ನಟ ವಿನೋದ್ ಪ್ರಭಾಕರ್ ಶೀಘ್ರದಲ್ಲಿಯೇ ‘ಫೈಟರ್’ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅನೇಕರಿಗೆ ಗೊತ್ತಿರುವಂತೆ ವಿನೋದ್ ಪ್ರಭಾಕರ್ ‘ಫೈಟರ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಆ ಸಿನಿಮಾದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಈಗ ‘ಫೈಟರ್’ ಬಿಡುಗಡೆ ಹಂತಕ್ಕೆೆ ಬಂದಿದೆ.
ಇದೀಗ ನಿಧಾನವಾಗಿ ‘ಫೈಟರ್’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮೊದಲ ಹಂತದಲ್ಲಿ ‘ಫೈಟರ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಇದೇ ಆಗಸ್ಟ್ 27ರಂದು ‘ಫೈಟರ್’ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಲಿದ್ದು, ಸಿನಿಮಾದ ಫಸ್ಟ್ ಝಲಕ್ ಅನ್ನು ಪ್ರೇಕ್ಷಕರಿಗೆ ನೀಡಲು ಚಿತ್ರತಂಡ ಕಾತುರದಲ್ಲಿದೆ.
ಔಟ್ ಅಂಡ್ ಔಟ್ ಆ್ಯಕ್ಷನ್ ಕಥಾಹಂದರ ಹೊಂದಿರುವ ‘ಫೈಟರ್’ ಸಿನಿಮಾಕ್ಕೆ ನೂತನ್ ಉಮೇಶ್ ನಿರ್ದೇಶನವಿದೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ‘ಫೈಟರ್’ನಲ್ಲಿ ವಿನೋದ್ ಪ್ರಭಾಕರ್ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾಾರೆ. ಇಲ್ಲಿ ಅವರ ಬಾಡಿ ಲಾಂಗ್ವೇಜ್, ಮ್ಯಾಾನರಿಸಂ ಎಲ್ಲವೂ ವಿಭಿನ್ನವಾಗಿದೆ ಎನ್ನುವುದು ಚಿತ್ರತಂಡದ ಒಕ್ಕೊರಲ ಮಾತು. ‘ಆಕಾಶ್ ಎಂಟರ್ಪ್ರೈಸಸ್’ ಬ್ಯಾನರಿನಡಿ ಕೆ. ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ ‘ಫೈಟರ್’ ಸಿನಿಮಾಕ್ಕೆ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ‘ಫೈಟರ್’ ಸಿನಿಮಾಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಇದೇ ವರ್ಷದ ಕೊನೆಯೊಳಗೆ ‘ಫೈಟರ್’ ಸಿನಿಮಾವನ್ನು ಥಿಯೇಟರಿಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.