Namratha Gowda: ನಾಗಿಣಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಖ್ಯಾತಿ ಗಳಿಸಿದ ನಟಿ ನಮ್ರತಾ ಗೌಡ(Namratha Gowda). ಬಿಗ್ ಬಾಸ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ಈಕೆ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಕಿರುತೆರೆಯಲ್ಲಿ ಮಿಂಚುತ್ತಿರುವ ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್, ನಯಾ ಫೋಟೋಶುಟ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಚಿತ್ರರಂಗದ ಬಗ್ಗೆ ಕಹಿ ಸತ್ಯ ಹಂಚಿಕೊಂಡು ಸುದ್ದಿಯಲ್ಲಿದ್ದಾರೆ.
ತಮ್ಮ ಸ್ನೇಹಿತರ ಬಳಗದ ಬಗ್ಗೆ ಮಾತನಾಡಿರುವ ನಮ್ರತಾ(Namratha Gowda) ನನ್ನ ಫ್ರೆಂಡ್ ಸರ್ಕಲ್ ತುಂಬಾ ಚಿಕ್ಕದು. ಆರೇಳು ಜನ ಸ್ನೇಹಿತರಿದ್ದಾರೆ. ಆದ್ರೆ ಹಾಯ್ ಬಾಯ್ ಅನ್ನೋ ಸ್ನೇಹಿತರು ತುಂಬಾ ಜನ ಇದ್ದಾರೆ. ಚಿತ್ರರಂಗದಲ್ಲಿ ಸ್ನೇಹಕ್ಕೆ ಜಾಗವಿಲ್ಲ ಎಂದಿದ್ದಾರೆ. ನನ್ನ ಕಾಂಪೀಟೇಟರ್ ನೋಡಿದ್ರೆ ನನಗೆ ಹೊಟ್ಟೆ ಕಿಚ್ಚು ಆಗೋದಿಲ್ಲ. ಇನ್‌ಸೆಕ್ಯೂರ್ ಆಗೋದಿಲ್ಲ. ಆದರೆ ನನ್ನ ರೀತಿಯೇ ಎಲ್ಲರಿಗೂ ಅನಿಸೋದಿಲ್ಲ. ಆದ್ರಿಂದ ಇಲ್ಲಿ ಸ್ನೇಹ ಮಾಡಿದ್ರೆ ಬೆಲೆ ಇಲ್ಲ ಎಂದಿದ್ದಾರೆ.
ಯಾವುದೇ ಇಂಡಸ್ಟ್ರಿಯಲ್ಲೂ ಕೂಡ ತುಳಿದು ಮೇಲೆ ಬರುವವರು ಇದ್ದೇ ಇರ್ತಾರೆ ಆದ್ರೆ ಚಿತ್ರರಂಗದಲ್ಲಿ ಇದರ ಪ್ರಮಾಣ ಹೆಚ್ಚಿದೆ. ಇದು ಹಲವರ ಆರೋಪ ಕೂಡ ಹೌದು. ಈ ರೀತಿ ಅನುಭವ ನನಗೂ ಆಗಿದೆ. ನನ್ನನ್ನು ತುಳಿಯಲು ಯತ್ನಿಸಿದ್ದಾರೆ. ನಿಜವಾಗಿ ನನ್ನನ್ನು ಯಾರೂ ಬೆಂಬಲಿಸುತ್ತಾರೋ ಅವರ ಜೊತೆ ಇರಲು ಬಯಸುತ್ತೇನೆ ಎಂದಿದ್ದಾರೆ ನಮ್ರತಾ ಗೌಡ(Namratha Gowda).