ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ, ಶ್ರೀನಿ ನಿರ್ದೇಶನದ ಹೈವೋಲ್ಟೇಜ್ ಆ್ಯಕ್ಷನ್-ಥ್ರಿಲ್ಲರ್ `ಘೋಸ್ಟ್’ ಚಿತ್ರ ನಿನ್ನೆಯಷ್ಟೇ ತೆರೆಕಂಡಿದೆ. ಪ್ಯಾನ್ ಇಂಡಿಯಾ ತುಂಬೆಲ್ಲಾ ಅದ್ದೂರಿಯಾಗಿ ತೆರೆಗಪ್ಪಳಿಸಿದ `ಘೋಸ್ಟ್’ ಚಿತ್ರಕ್ಕೆ ಗ್ರ್ಯಾಂಡ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದೇ ಖುಷಿಯಲ್ಲಿ ನಿರ್ದೇಶಕ ಶ್ರೀನಿಯವರು ಗುಡ್ನ್ಯೂಸ್ ಕೊಟ್ಟಿದ್ದಾರೆ. `ಘೋಸ್ಟ್ 2.0′ ಬಗ್ಗೆ ದೊಡ್ಡದಾಗಿ ಸಿಗ್ನಲ್ ಕೊಡುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಘೋಸ್ಟ್ ಪಾರ್ಟ್2 ಬರುತ್ತೆ ಅನ್ನೋದು ಹೊಸ ಸುದ್ದಿಯೇನಲ್ಲ. ಯಾಕಂದ್ರೆ, ಚಿತ್ರ ಬಿಡುಗಡೆಗೂ ಮೊದಲೇ ಡೈರೆಕ್ಟರ್ ಶ್ರೀನಿಯವರು, ಪ್ರೊಡ್ಯೂಸರ್ ಸಂದೇಶ್ ನಾಗರಾಜ್, ಹಾಗೂ ಶಿವಣ್ಣ ಕೂಡ ಹೇಳಿಕೊಂಡಿದ್ದರು. ಕೊನೆಗೆ ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಸೀಕ್ವೆಲ್ ಸುಳಿವು ನೀಡಿದ್ದರು. ಇದೀಗ `ಘೋಸ್ಟ್’ ಡೈರೆಕ್ಟರ್ ಪಾರ್ಟ್-2 ಕುರಿತು ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಅಂದ್ಹಾಗೇ, ಘೋಸ್ಟ್ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರಿಗೆ ಒಂದಿಷ್ಟು ಅಂಶಗಳು ಕಾಡೋದಕ್ಕೆ ಶುರುಮಾಡಿವೆ. ದಳವಾಯಿ ಬದುಕಿದ್ದಾನ? ಅಂಡರ್ ಪಾಸ್ ಒಳಗಡೆ ಕಾರ್ಸ್, ಬೈಕ್ಸ್ ಹೆಂಗ್ ಬಂತು? ಶಿವಣ್ಣ ಸ್ಟ್ಯಾಚು ಒಳಗಡೆ ಹೆಂಗ್ ಹೋದ್ರು ?ಬೋಟ್ಸ್ ಆಪರೇಟ್ ಮಾಡ್ತಿದ್ದೋರು ಯಾರು?ದಳವಾಯಿ ಮಗ ಯಾರು? ಹೀಗೆ ಅನೇಕ ಪ್ರಶ್ನೆಗಳು ಸಿನಿಮಾ ಪ್ರೇಮಿಗಳನ್ನ ಚಿಂತನೆಯ ಓರೆಗಚ್ಚಿವೆ. ಅದಕ್ಕೆ ಉತ್ತರ ಸಿಗ್ಬೇಕು ಅಂದರೆ `ಘೋಸ್ಟ್’ ನಿರ್ದೇಶಕರು ಪಾರ್ಟ್-2 ತೆಗಿಬೇಕು. ಅಷ್ಟಕ್ಕೂ, ಯಾವಾಗ `ಘೋಸ್ಟ್’ ಸೀಕ್ವೆಲ್ಗೆ ಮುಹೂರ್ತ ಫಿಕ್ಸಾಗುತ್ತೋ ಏನೋ ಗೊತ್ತಿಲ್ಲ. ಆದರೆ ಘೋಸ್ಟ್ 2.0ಗೆ ಅದರದ್ದೇ ಆದ ಫ್ಯಾನ್ ಬೇಸ್ ಈಗಲೇ ಕ್ರಿಯೇಟ್ ಆಗಿದೆ. ಬಿಗ್ ಡ್ಯಾಡಿ ಮೇಲೆ ನಿರೀಕ್ಷೆ ಹೆಚ್ಚಿದೆ.
ಸದ್ಯ ಶಿವಣ್ಣನ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕರಟಕ ದಮನಕ, ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಭೈರತಿ ರಣಗಲ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಿಗೂ ಹ್ಯಾಟ್ರಿಕ್ ಹೀರೋ ಕಾಲ್ಶೀಟ್ ಕೊಡ್ತಿದ್ದಾರೆ. ಟಾಲಿವುಡ್ ಹೀರೋ ವಿಷ್ಣು ಮಂಚು ಡ್ರೀಮ್ ಪ್ರಾಜೆಕ್ಟ್ `ಕಣ್ಣಪ್ಪ’ಗೆ ಸೆಂಚುರಿ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅತ್ತ ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮುಂದಿನ ಚಿತ್ರಕ್ಕೂ ಓಕೆ ಎಂದಿದ್ದಾರೆ. ಬಾಲಿವುಡ್ ಡೈರೆಕ್ಟರ್ ಸುದೀಪ್ತೋ ಸೇನ್ ಕೂಡ ದೊಡ್ಮನೆ ಕದ ತಟ್ಟಿ ಹೋಗಿದ್ದು, ಆ ಸಿನಿಮಾದ ಸುದ್ದಿ ಅದ್ಯಾವಾಗ ಸುನಾಮಿಯಂತೆ ಬಂದಪ್ಪಳಿಸುತ್ತೋ ಗೊತ್ತಿಲ್ಲ. ಒಟ್ನಲ್ಲಿ ಶಿವಣ್ಣ 61ರಲ್ಲೂ ಬಹುಬೇಡಿಕೆಯ ನಟರಾಗಿ ನಾಗಾಲೋಟ ಮುಂದುವರೆಸಿದ್ದಾರೆ. `ಘೋಸ್ಟ್’ ನಲ್ಲಿ ದಳವಾಯಿ ಮುದ್ದಣ್ಣ ಹಾಗೂ ಬಿಗ್ ಡ್ಯಾಡಿಯಾಗಿ ಹೊಸ ಖದರ್ ತೋರಿಸಿದ್ದಾರೆ. ಗನ್ಗಿಂತ ಚೆನ್ನಾಗಿ ಕಣ್ಣನ್ನೇ ಬಳಸಿರೋ ಮಾಸ್ ಲೀಡರ್, ಪ್ಯಾನ್ ಇಂಡಿಯಾ ಮಂದಿಗೆ ತನ್ನ ನಟನೆಯ ತಾಕತ್ತೇನು ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ದಾರೆ. ನೆಕ್ಸ್ಟ್ ಪ್ಯಾನ್ ವಲ್ರ್ಡ್ ಟಾರ್ಗೆಟ್. ಅದು ಈಡೇರುತ್ತೆ ಅನ್ನೋದರಲ್ಲಿ ಡೌಟೇ ಬೇಡ.