮ್ಮ ಕನಸು ನನಸಾಗಲಿ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಎಂದಿದ್ದಾರೆ. ಪ್ರತಿಸಲ ಅನುಶ್ರೀ ಅವರಿಗೂ ಈ ಪ್ರಶ್ನೆ ಎದುರಾಗುತ್ತದೆ. ಅನುಶ್ರೀಯವರು ಸಿನಿಮಾದಲ್ಲಿ ನಟಿಸಿದ್ದು ಕಡಿಮೆ. ಆ್ಯಂಕರ್ ಆಗಿಯೇ ಸಕತ್ ಫೇಮಸ್ ಆದವರು. ಆದ್ದರಿಂದ ಅವರ ಫ್ಯಾನ್ಸ್ ಅವರನ್ನು ಸಿನಿಮಾದಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ.