ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ `ಕಿಚ್ಚ-46′ ಸಿನಿಮಾದಲ್ಲಿ ಕಲಾವಿದರು ಹಾಗೂ ತಂತ್ರಜ್ಞರು ಸೇರಿದಂತೆ ಶೇಕಡ 80ರಷ್ಟು ಮಂದಿ ಕನ್ನಡಿಗರು ಕೆಲಸ ಮಾಡ್ತಿದ್ದಾರೆ ಎನ್ನುವ ವಿಚಾರ ಹೊರಬಿದ್ದಿತ್ತು. ಆದರೆ, ಯಾರ್ಯಾರು ಕೋಟಿಗೊಬ್ಬನ ಅಪ್‍ಕಮ್ಮಿಂಗ್ ಪಿಕ್ಚರ್‍ನಲ್ಲಿ ಕಾಣಿಸಿಕೊಳ್ತಿದ್ದಾರೆ, ಯಾರ್ಯಾರು ಮಾಣಿಕ್ಯನ ಮುಂದಿನ ಸಿನಿಮಾಗಾಗಿ ಬೆವರು ಸುರಿಸುತ್ತಿದ್ದಾರೆನ್ನುವುದು ತಿಳಿದಿರಲಿಲ್ಲ. ಆದ್ರೀಗ, `ಕಿಚ್ಚ-46′ ಕಣದಿಂದ ಅದೊಂದು ಫೋಟೋ ಹೊರಬಿದ್ದಿದೆ. ಉಗ್ರಂ ಮಂಜು, ಕಾಮಿಡಿ ಖಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ವಿಜಯ್ ಚೆಂಡೂರ್, ಸುಕೃತ ವಾಗ್ಲೆ, ಸಂಯುಕ್ತ ಬೆಳವಾಡಿ, ಶ್ರೀಶಾಂತ್, ಕೆಜಿಎಫ್ ಆರ್ಟ್ ಡೈರೆಕ್ಟರ್ ಶಿವುಕುಮಾರ್ ಒಳಗೊಂಡಂತೆ ಇನ್ನೂ ಅನೇಕ ಕನ್ನಡಿಗರಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ, ಇವ್ರಷ್ಟೇ ಅಲ್ಲ ಇನ್ನೂ ಅನೇಕರು ಕಿಚ್ಚ-46ಗಾಗಿ ದುಡಿಯುತ್ತಿದ್ದಾರೆ. ಆದರೆ, ತೇಲಿಬಂದಿರೋ ಫೋಟೋದಲ್ಲಿ ಇವ್ರಿಷ್ಟು ಮಂದಿ ಕಾಣಸಿಕ್ಕಿದ್ದಾರೆ. ಅಂದ್ಹಾಗೇ, ಈ ಫೋಟೋ ನೋಡಿದರೆ ಗೊತ್ತಾಗುತ್ತೆ ಕಿಚ್ಚನಿಗೆ ಕನ್ನಡ ಕಲಾವಿದರ ಮೇಲಿರುವ ಪ್ರೀತಿ ಎಂತಹದ್ದು ಅಂತ. ತನ್ನೊಟ್ಟಿಗೆ ನಮ್ಮ ನೆಲದ ಕಲಾವಿದರು ಬೆಳಿಬೇಕು ಅಂತ ಆಸೆಪಡುವ ಮಾಣಿಕ್ಯ, ತಮ್ಮ ಮುಂದಿನ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಕನ್ನಡ ಕಲಾವಿದರಿಗೆ ಮೊದಲ ಆದ್ಯತೆ ಕೊಟ್ಟಿರುವುದು ಖುಷಿ ಹಾಗೂ ಹೆಮ್ಮೆಯ ವಿಚಾರ. ಅಂದ್ಹಾಗೇ, ಕಿಚ್ಚ-46 ತಮಿಳು ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡ್ತಿರುವಂತಹ ಚಿತ್ರ. ತಮಿಳು ನೆಲದಲ್ಲೇ ಚಿತ್ರೀಕರಣಗೊಳ್ಳುತ್ತಿದ್ದು, ಕನ್ನಡ ಕಲಾವಿದರು ಹಾಗೂ ತಂತ್ರಜ್ಞರ ಬಳಗವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಸುದೀಪ್ ತಮಿಳುನಾಡಿನಲ್ಲಿ ಬೀಡುಬಿಟ್ಟಿದ್ದಾರೆ.
ಹೌದು, ತಮಿಳುನಾಡಿನ ಮಹಾಬಲಿಪುರಂನಲ್ಲಿ `ಕಿಚ್ಚ-46′ ಸಿನಿಮಾದ ಶೂಟಿಂಗ್ ನಡೀತಿದೆ. 65 ದಿನಗಳ ಫಸ್ಟ್ ಷೆಡ್ಯೂಲ್ಡ್ ಪ್ಲ್ಯಾನ್ ಮಾಡಲಾಗಿದ್ದು, ಸೆಪ್ಟೆಂಬರ್ ಕೊನೆಯ ವಾರದೊತ್ತಿಗೆ ಕುಂಬಳಕಾಯಿ ಹೊಡೆಯೋಕೆ ಚಿತ್ರತಂಡ ನಿರ್ಧರಿಸಿದೆ. ಟೈಟಲ್ ಇನ್ನೂ ಫಿಕ್ಸ್ ಆಗದ ಈ ಸಿನೆಮಾವನ್ನ `ಕಿಚ್ಚ-46′ ಹೆಸರಿನಲ್ಲಿ ಕರೆಯಲಾಗ್ತಿದ್ದು,ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಶನ್ಸ್’ ಮೂಲಕ ಕಲೈಪುಲಿ ಎಸ್. ಥಾನು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಸಿನಿಮಾಗಿದೆ.
ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇದೇ ವರ್ಷ `ಕಿಚ್ಚ-46′ ತೆರೆಗಪ್ಪಳಿಸಲಿದೆ. ಅಚ್ಚರಿ ಅಂದರೆ ಕಿಚ್ಚನ 50ನೇ ಸಿನಿಮಾವೂ ಆಲ್‍ರೆಡಿ ಲಾಕ್ ಆಗಿದೆ. ಸದ್ಯ 46ನೇ ಸಿನಿಮಾದಲ್ಲಿ ಬ್ಯುಸಿಯಾಗಿರೋ ಬಾದ್‍ಷಾ, 47,48,49,50 ಸಿನಿಮಾವರೆಗೂ ಕಾಲ್‍ಶೀಟ್ ಕೊಟ್ಟಿದ್ದಾರೆ. ಈಗಾಗಲೇ ಕಥೆ ಕೇಳಿ ಆ ಎಲ್ಲಾ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರಂತೆ. ಇನ್ಮೇಲೆ ಒಂದಾದ ನಂತರ ಮತ್ತೊಂದು ಸಿನಿಮಾದಲ್ಲಿ ಸುದೀಪ್ ತೊಡಗಿಸಿಕೊಳ್ಳಲಿದ್ದಾರೆ.