Ibrahim Ali Khan: ಬಿಟೌನ್‌ನಲ್ಲಿ ಸ್ಟಾರ್ ನಟರ ಮಕ್ಕಳು ಒಬ್ಬೊಬ್ಬರಾಗಿ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಶಾರೂಕ್ ಮಗಳು ಸುಹಾನ ಲಾಂಚ್ ಮಾಡಲು ತುದಿಗಾಲಲ್ಲಿ ನಿಂತಿದ್ರೆ, ಇತ್ತ ಸೈಫ್ ಅಲಿ ಖಾನ್(Saif Ali Khan) ಪುತ್ರ ಇಬ್ರಾಹಿಂ ಅಲಿ ಖಾನ್(Ibrahim Ali Khan) ಹೀರೋ ಆಗಿ ಲಾಂಚ್ ಮಾಡಲು ಸಕಲ ರೀತಿಯಲ್ಲೂ ಸಿದ್ದರಾಗಿದ್ದಾರೆ. ಲೇಟೆಸ್ಟ್ ವಿಚಾರ ಏನಪ್ಪಾ ಅಂದ್ರೆ ಮೊದಲ ಚಿತ್ರ ಸರ್ಜಾಮೀನ್(Sarzameen) ಶೂಟಿಂಗ್ ಮುಗಿಸಿರುವ ಸೈಫ್ ಪುತ್ರ ಮತ್ತೊಂದು ಸಿನಿಮಾಗೆ ರೆಡಿಯಾಗಿದ್ದಾರೆ.
ಈಗಾಗಲೇ ಸೈಫ್ ಪುತ್ರಿ ಸಾರಾ ಅಲಿ ಖಾನ್(Sara Ali Khan) ನಾಯಕಿಯಾಗಿ ಬಿಟೌನ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಇದೀಗ ಪುತ್ರ ಇಬ್ರಾಹಿಂ ಸರದಿ. ನಾಯಕ ನಟನಾಗಲು ಸಕಲ ರೀತಿಯಲ್ಲೂ ಸಜ್ಜಾಗಿರುವ ಸೈಫ್ ಬಿಟೌನ್ ಸ್ಟಾರ್ ನಿರ್ದೇಶಕರ ಸಿನಿಮಾದಲ್ಲಿ ತೆರೆ ಹಿಂದೆಯೂ ದುಡಿದಿದ್ದಾರೆ. ಇದೀಗ ತೆರೆ ಮೇಲೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಮಿಂಚುವ ಕಾಲ ಕೂಡಿ ಬಂದಿದೆ. ಇಬ್ರಾಹಿಂ(Ibrahim Ali Khan) ಮುಂದಿನ ಚಿತ್ರದಲ್ಲಿ ಜಾನ್ವಿ ಕಪೂರ್(Janhvi Kapoor) ಹಾಗೂ ಮಹಿಮಾ ಮಕ್ವಾನ(Mahima Makwana) ಇಬ್ಬರ ಜೊತೆ ತೆರೆಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ.
ಟ್ರಾಯಂಗಲ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ಶಶಾಂಕ್ ಕೈತಾನ್ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾ ಕಥೆ, ಚಿತ್ರದ ತಾರಾಬಳಗದ ಆಯ್ಕೆ, ಟೈಟಲ್ ಎಲ್ಲವೂ ಆರಂಭದ ಹಂತದಲ್ಲಿದ್ದು ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಕರಣ್ ಜೋಹಾರ್(Karan Johar) ನಿರ್ಮಾಣದಲ್ಲಿ ಇಬ್ರಾಹಿಂ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಸರ್ಜಾಮೀನ್(Sarzameen) ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.